Homeಕರ್ನಾಟಕಸಿಂದಗಿ ದಲಿತ ಯುವಕನ ಹತ್ಯೆ: ಬಿಜೆಪಿ ನೀಡುತ್ತಿರುವ ಬೆಂಬಲವೇ ಕೃತ್ಯಕ್ಕೆ ಕಾರಣವೆಂದ ಸಿದ್ದರಾಮಯ್ಯ

ಸಿಂದಗಿ ದಲಿತ ಯುವಕನ ಹತ್ಯೆ: ಬಿಜೆಪಿ ನೀಡುತ್ತಿರುವ ಬೆಂಬಲವೇ ಕೃತ್ಯಕ್ಕೆ ಕಾರಣವೆಂದ ಸಿದ್ದರಾಮಯ್ಯ

ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ.

- Advertisement -
- Advertisement -

ವಿಜಯಪುರದ ಸಿಂದಗಿಯಲ್ಲಿ ನಡೆದಿರುವ ದಲಿತ ಯುವ ಮುಖಂಡ ಅನಿಲ ಇಂಗಳಗಿಯವರ ಕೊಲೆಯನ್ನು ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ಬಿಜೆಪಿ ನೀಡುತ್ತಿರುವ ಬೆಂಬಲವೇ ಕೊಲೆಗಡುಕರು ನಿರ್ಭಯವಾಗಿ ಇಂತಹ ದುಷ್ಕೃತ್ಯಕ್ಕೆ ಇಳಿಯಲು ಕಾರಣ ಎಂದು ಹೇಳಿದ್ದಾರೆ.

ದೇವಸ್ಥಾನದಲ್ಲಿ ತಮಗೆ ಸರಿಸಮಾನಾಗಿ ಕುಳಿತಿದ್ದಾರೆ ಎಂಬ ಕಾರಣಕ್ಕೆ ಮೇಲ್ಜಾತಿಯಿಂದ ಯುವಕನನ್ನು ಹತ್ಯೆಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ನಿನ್ನೆ ಯುವಕನ ಶವವನ್ನು ಇಟ್ಟು ಪ್ರತಿಭಟನೆ ನಡೆಸಲಾಗಿದೆ.

ಇದನ್ನೂ ಓದಿ: ಮಾಸ್ಕ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾದ ದಲಿತ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ವಿಜಯಪುರದ ಸಿಂದಗಿಯಲ್ಲಿ‌ ನಡೆದಿರುವ ದಲಿತ ಯುವಕನ ಹತ್ಯೆ ಹೇಯವಾದುದು ಮತ್ತು ಮನುಷ್ಯರೆಲ್ಲರೂ ತಲೆತಗ್ಗಿಸುವಂತಹದ್ದು. ಮುಖ್ಯಮಂತ್ರಿ ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಚಾಲನೆ ನೀಡಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

“ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಮೀಸಲಾತಿಯನ್ನು ವಿರೋಧಿಸುವ,‌ ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ಬಿಜೆಪಿ ನೀಡುತ್ತಿರುವ ಬೆಂಬಲವೇ ಇಂತಹ ಕೊಲೆಗಡುಕರು ನಿರ್ಭಯವಾಗಿ ಈ ರೀತಿಯ ದುಷ್ಕೃತ್ಯಕ್ಕೆ ಇಳಿಯಲು ಕಾರಣ. ಬಾಯಲ್ಲಿ ಸಮಾನತೆಯ ಮಂತ್ರ, ಆಚರಣೆಯಲ್ಲಿ ಅಸಮಾನತೆಯ ಕುತಂತ್ರ” ಎಂದು ಅವರು ಕುಟುಕಿದ್ದಾರೆ.

ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನನ್ನು ಅರೆಬೆತ್ತಲುಗೊಳಿಸಿ ಹಲ್ಲೆ

ಹತ್ಯೆಗೀಡಾದ ಯುವಕ ಬೂದಿಹಾಳ ಪಿ.ಹೆಚ್. ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯಲ್ಲಿ ಮೇಲೆ ತಮಗೆ ಸರಿಸಮಾನಾಗಿ ಕುಳಿತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಮೇಲ್ಜಾತಿಯ ಸಿದ್ದು ಸುಭಾಸ ಬಿರದಾರ ಎಂಬವರು ಆಕ್ಷೇಪಿಸಿ ಜಾತಿ ನಿಂದನೆ ಮಾಡಿದ್ದರು ಎಂದು ಪ್ರಜಾವಾಣಿ ವರದಿ ಮಾಡಿದೆ.

ಈ ಘಟನೆಯ ಕಾರಣಕ್ಕೆ ಸಿದ್ದು ಸುಭಾಸ ಮತ್ತು ತನ್ನ ಸಂಬಂಧಿ ಸಂತೋಷ ಎಂಬಾತನ ಜೊತೆಗೂಡಿ ಅನಿಲ ಇಂಗಳಗಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಚೂರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024; ಐದನೇ ಹಂತದಲ್ಲಿ 60.09% ಮತದಾನ

0
ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳ ಮತದಾರರು ಸೋಮವಾರ ನಡೆದ ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಅಂದಾಜು 60.09% ರಷ್ಟು ಮತದಾನದೊಂದಿಗೆ ಕೊನೆಗೊಂಡಿತು, ಪಶ್ಚಿಮ ಬಂಗಾಳದಲ್ಲಿ...