Homeಅಂತರಾಷ್ಟ್ರೀಯಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ಅಮೆರಿಕಾದ ಇತಿಹಾಸದಲ್ಲಿ ಇದೇ ಮೊದಲು ಏಷ್ಯನ್-ಅಮೆರಿಕನ್, ಮೊದಲ ಕಪ್ಪು ಮಹಿಳೆ ಪ್ರಮುಖ ಪಕ್ಷದ ಉಪಾಧ್ಯಕ್ಷೆಯಾಗಿದ್ದಾರೆ. ಶ್ವೇತಭವನದ ಉತ್ತರಾಧಿಕಾರಿಯಾಗಿರುವ ಕಮಲಾ ಹ್ಯಾರಿಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

- Advertisement -
- Advertisement -

ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಯ ಆಯ್ಕೆಯಲ್ಲಿ ಆ ವ್ಯಕ್ತಿಯ ಜನಾಂಗ ಮತ್ತು ಲಿಂಗವು ಅತ್ಯಂತ ನಿರ್ಣಾಯಕ ಮಾನದಂಡಗಳಾಗಿವೆ. ಅಂತಹ ರಾಷ್ಟ್ರದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್, ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಿದರು.

ಅಮೆರಿಕಾದ ಇತಿಹಾಸದಲ್ಲಿ ಇದೇ ಮೊದಲು ಏಷ್ಯನ್-ಅಮೆರಿಕನ್, ಮೊದಲ ಕಪ್ಪು ಮಹಿಳೆ ಪ್ರಮುಖ ಪಕ್ಷದ ಉಪಾಧ್ಯಕ್ಷೆಯಾಗಿದ್ದಾರೆ. ಶ್ವೇತಭವನದ ಉತ್ತರಾಧಿಕಾರಿಯಾಗಿರುವ ಕಮಲಾ ಹ್ಯಾರಿಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಮೂಲದ ಕಮಲಾ ಹ್ಯಾರಿಸ್ ಅಮೆರಿಕಾ ಸೆನೆಟರ್ ಆದ ದಕ್ಷಿಣ ಏಷ್ಯಾದ ಮೊದಲ ಮಹಿಳೆ. ಹ್ಯಾರಿಸ್ ತಂದೆ ಜಮೈಕಾದವರು, ತಾಯಿ ದಕ್ಷಿಣ ಭಾರತದವರು, ತಂದೆಯಿಂದ ಬೇರ್ಪಟ್ಟು ತಾಯಿಯೊಂದಿಗೆ ಬೆಳೆದಿದ್ದಾರೆ.

ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಉನ್ನತ ವ್ಯಾಸಂಗಕ್ಕಾಗಿ ಬರ್ಕ್ಲಿ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಅಲ್ಲಿ ಅವರು ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ತಮ್ಮ ಭಾವಿ ಪತಿ ಡೊನಾಲ್ಡ್ ಜೆ ಹ್ಯಾರಿಸ್‌ರನ್ನು ಭೇಟಿಯಾದರು.

ಚೆನ್ನೈಯಿಂದ ಸುಮಾರು 320 ಕಿ.ಮೀ ದೂರದಲ್ಲಿರುವ ತುಲಸೇಂದ್ರಪುರಂ, ಕಮಲಾ ಹ್ಯಾರಿಸ್ ಅಜ್ಜ ಪಿ.ವಿ. ಗೋಪಾಲನ್ ಶತಮಾನಕ್ಕೂ ಹಿಂದೆ ಜನಿಸಿದ ಊರು. ಹ್ಯಾರಿಸ್ ತಮ್ಮ ಮಾತುಗಳಲ್ಲಿ ಆಗ್ಗಾಗೆ ತನ್ನ ಮತ್ತು ಭಾರತದ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ 5ನೇವಯಸ್ಸಿನಲ್ಲಿ ತುಲಸೇಂದ್ರಪುರಂಗೆ ಭೇಟಿ ನೀಡಿದ್ದು ಮತ್ತು ಚೆನ್ನೈನ ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಓಡಾಡಿದ್ದನ್ನ ಇತ್ತಿಚೆಗೆ ನೆನಪಿಸಿಕೊಂಡಿದ್ದರು.

“ಆಕೆಯಲ್ಲಿ ಭಾರತೀಯ ಪರಂಪರೆ ಇನ್ನೂ ಇರುವುದರಿಂದ, ಕೆಲವೊಮ್ಮೆ ತನ್ನ ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ” ಎಂದು 2019ರ ಅಕ್ಟೋಬರ್‌ನಲ್ಲಿ ಅಮೆರಿಕಾದ LA ಟೈಮ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: ಅಮೆರಿಕ ಚುನಾವಣೆ: ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ತಮಿಳುನಾಡಿನಿಂದ ಶುಭ ಹಾರೈಕೆ!

ಇತ್ತಿಚೆಗೆ ತನ್ನ ನೆಚ್ಚಿನ ಭಾರತೀಯ ತಿನಿಸುಗಳ ಬಗ್ಗೆ ಹೇಳುವಾಗ, ಇಡ್ಲಿ, ಒಳ್ಳೆಯ ಸಾಂಬಾರ್ ಮತ್ತು ಯಾವುದೇ ರೀತಿಯ ಟಿಕ್ಕಾ ಮೇಲಿನ ತನ್ನ ಪ್ರೀತಿಯನ್ನು ಹಂಚಿಕೊಂಡಿದ್ದರು. ಭಾರತದ ಬಗ್ಗೆ ತನ್ನ ಮೂಲ ಭಾರತದ್ದು ಎಂಬುದನ್ನು ಹ್ಯಾರಿಸ್ ಎಂದಿಗೂ ಬಿಟ್ಟುಕೊಟ್ಟಿಲ್ಲ. ಸಿಗುವ ಪ್ರತಿ ಅವಕಾಶದಲ್ಲೂ ಭಾರತದ ಬಗೆಗಿನ ತಮ್ಮ ಪ್ರೀತಿಯನ್ನು ಒತ್ತಿ ಹೇಳುತ್ತಾ ಬಂದಿದ್ದಾರೆ.

Kamala Harris's husband and potential 'second gentleman' - BBC News
PC: BBC

ಡೊನಾಲ್ಡ್ ಟ್ರಂಪ್ ಅವರಿಂದ ಕಮ್ಯೂನಿಸ್ಟ್ ಎಂದು ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದ ಹ್ಯಾರಿಸ್ ಅಧ್ಯಯನ ಕೂಡ ಕಪ್ಪು ಜನರ ಅಧ್ಯಯನಗಳು, ನಾಯಕರು ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಹತ್ತಿರವಾಗಿತ್ತು. ಹ್ಯಾರಿಸ್ “ಐತಿಹಾಸಿಕವಾಗಿ ಕಪ್ಪು ಕಾಲೇಜು ಮತ್ತು ವಿಶ್ವವಿದ್ಯಾಲಯ” ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಅಧ್ಯಯನ ಮಾಡಿದ್ದರು.

ಕಪ್ಪು ಮಹಿಳೆಯಾಗಿ ಹ್ಯಾರಿಸ್ ಹೆಸರು “ಬ್ಲ್ಯಾಕ್ ಲೈವ್ಸ್ ಮ್ಯಾಟರ್”(ಕಪ್ಪು ಜನರ ಜೀವನವೂ ಮುಖ್ಯ) ಚಳವಳಿಯ ಮುಂಚೂಣಿಯಲ್ಲಿದೆ. ಇದು 1960ರ ನಾಗರಿಕ ಹಕ್ಕುಗಳ ಚಳವಳಿಯ ನಂತರ ಅಮೆರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಕಪ್ಪು ಜನಾಂಗದ ಬಗ್ಗೆ ನಡೆದ ದೊಡ್ಡ ಪ್ರತಿಭಟನೆಗಳು.

13% ಇರುವ ಕಪ್ಪು ಜನಾಂಗದ ಮತದಾರರಿಗೆ ಹೋಲಿಸಿದರೆ ಏಷ್ಯಾದ ಅಮೆರಿಕನ್ನರು ಕೇವಲ 5% ಮತದಾರರನ್ನು ಹೊಂದಿದ್ದಾರೆ. ಅಮೆರಿಕಾದಲ್ಲಿ ಜನಾಂಗದ ಅಡಿಪಾಯವು ಕಪ್ಪು ಮತ್ತು ಬಿಳಿ ರಾಜಕೀಯದ ಮೇಲೆ ಸ್ಥಿರವಾಗಿದೆ.

ಇದನ್ನೂ ಓದಿ: ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಲ್ಲಿ ವಿಶೇಷ ಪೂಜೆ!

ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಲು ಕಾರಣವಾದ ಅಂಶಗಳು

ಈ ಬಾರಿಯ ಅಮೆರಿಕಾ ಚುನಾವಣೆಯ ಬದಲಾವಣೆಯ ಪರ್ವ ಬೈಡನ್‌ಗೆ, ಕಪ್ಪು, ಭಾರತೀಯ-ಅಮೆರಿಕನ್ ಮಹಿಳಾ ಅಭ್ಯರ್ಥಿ ಸುರಕ್ಷಿತ ಆಯ್ಕೆ ಎಂಬುದನ್ನು ತಿಳಿಸಿ ಕೊಟ್ಟಿತ್ತು. ಆಗ ಅವರ ಕಣ್ಣಿಗೆ ಬಿದ್ದವರು ಸೆನೆಟರ್‌ ಕಮಲಾ ಹ್ಯಾರಿಸ್.

ಆರಂಭದಲ್ಲಿ, ಬೈಡೆನ್‌ರ ಆಯ್ಕೆಗಳ ಸರಣಿಯು ಬಹುತೇಕ ಮಹಿಳೆಯರೆ ಆಗಿದ್ದರು. ಆದರೆ ಮೇ ತಿಂಗಳಲ್ಲಿ “ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಚಳವಳಿ ಸ್ಫೋಟಗೊಂಡ ನಂತರ, ಬೈಡೆನ್‌ಗೆ ಕಪ್ಪು ಜನಾಂಗದ ವ್ಯಕ್ತಿಯನ್ನು ಆಯ್ಕೆ ಮಾಡಲು ಒತ್ತಡ ಉಂಟು ಮಾಡಿತ್ತು.

ನಂತರ ಬೈಡನ್ ಕಪ್ಪು ಮಹಿಳೆಯನ್ನು ಆಯ್ಕೆ ಮಾಡುವ ಉದ್ದೇಶವನ್ನು ಜೂನ್‌ನಲ್ಲಿ ಘೋಷಿಸಿದರು. ಹ್ಯಾರಿಸ್ ಅವರ ಆಯ್ಕೆಯು ಬೈಡನ್ ಅವರ ಮಧ್ಯಮ ಮತ್ತು ಸ್ಥಾಪನೆಯ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತದೆ. ರಾಜಕೀಯ ತಜ್ಞರು ಕಮಲಾ ಹ್ಯಾರಿಸ್ ಆಯ್ಕೆ ಮಾರ್ಚ್‌ನಲ್ಲಿಯೇ ನಿರ್ಧರಿಸಲಾಗಿದೆ ಎಂದಿದ್ದರು.

Senator Kamala Harris
PC:Daily News.com

ಸೆನೆಟ್ನಲ್ಲಿ ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸುತ್ತಿರುವಾಗಲೇ, ಹ್ಯಾರಿಸ್ ಅನ್ನು ಡೆಮಾಕ್ರಟಿಕ್ ಪಕ್ಷದ ಮುಖ್ಯವಾಹಿನಿಯೊಳಗೆ ದೃಢವಾಗಿರಿಸಲಾಗಿದೆ. ಇತರ ಮಾಜಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬರ್ನಿ ಸ್ಯಾಂಡರ್ಸ್ ಮತ್ತು ಎಲಿಜಬೆತ್ ವಾರೆನ್‌ರಂತೆಯೂ ಇಲ್ಲ, ಇತ್ತ ಬೈಡೆನ್‌ನಂತೆ ಕೇಂದ್ರಿಯವೂ ಆಗಿಲ್ಲ.

ಡೊನಾಲ್ಡ್ ಜೆ ಹ್ಯಾರಿಸ್, ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಮಗಳಾಗಿ ಕಮಲಾ ದೇವಿ ಹ್ಯಾರಿಸ್ 1964ರ ಅಕ್ಟೋಬರ್ 20 ರಂದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ನಲ್ಲಿ ಜನಿಸಿದವರು. ಕಮಲಾ ಕೋಟ್-ಡೆಸ್-ನೀಗಸ್ ರಸ್ತೆಯ ನೊಟ್ರೆ-ಡೇಮ್-ಡೆಸ್-ನೀಗಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ವೆಸ್ಟ್ಮೌಂಟ್ ನಿಂದ 1981 ರಲ್ಲಿ ಪದವಿ ಪಡೆದರು. ಆಗಸ್ಟ್ 22, 2014 ರಂದು, ಹ್ಯಾರಿಸ್ ಬ್ರೂಕ್ಲಿನ್ ಮೂಲದ ವಕೀಲ ಡೌಗ್ಲಾಸ್ ಎಮ್ಹಾಫ್ ಎಂಬ ಅವರನ್ನು ವಿವಾಹವಾದರು.

ಇದನ್ನೂ ಓದಿ: ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ – ಯಾರಿವರು? ; ಸಂಕ್ಷಿಪ್ತ ಪರಿಚಯ

ಕಮಲಾ ತಮ್ಮ ವೃತ್ತಿಜೀವನವನ್ನು ಅಲ್ಮೇಡಾ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ ಪ್ರಾರಂಭಿಸಿದರು. ಅಲ್ಲಿ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದರು. 2003ರಲ್ಲಿ, ಅವರು ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ವಕೀಲರಾದರು. ಎರಡು ಅವಧಿಯ ಅಧಿಕಾರದ ನಂತರ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಮತ್ತು ಮೊದಲ ಕಪ್ಪು ವ್ಯಕ್ತಿಯಾಗಿ ಆಯ್ಕೆಯಾದರು. ಅಲ್ಲಿ ಕಮಲಾ ಅವರು 2011 ರಿಂದ 2017 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದ್ದರು.

2017 ರಲ್ಲಿ ಕ್ಯಾಲಿಫೋರ್ನಿಯಾದ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಎರಡನೇ ಆಫ್ರಿಕನ್-ಅಮೆರಿಕನ್ ಮಹಿಳೆ ಮತ್ತು ಇತಿಹಾಸದಲ್ಲಿ ಮೊದಲ ದಕ್ಷಿಣ ಏಷ್ಯಾ-ಅಮೆರಿಕನ್ ಸೆನೆಟರ್ ಆಗಿ ಹೊರಹೊಮ್ಮಿದರು. ಅವರು ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಸರ್ಕಾರಿ ವ್ಯವಹಾರಗಳ ಸಮಿತಿ, ಗುಪ್ತಚರ ಆಯ್ಕೆ ಸಮಿತಿ, ನ್ಯಾಯಾಂಗ ಸಮಿತಿ ಮತ್ತು ಬಜೆಟ್ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಸದ್ಯ ಕಮಲಾ ಹ್ಯಾರಿಸ್ ಗೆಲುವು ಅಮೆರಿಕಾದ ಕಪ್ಪು ಜನಾಂಗದ ಗೆಲುವಷ್ಟೆ ಅಲ್ಲದೇ ದಕ್ಷಿಣ ಭಾರತಿಯರಿಗೂ ಆಕೆ ಮನೆ ಮಗಳು. ತಮಿಳುನಾಡಿನ ತುಲಸೇಂದ್ರಪುರಂದಲ್ಲಿ ಆಕೆಯ ಗೆಲುವಿಗಾಗಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಮಾಡಿ ಹಾರೈಸಿದ್ದು ಕೂಡ ಇದೆ.


ಇದನ್ನೂ ಓದಿ: ಮಸ್ಕಿ: ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆ; ಸಿದ್ದರಾಮಯ್ಯನವರನ್ನು ಭೇಟಿಯಾದ ಬಸವನಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...