HomeಮುಖಪುಟJNU ದಾಳಿ ಖಂಡಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಹರಿದು ಬಂದ ಯುವಜನತೆ...

JNU ದಾಳಿ ಖಂಡಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಹರಿದು ಬಂದ ಯುವಜನತೆ…

- Advertisement -
- Advertisement -

JNU ದಾಳಿ ಖಂಡಿಸಿ, ಗೂಂಡಾಗಳನ್ನು ಬಂಧಿಸುವಂತೆ ಆಗ್ರಹಿಸಿದ ದೇಶಾದ್ಯಂತ ಸಾವಿರಾರು ಕಡೆ ಹೋರಾಟಗಳು ನಡೆದಿವೆ. ಮುಂಬೈನಲ್ಲಿ 40 ಗಂಟೆಗಳಿಗೂ ಅಧಿಕ ನಿರಂತರ ಧರಣಿ ನಡೆದಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಸಹ ಮಂಗಳವಾರ ಸಂಜೆಯಿಂದ ಆಹೋರಾತ್ರಿ ಧರಣಿ ಆರಂಭವಾಗಿದ್ದು ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆಗ ವೇಳೆಗೆ ಧರಣಿ ಮಾಡಲು ನಿರ್ಧರಿಸಿ ಕರೆ ಕೊಟ್ಟಿದ್ದೆ ತಡೆ ಸಂಜೆ 6ಗಂಟೆಯ ವೇಳೆಗೆ ನೂರಾರು ಯುವಜನರು ಒಟ್ಟುಗೂಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಜನರು ರಾತ್ರಿಯೆಲ್ಲಾ ಘೋಷಣೆ, ಹಾಡು, ಕವನ ವಾಚನ ಸೇರಿದಂತೆ ವಿನೂತನವಾಗಿ ಪ್ರತಿಭಟಿಸುವ ಮೂಲಕ ಜೆಎನ್‌ಯು ಹಿಂಸೆಯನ್ನು ಜೊತೆಗೆ ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿಯನ್ನು ವಿರೋಧಿಸಿದ್ದಾರೆ.

 

ಸಂಘಟಕರಲ್ಲಿ ಒಬ್ಬರಾದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್‌ ಬೆಂಕಿಕೇರೆ ಮಾತನಾಡಿ, “ಈಗ ಸಮಯ ಬೆಳಗಿನ ಜಾವ 3 ಗಂಟೆ. ಇಷ್ಟೊಂದು ಜನ ಎಲ್ಲೆಲ್ಲಿಂದ ಬಂದಿದ್ದಾರೆ ಗೊತ್ತಿಲ್ಲ. ಯಾವುದೇ ತಯಾರಿ ಇಲ್ಲದೆ ಮಧ್ಯಾಹ್ನ 3 ಗಂಟೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ನಾವು ಕರೆ ಕೊಟ್ಟಿದ್ದು ಅಷ್ಟೇ. ಸಂಜೆ 6 ಗಂಟೆಗೆ ಸಾವಿರಾರು ವಿದ್ಯಾರ್ಥಿ-ಯುವಜನರಿಂದ ಶುರುವಾದ ಪ್ರತಿಭಟನೆಯು ಬೆಳಗಿನ ಜಾವ 3 ಗಂಟೆ ದಾಟಿದರು ಒಂದೇ ಒಂದು ನಿಮಿಷವು ಹಾಡು, ಕವನ, ಭಾಷಣ, ಘೋಷಣೆಗಳು ನಿಂತೆಯಿಲ್ಲ! ಈ ಯುವಜನರ ಸ್ಥಳದಲ್ಲೆ ಅದೆಷ್ಟೋ ಕವನಗಳನ್ನು ಬರೆದಿದ್ದಾರೆ. ಒಂದೊಂದು ಕವನವೂ ಮೈ ಜುಮ್ ಅನಿಸುವಂಥದ್ದಾಗಿದೆ.. ವಿದ್ಯಾರ್ಥಿ ಹೋರಾಟವು ಈ ದೇಶವನ್ನು ಖಂಡಿತವಾಗಿಯೂ ಸಂವಿಧಾನ ಆಶಯದ ಕಡೆ ತಗೆದುಕೊಂಡು ಹೋಗಲಿದೆ. ಇಂದು ನಡೆಯಲಿರುವ ರೈತ, ಕಾರ್ಮಿಕರ ಮುಷ್ಕರಕ್ಕೆ ವಿದ್ಯಾರ್ಥಿ ಹೋರಾಟವೂ ಬೆಂಬಲಿಸುತ್ತದೆ.” ಎಂದಿದ್ದಾರೆ.

ಭಾರತದ ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಯುವಜನರು ಸಂವಿಧಾನದ ಪೀಠಿಕೆಯನ್ನು ಒಟ್ಟಾಗಿ ಓದುವ ಮೂಲಕ ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಅಜಾದಿ ಘೋಷಣೆಗಳು ಮೊಳಗಿದ್ದಲ್ಲದೇ ಎಬಿವಿಪಿಯ ವಿರುದ್ಧವೂ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಪ್ರತಿಭಟನೆ ಇಂದು ಸಂಜೆ 6 ಗಂಟೆಯವರೆಗೂ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಾನವರು ಬದುಕಲಿಕ್ಕೆ ಆಶ್ರಯದಾತ ವಾಗಿರುವ
    ಭಾರತದ ಐಕ್ಯತೆಯನ್ನು ಮತ್ತು ನಾಗರೀಕರ ಹಿತಕಾಯುವ ಸಲುವಾಗಿ
    ಬಾಬಾ ಸಾಹೇಬರನ್ನು ಅವಮಾನಿಸಿದ ಕ್ಕಾಗಿ ನನ್ನಂತಹ ಜ್ಞಾನ ತುಂಬಿಕೊಂಡಿರುವ ಈ ರೀತಿ ತೊಂದರೆ ಮಾಡಿದ್ದಾರೆ ಆರ್ಯರು ಎಂದಾದರೆ ಮನುವಾದಿಗಳ
    ಕೊಡುವ ನೋವಿಗೆ ಗೊತ್ತಾಗಬಾರದೆಂದು ನಿರಂತರವಾಗಿ ಗಾಂಧಿ ಗೋವಳ ಕಾರ್ ಇನ್ನೂ ಅನೇಕ ಅನೇಕ ಜನರ ಏಕಾಂಗಿ ಹೋರಾಟ ಮಾಡಿ ಪ್ರತಿಯೊಬ್ಬರ
    ಏಳಿಗೆಗಾಗಿ ನ್ಯಾಯ ಸಿಕ್ಕುತ್ತಿರುವ ಗ್ರಂಥ ಎಂದರೆ ಭಗವದ್ಗೀತೆ ಯಿಂದಲ್ಲ ತಿಳಿದುಕೊಳ್ಳಲೇ ಬೇಕಾದ ವಿಷಯ

    ಅಂಬೇಡ್ಕರರ ಸಂವಿಧಾನ ಭಾರತಕ್ಕೆ ಸರ್ವಶ್ರೇಷ್ಠ ಗ್ರಂಥವಾಗಿದೆ ಪ್ರತಿಯೊಬ್ಬರೂ ಸಹ ಸಂವಿಧಾನದ ಆಶ್ರಯ ಪಡೆದು ಅಂಬೇಡ್ಕರರನ್ನು ಮಾತ್ರ ಜಾತಿಗೆ ಹೊಂದಾಣಿಕೆ ಮಾಡಿ ನೋಡುವಂತ ಮನುವಾದಿಗಳ ಹಿಡಿತದಲ್ಲಿ ಭಾರತದ ಮೂಲನಿವಾಸಿಗಳು ಬದುಕಬೇಕಾದ ದುರ್ದೈವ ನಮ್ಮದಾಗಿದೆ
    ಜೈ ಭೀಮ್ ಜೈ ಸಂವಿಧಾನ ಎಂದರೆ ತಪ್ಪಾಗಲಾರದು

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿದಿನ ಹೊಸ ಸುಳ್ಳು, ಪ್ರತಿ ಗಂಟೆಗೆ ದ್ವೇಷ ಬಿತ್ತುವ ಮೋದಿ ಬಗ್ಗೆ ಚು.ಆಯೋಗ ಮೌನವಾಗಿದೆ:...

0
ರಾಜ್ಯಗಳ ನಡುವೆ ಘರ್ಷಣೆಯನ್ನು ಉಂಟುಮಾಡಲು ಪ್ರಧಾನಿ ನರೇಂದ್ರ ಮೋದಿ ಕೆಳಮಟ್ಟದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಪ್ರಧಾನಿಯವರ ಬೇಜವಾಬ್ದಾರಿ...