Homeಮುಖಪುಟತಮಿಳುನಾಡಿನ ರಾಜ ಭವನದಲ್ಲಿ ನಿಯೋಜಿಸಲಾದ 84 ಸಿಬ್ಬಂದಿಗಳಿಗೆ ಕೊರೊನಾ!

ತಮಿಳುನಾಡಿನ ರಾಜ ಭವನದಲ್ಲಿ ನಿಯೋಜಿಸಲಾದ 84 ಸಿಬ್ಬಂದಿಗಳಿಗೆ ಕೊರೊನಾ!

- Advertisement -
- Advertisement -

ತಮಿಳುನಾಡಿನ ರಾಜ ಭವನದಲ್ಲಿ ನಿಯೋಜಿಸಲಾಗಿರುವ 84 ಭದ್ರತಾ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅವರಲ್ಲಿ ಯಾರೊಬ್ಬರೂ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಸರ್ಕಾರ ಗುರುವಾರ ತಿಳಿಸಿದೆ.

ರಾಜ್ ಭವನದಲ್ಲಿ ಕೆಲವರಿಗೆ ರೋಗಲಕ್ಷಣಗಳನ್ನು ಕಂಡುಬಂದಿದ್ದರಿಂದ 147 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 84 ಮಂದಿ ಭದ್ರತೆ ಮತ್ತು ಅಗ್ನಿಶಾಮಕ ಸೇವಾ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿದೆ ಎಂದು ರಾಜ್ ಭವನದ ಪ್ರಕಟಣೆ ತಿಳಿಸಿದೆ.

ಈ ಎಲ್ಲರೂ ರಾಜ ಭವನದ ಹೊರಭಾಗದ ಮುಖ್ಯ ದ್ವಾರದ ಬಳಿ ಕೆಲಸ ಮಾಡುತ್ತಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ, ಕಚೇರಿಗಳನ್ನು ಒಳಗೊಂಡಂತೆ ರಾಜ್ ಭವನದ ಇಡೀ ಪ್ರದೇಶವನ್ನು ಕಾರ್ಪೊರೇಷನ್ ಆರೋಗ್ಯ ಅಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ.


ಇದನ್ನೂ ಓದಿ: ತಮಿಳುನಾಡು: ಪೆರಿಯಾರ್‌ ಪ್ರತಿಮೆಗೆ ಕೇಸರಿ ಬಣ್ಣ ಎರಚಿ ಅವಮಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...