Homeಕರೋನಾ ತಲ್ಲಣಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

ಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

- Advertisement -
- Advertisement -

ಕೋವಿಡ್ ಬಿಕ್ಕಟ್ಟನ್ನು ‘ಆ ಭಗವಂತ’ನ ಮೇಲೆ ಬಿಟ್ಟು ಕರ್ನಾಟಕದ ಆರೋಗ್ಯ ಸಚಿವರು ತಮ್ಮ ನಿಶ್ಕ್ರಿಯತೆಯನ್ನು ತಾವೆ ಒಪ್ಪಿಕೊಂಡಂತಾಗಿದೆ. ದೇಶದಲ್ಲಿ ಕೋವಿಡ್‍ನ ಮೊದಲನೆ ಪ್ರಕರಣ ಕಂಡು ಹೆಚ್ಚು ಕಡಿಮೆ ನಾಲ್ಕು ತಿಂಗಳುಗಳು ಕಳೆದರೂ, ರಾಜ್ಯ ಸರ್ಕಾರ ಯಾವ ತಯಾರಿಯನ್ನೂ ಮಾಡಿಕೊಂಡಂತಿಲ್ಲ.

ಏಪ್ರಿಲ್ ಮತ್ತು ಮೇ ಎರಡು ತಿಂಗಳುಗಳ ಲಾಕ್‍ಡೌನಿನ ಸಮಯವಕಾಶವಿದ್ದರೂ ಸಹ, ಬರುವ ಆಪತ್ತಿಗೆ ಸರ್ಕಾರ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲ. ಲಾಕ್‍ಡೌನ್, ಸೀಲ್‍ಡೌನ್ ಬಿಟ್ಟು ಸರ್ಕಾರಕ್ಕೆ ಬೇರೆ ಯಾವ ಕಾರ್ಯತಂತ್ರ ತೋಚುತ್ತಿಲ್ಲವೆನಿಸುತ್ತದೆ. ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿ 40,000ಕ್ಕು ಹೆಚ್ಚು ತಲುಪಿದೆ. ಇಂತಹ ಸಂದರ್ಭದಲ್ಲಿ ಎಲ್ಲವೂ ಎಡವಟ್ಟಾಗಿ ನಡೆಡಿದೆ.

ಪರೀಕ್ಷೆಗಳಲ್ಲಿ ಬಹಳಷ್ಟು ಬ್ಯಾಕ್‍ಲಾಗ್ ಇದ್ದು ಪರೀಕ್ಷೆಯ ಫಲಿತಾಂಶ ಪಡೆಯಲು 7 ದಿನ ಕಾಯಬೇಕಾಗಿದೆ. ಆಸ್ಪತ್ರೆಗಳಲ್ಲಿನ ಬೆಡ್‍ಗಳ ನಿರ್ವಹಣೆಗಾಗಿ ಇರುವ ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಿಂದ ಯಾವ ಪ್ರಯೊಜನವೂ ಕಾಣಿಸುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ರೋಗಿಯ ಪರವಾಗಿ ಬೆಡ್ ಲಭ್ಯತೆಯಿರುವ ಆಸ್ಪತ್ರೆಗೆ ಕರೆ ಮಾಡಿದಾಗ, ನಮ್ಮಲ್ಲಿ ಬೆಡ್‍ಗಳಿವೆ ಆದರೆ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿಲ್ಲವೆಂದು ಪ್ರತಿಕ್ರಿಯೆ ಬಂತು.

ಮತ್ತೊಂದು ಆಸ್ಪತ್ರೆಗೆ ಕರೆ ಮಾಡಿದಾಗ ನಮ್ಮಲ್ಲಿ ಬೆಡ್‍ಗಳಿಲ್ಲವೆಂದು ಹೇಳಿದರು. ‘ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಲ್ಲಿ ನಿಮ್ಮ ಆಸ್ಪತ್ರೆಯಲ್ಲಿ 250 ಬೆಡ್‍ಗಳಿವೆಯೆಂದು ತೋರುಸಿತ್ತಿದೆಯಲ್ಲ’ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡುತ್ತಿದ್ದ ಸಿಬ್ಬಂದಿ ಹೌದಾ, ಅಂತಹದ್ದೊಂದು ಅಪ್ಲಿಕೇಶನ್ ಇದೆಯೆಂದೇ ನನಗೆ ಗೊತ್ತಿಲ್ಲ, ದಯವಿಟ್ಟು ಅದರ ಲಿಂಕ್ ಕಳುಹಿಸಿಯೆಂದರು.

ಈ ರೀತಿ ಬೆಡ್‍ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುವುದಿಲ್ಲ, ಇನ್ನೇನಿದ್ದರೂ ಕಠಿಣ ಕ್ರಮಕ್ಕೆ ಇಳಿಯುತ್ತೇವೆಯೆಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದರೂ, ಖಾಸಗಿ ಆಸ್ಪತ್ರೆಗಳಿಗೆ ಅದರ ಬಿಸಿ ತಟ್ಟಿದಂತಿಲ್ಲ. ಬದಲಿಗೆ ತಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮತ್ತಷ್ಟು ಬಲವಾಗಿ ಪಟ್ಟುಹಿಡಿದಂತಿದೆ. ನಮಗೆ ಸರಕಾರದಿಂದ ಬಾಕಿಯಿರುವ ಹಣವನ್ನು ಪಾವಿತಿಸುವವರೆಗು ನಾವು 50% ಬೆಡ್‍ಗಳನ್ನು ಸರಕಾರದಿಂದ ರೆಫರ್ ಮಾಡಿದ ರೋಗಿಗಳಿಗೆ ಮೀಸಲಿಡುವುದಿಲ್ಲವೆಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ಕಳೆದ 20 ವರ್ಷಗಳಿಂದ ಖಾಸಗಿ ಆಸ್ಪತ್ರೆಗಳನ್ನು ಪೋಷಿಸಿ ಸರ್ಕಾರಗಳು ತಮ್ಮ ಜುಟ್ಟನ್ನು ಅವರ ಕೈಯಿಗೆ ಕೊಟ್ಟ ಪರಿಣಾಮವು ಈಗ ಸ್ಪಷ್ಟವಾಗಿ ಕಾಣುತ್ತಿದೆ. ಈ ಸಂದಿಗ್ಧ ಪರಿಸ್ಥಿತಿ ಮುಂದಕ್ಕೆ ಏನಾಗಬಹುದೆಂದು ಬಹುಶಃ ‘ಆ ಭಗವಂತನನ್ನೇ’ ಕೇಳಬೇಕು.

ಖಾಸಗಿ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಿರಲಿ, ತನ್ನದೇ ಸಾರ್ವಜನಿಕ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಿಬ್ಬಂದಿಗಳ ಕೊರತೆಯಿರುವ ಕಾರಣ ಇತರ ಇಲಾಖೆಗಳಿಂದ ಸಿಬ್ಬಂದಿಗಳನ್ನು ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಆದರೆ, ಎಷ್ಟೋ ಕೇಂದ್ರಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗಳು ಹಾಜರಾಗಿಲ್ಲ. ಈಗ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ತಕ್ಕ ಬೆಂಬಲ ವ್ಯವಸ್ಥೆಯೂ ಇಲ್ಲ. ಉದಾಹರಣೆಗೆ, ದಿನನಿತ್ಯ ಅಪಾಯವನ್ನು ಎದುರಿಸಿ ಇಡೀ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿರುವ ಆಶಾ ಕಾರ್ಯಕರ್ತರಿಗೆ ವಿಶೇಷ ಬೆಂಬಲ ನೀಡಿ ಅವರನ್ನು ರಕ್ಷಿಸಿ ಪ್ರೋತ್ಸಾಹಿಸುವ ಬದಲು ಅವರಿಗೆ ಕಳೆದ ಮೂರು ತಿಂಗಳುಗಳಿಂದ ‘ಗೌರವ’ ಧನವೂ ನೀಡಿಲ್ಲ. ಅದೇ ರೀತಿ ಯಾವುದೇ ರಕ್ಷಣಾ ಕವಚಗಳನ್ನು ನೀಡದೇ, ಕ್ರಮಬದ್ದವಾಗಿ ಅವರನ್ನು ಕೋವಿಡ್ ಪರಿಕ್ಷಿಗೆ ಒಳಪಡಿಸದೇ, ಚಿಕಿತ್ಸೆಗಾಗಿ ವಿಮೆ ಸೌಲಭ್ಯ ಮತ್ತು ಇತರ ಭದ್ರತೆಗಳನ್ನು ನೀಡದೇ ಸರ್ಕಾರ ಪೌರಕಾರ್ಮಿಕರನ್ನು ಅಪಾಯದ ಅಂಚಿಗೆ ತಲ್ಲಿದೆ. ಈ ರೀತಿ ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ವರ್ಗದೊಂದಿಗೆ ರಾಜ್ಯ ಸರ್ಕಾರ ತುಚ್ಛವಾಗಿ ನಡೆದುಕೊಂಡಿದೆ.

ಸಮುದಾಯಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೇಂದ್ರಬಿಂದು ಎಂಬುದು ಎಲ್ಲಾ ತಜ್ಞರಿಗೆ ತಿಳಿದಿರುವ ವಿಷಯ. ಆದರೂ ಕಳೆದ ನಾಲ್ಕು ತಿಂಗಳುಗಳಿಂದ ಈ ದಿಕ್ಕಿನಲ್ಲಿ ಯಾವ ವಿಧದ ತಯಾರಿಯೂ ಮಾಡಲಾಗಿಲ್ಲ. ಬೆಂಕಿ ಹೊತ್ತಿ ಉರಿಯುವಾಗ ಬಾವಿ ತೋಡಿದಂತೆ, ಬಿಬಿಎಂಪಿ ಈಗ ಬೆಂಗಳೂರಿನ ಎಲ್ಲಾ ವಾರ್ಡ್ ಸಮಿತಿಗಳನ್ನು ಪುನರ್ಚೇತನಗೊಳಿಸಲು ಹೊರಟಿದೆ. ತಡವಾಗಿಯಾದರೂ ಈ ಕ್ರಮ ಕೈಗೊಂಡಿರುವುದು ಬಹಳ ಉತ್ತಮ ಬೆಳವಣಿಗೆ.

ವಾರ್ಡ್ ಸಮಿತಿಗಳು ಕೇವಲ ಕೋವಿಡ್ ರೋಗ ನಿಯಂತ್ರಣ ಮಾತ್ರವಲ್ಲದೇ, ಕೋವಿಡ್ ಸಂಬಂಧಿತ ಕಳಂಕ, ತಾರತಮ್ಯ, ಭಯ, ಆತಂಕವನ್ನು ಕಡಿಮೆ ಮಾಡಲು ವಿಶೇಷ ಕಾಳಜಿವಹಿಸಬೇಕಿದೆ. ಹಾಗೆಯೇ ಸುಳ್ಳು ಮಾಹಿತಿ, ಭಯ ಹುಟ್ಟಿಸುವ ವದಂತಿಗಳನ್ನು ತಡೆಗಟ್ಟುವಲ್ಲಿಯೂ ವಾರ್ಡ್ ಸಮಿತಿಗಳು ಮುಖ್ಯ ಪಾತ್ರ ವಹಿಸಬೇಕಿವೆ. ಕೋವಿಡ್ ರೋಗಿಗಳು ಮಾತ್ರವಲ್ಲದೇ, ಇತರ ರೋಗಗಳಿಂದ ಬಳಲುತ್ತಿರುವವರಿಗು ಆರೋಗ್ಯ ಸೇವೆಗಳು ಕೈಗೆಟುವಂತೆ ಮಾಡುವುದು, ನೀರು, ಚರಂಡಿ ಮುಂತಾದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿಯ ಗಮನ ಸೆಳೆಯುವುದು, ಸ್ಥಳೀಯ ನಾಯಕರನ್ನು, ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿ ಅವರ ಬೆಂಬಲ ಪಡೆಯುವುದು ಮುಂತಾದ ಜವಾಬ್ದಾರಿಗಳನ್ನು ವಾರ್ಡ್ ಸಮಿತಿಗಳು ನಿರ್ವಹಿಸಬೇಕಿದೆ.

ಈವರೆಗೆ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ಭಗವಂತ ಏನು ಮಾಡಿದನೋ ಗೊತ್ತಿಲ್ಲ. ಆದರೇ ಈ ನಾಡಿನ ಜನಸಾಮಾನ್ಯರು ತಮ್ಮವರಿಗಾಗಿ ಬಹಳ ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ರೇಶನ್ ಕಿಟ್‍ಗಳನ್ನು ಹೊಂದಿಸಿಕೊಂಡು ವಿತರಿಸುವುದು, ವಲಸೆ ಕಾರ್ಮಿಕರಿಗಾಗಿ ಊಟದ ವ್ಯವಸ್ಥೆ, ಅವರು ಮನೆಗೆ ತೆರೆಳಲು ಸಹಾಯ ಇವೆಲ್ಲವನ್ನು ಜನಸಾಮಾನ್ಯರೇ ನಿಭಾಯಿಸಿದ್ದಾರೆ.

ಜನಸಾಮಾನ್ಯರು ಕೇವಲ ಶ್ರಮಿಸುವುದಲ್ಲದೇ ಸರ್ಕಾರದಲ್ಲಿ ಉತ್ತರದಾಯಿತ್ವ, ಪಾರದರ್ಶಕತೆಗಾಗಿ ಒತ್ತಾಯಿಸಬೇಕಿದೆ. ಸರ್ಕಾರದ ಕ್ರಮಗಳು ಸೂಕ್ತವಿಲ್ಲದಿದ್ದಲ್ಲಿ, ಅವುಗಳನ್ನು ಪ್ರಶ್ನಿಸಬೇಕಿದೆ. ಮುಂಬೈಯಿನ ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಇವತ್ತು ನಿಯಂತ್ರಣದಲ್ಲಿರುವುದು ಯಾವುದೋ ದೊಡ್ಡ ಮಟ್ಟದ ತಾಂತ್ರಿಕ ಶಕ್ತಿಯಿಂದಲ್ಲ. ಅಲ್ಲಿನ ಸಮುದಾಯ ಕೋವಿಡ್ ನಿಯಂತ್ರಣದಲ್ಲಿ ಪಾಲ್ಗೊಂಡು ಜನರಿಗೆ ಮಾಹಿತಿ ನೀಡಿ, ಅವರಲ್ಲಿ ಭಯ ಆತಂಕವನ್ನು ತಡೆಗಟ್ಟಿ, ಅಗತ್ಯ ಆರೋಗ್ಯ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೆಟುಕುವಂತೆ ಮಾಡಿದ ಪರಿಣಾಮ ಇಂದು ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಸಮಸ್ಯೆ ನಿಯಂತ್ರಣದಲ್ಲಿದೆ. “ಭಗವಂತನ” ಮೇಲೆ ಈ ಬಿಕ್ಕಟ್ಟಿನ ಹೊರೆ ಹಾಕುವ ಬದಲು, ಸಂವಿಧಾನಬದ್ಧವಾಗಿ ಪ್ರಜಾಸತಾತ್ಮಕವಾದ ನಮ್ಮ ನಾಗರಿಕತ್ವದ ಹಕ್ಕುಗಳನುಸಾರವಾಗಿ ಈ ಬಿಕಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ.

-ಡಾ.ಅಖಿಲಾ ವಾಸನ್


ಇದನ್ನು ಓದಿ: ದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...