Homeಮುಖಪುಟಕಾರ್ಗಿಲ್ ವಿಜಯೋತ್ಸವ ದಿನ: ಸೈನಿಕರಿಗೆ ಗೌರವ

ಕಾರ್ಗಿಲ್ ವಿಜಯೋತ್ಸವ ದಿನ: ಸೈನಿಕರಿಗೆ ಗೌರವ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಸಶಸ್ತ್ರ ಪಡೆಗಳ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಇಂದು ಕಾರ್ಗಿಲ್ ವಿಜಯೋತ್ಸವದ 21 ನೇ ವಾರ್ಷಿಕೋತ್ಸವ. ಧೈರ್ಯ, ದೇಶಪ್ರೇಮ ಮತ್ತು ಶೌರ್ಯಕ್ಕೆ ಸಾಕ್ಷಿಯಾದ, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಭಾರತೀಯ ಸೈನಿಕರಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಭಾನುವಾರ ಗೌರವ ಸಮರ್ಪಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಸಶಸ್ತ್ರ ಪಡೆಗಳ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

“ಕಾರ್ಗಿಲ್ ವಿಜಯ ದಿನ ಭಾರತದ ಸ್ವಾಭಿಮಾನ, ಶೌರ್ಯ ಮತ್ತು ಅಚಲ ನಾಯಕತ್ವದ ಸಂಕೇತವಾಗಿದೆ. ಅಂತಹ ಸೈನಿಕರಿಗೆ ನಾನು ನಮಿಸುತ್ತೇನೆ. ಕಾರ್ಗಿಲ್‌ನಲ್ಲಿರುವ ಪ್ರವೇಶಿಸಲಸಾಧ್ಯವಾದ ಬೆಟ್ಟಗಳಿಂದ ಶತ್ರುಗಳನ್ನು ಓಡಿಸಿ ಅಲ್ಲಿ ಮತ್ತೆ ತ್ರಿವರ್ಣವನ್ನು ಹಾರಿಸಿದ್ದರು. ಮಾತೃಭೂಮಿಯನ್ನು ರಕ್ಷಿಸಲು ಮೀಸಲಾಗಿರುವ ಭಾರತದ ವೀರರ ಬಗ್ಗೆ ದೇಶವು ಹೆಮ್ಮೆಪಡುತ್ತದೆ” ಎಂದು ಅಮಿತ್ ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್ ವಿಜಯ್ ದಿನ “ಅನುಕರಣೀಯ ಶೌರ್ಯ ಮತ್ತು ತ್ಯಾಗದ ಭಾರತದ ಹೆಮ್ಮೆಯ ಸಂಪ್ರದಾಯದ ಆಚರಣೆಯಾಗಿದೆ” ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

“ನಮ್ಮ ಸಶಸ್ತ್ರ ಪಡೆಗಳ ಅಚಲ ಧೈರ್ಯ ಮತ್ತು ದೇಶಭಕ್ತಿಯು, ಭಾರತ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿದೆ” ಎಂದು ರಕ್ಷಣಾ ಸಚಿವರು ಪೋಸ್ಟ್ ಮಾಡಿದ್ದಾರೆ.

ಜುಲೈ 26, 1999 ರಂದು ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನವನ್ನು ಸೋಲಿಸಿತ್ತು. ಆಪರೇಷನ್ ವಿಜಯ್ ನಲ್ಲಿ ಭಾಗವಹಿಸಿದ ಸೈನಿಕರ ಹೆಮ್ಮೆ ಮತ್ತು ಶೌರ್ಯವನ್ನು ನೆನೆಯುವ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

ಭಾರತದ ನಿಯಂತ್ರಣ ರೇಖೆಯ ಎತ್ತರದ ಕಾರ್ಗಿಲ್ ವಲಯವನ್ನು ಪಾಕಿಸ್ತಾನದ ಸೈನಿಕರು ಮತ್ತು ನುಸುಳುಕೋರರು ಆಕ್ರಮಿಸಿಕೊಂಡಿದ್ದರು. ಅವರನ್ನು ಅಲ್ಲಿಂದ ತೆರವುಗೊಳಿಸಲು ಭಾರತ ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತ್ತು.

ಪರಮಾಣು-ಸಶಸ್ತ್ರ ರಾಷ್ಟ್ರಗಳ ಸೈನ್ಯವು ಮೇ ಮತ್ತು ಜುಲೈ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತು ನಿಯಂತ್ರಣ ರೇಖೆಯ ಬೇರೆ ಬೇರೆ ಕಡೆಯಲ್ಲಿ ಯುದ್ಧ ಮಾಡಿತು. ಭಾರತೀಯ ಪಡೆಗಳು ಈ ಪ್ರದೇಶವನ್ನು ಪುನಃ ಪಡೆದುಕೊಳ್ಳಲು ಸುಮಾರು ಮೂರು ತಿಂಗಳು ಬೇಕಾಯಿತು.

ಈ ಸಂಘರ್ಷದಲ್ಲಿ ಭಾರತ 527 ಸೈನಿಕರನ್ನು ಕಳೆದುಕೊಂಡಿತು.


ಇದನ್ನೂ ಓದಿ: ವಿಸ್ತರಣಾವಾದಿಗಳ ಕಾಲ ಮುಗಿದಿದೆ, ಇದು ಪ್ರಗತಿಯ ಯುಗ: ನರೇಂದ್ರ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...