Homeಮುಖಪುಟಮಾಸ್ಕ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾದ ದಲಿತ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ಮಾಸ್ಕ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾದ ದಲಿತ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ಮೃತ ಯರಿಚಾರ್ಲಾ ಕಿರಣ್ ತಲೆಗೆ ಪೆಟ್ಟು ಬಿದ್ದು ಗುಂಟೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -
- Advertisement -

ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ಫೇಸ್ ಮಾಸ್ಕ್ ಧರಿಸಿಲ್ಲ ಎಂಬ ಆರೋಪದ ಮೇಲೆ ಪೊಲೀಸರ ವಶವಾಗಿದ್ದ ದಲಿತ ಯುವಕ ಮಂಗಳವಾರ ತಡರಾತ್ರಿ ಪ್ರಕಾಶಂ ಜಿಲ್ಲೆಯ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ.

ಮೃತ ಯರಿಚಾರ್ಲಾ ಕಿರಣ್ ತಲೆಗೆ ಪೆಟ್ಟು ಬಿದ್ದು ಗುಂಟೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜುಲೈ 18 ರಂದು ಪ್ರಕಾಶಂ ಜಿಲ್ಲೆಯ ಚಿರಾಲಾ ಪಟ್ಟಣದ ಕೊರೊನಾ ಹಾಟ್‌ಸ್ಪಾಟ್‌ನಲ್ಲಿ ಕಿರಣ್‌ ಅವರನ್ನು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ ಪೊಲೀಸರು ವಶಕ್ಕೆ ಪಡೆದಿದ್ದರು.

“ಕಿರಣ್ ಮತ್ತು ಆತನ ಸ್ನೇಹಿತ ಶಿನಿ ಅಬ್ರಹಾಂ ಮಾಸ್ಕ್ ಗಳಿಲ್ಲದೆ ಮೋಟಾರ್ ಸೈಕಲ್‌ನಲ್ಲಿ ಚಲಿಸುತ್ತಿದ್ದು, ಕೊಥಾಪೇಟ ಚೆಕ್ ಪೋಸ್ಟ್‌ನಲ್ಲಿರುವ ಕಾನ್‌ಸ್ಟೆಬಲ್ ರಾಮಿ ರೆಡ್ಡಿ ಅವರಿಬ್ಬರನ್ನು ಖಂಡಿಸಿದರು. ಅದಕ್ಕಾಗಿ ಕಾನ್‌ಸ್ಟೆಬಲ್‌ನನ್ನು ಥಳಿಸಿದ್ದಾರೆ” ಎಂದು ಪೊಲೀಸರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ವಿಜಯ್ ಕುಮಾರ್ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಿರಣ್ ನನ್ನು ಟೌನ್ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಹೊರಗೆ ಹಾರಿದ್ದರಿಂದ ಅವರ ತಲೆಗೆ ಪೆಟ್ಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಆತನ ತಲೆಗೆ ಹೊಡೆದಿದ್ದು ಮಾರಣಾಂತಿಕ ಗಾಯವಾಗಿದೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಕಿರಣ್ ಅವರನ್ನು ಮೊದಲು ಚಿರಲಾ ಸರ್ಕಾರಿ ಆಸ್ಪತ್ರೆಗೆ ಮತ್ತು ನಂತರ ಉತ್ತಮ ಚಿಕಿತ್ಸೆಗಾಗಿ ಗುಂಟೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತರ ವಿರುದ್ಧ ಪದೇ ಪದೇ ಪೊಲೀಸ್ ಹಿಂಸಾಚಾರ ನಡೆಸುತ್ತಿರುವುದು ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಸರ್ಕಾರವನ್ನು ದೂಷಿಸಿ, “ಜಗನ್ ಆಡಳಿತದಲ್ಲಿ ಬದುಕಲು ದಲಿತರಿಗೆ ಹಕ್ಕಿಲ್ಲವೇ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ವರಪ್ರಸಾದ್ ಮತ್ತು ಕಿರಣ್ ಪ್ರಕರಣಗಳನ್ನು ಉದಾಹರಿಸಿದ ಅವರು, “ಆಡಳಿತ ಪಕ್ಷದ ನಾಯಕರ ಮೆಚ್ಚುಗೆ ಪಡೆಯಲು ಪೊಲೀಸರು ವರಪ್ರಸಾದ್ ಅವರನ್ನು ಹಿಂಸಿಸಿದ್ದರು. ಈಗ ಪ್ರಕಾಶಂ ಜಿಲ್ಲೆಯ ದಲಿತ ಯುವ ಕಿರಣ್ ಕುಮಾರ್ ಪೊಲೀಸ್ ಹಲ್ಲೆಯಿಂದ ಸಾವನ್ನಪ್ಪಿದ್ದಾನೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸರು ಆಡಳಿತ ಪಕ್ಷದ ದರೋಡೆಕೋರರಾಗಿ ಮಾರ್ಪಟ್ಟಿದ್ದಾರೆ ಮತ್ತು ಗೂಂಡಾಗಳಂತೆ ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ” ಎಂದರು.

ಕಿರಣ್ ಸಾವಿನ ನಂತರ ಚಿರಾಲಾದ ಥಾಮಸ್‌ಪೇಟಾ ಪ್ರದೇಶ ಬುಧವಾರ ಉದ್ವಿಗ್ನಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.

ಕಿರಣ್ ತಂದೆ ಮೋಹನ್ ಎಸ್‌ಐ ವಿಜಯ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 324 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಲಾಗಿದೆ.

ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂ. ಘೋಷಿಸಿದ್ದಾರೆ.

ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ವಹಿಸಲಿದ್ದಾರೆ. ನಿಷ್ಪಕ್ಷಪಾತ ತನಿಖೆಗಾಗಿ ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕೌಶಲ್ ಈ ಪ್ರಕರಣವನ್ನು ದರ್ಸಿಯ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದ್ದಾರೆ.


ಇದನ್ನೂ ಓದಿ: ದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...