Homeಚಳವಳಿಸಿಂಘು ಗಡಿಯಲ್ಲಿ ಹೋರಾಟನಿರತ ರೈತರ ಟೆಂಟ್‌ಗಳಿಗೆ ಬೆಂಕಿ ಹಚ್ಚಿದ ದುರ್ಷ್ಕಮಿ, ಟೆಂಟ್‌ಗಳು ಭಸ್ಮ

ಸಿಂಘು ಗಡಿಯಲ್ಲಿ ಹೋರಾಟನಿರತ ರೈತರ ಟೆಂಟ್‌ಗಳಿಗೆ ಬೆಂಕಿ ಹಚ್ಚಿದ ದುರ್ಷ್ಕಮಿ, ಟೆಂಟ್‌ಗಳು ಭಸ್ಮ

- Advertisement -
- Advertisement -

ಕಳೆದ ಐದು ತಿಂಗಳುಗಳಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಟೆಂಟ್‌ಗಳಿಗೆ ದುರ್ಷ್ಕಮಿಗಳು ಗುರುವಾರ ಬೆಳಿಗ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಪ್ರತಿಭಟನಾ ನಿರತ ರೈತರ ಎರಡು ಟೆಂಟ್‌ಗಳು ಮತ್ತು ಕಾರು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಅಪರಿಚಿತ ಜನರು ಬೆಂಕಿ ಹಚ್ಚಿದ್ದಾರೆ. ಎರಡು ಟೆಂಟ್‌ ಒಳಗಿದ್ದ ಪೀಠೋಪಕರಣಗಳು ಮತ್ತು ಅಗತ್ಯ ವಸ್ತುಗಳು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕ-ಪಕ್ಕದ ಟೆಂಟ್‌ನಲ್ಲಿದ್ದ ಪ್ರತಿಭಟನಾಕಾರರು ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ. ಹಾಗಾಗಿ ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಹಿನ್ನೆಲೆ ರೈತ ಹೋರಾಟ ಮುಂದೂಡಿ, ಮಾತುಕತೆಗೆ ಬನ್ನಿ ಎಂದ ಕೃಷಿ ಸಚಿವ

 

May be an image of 2 people, beard, people standing and road
PC: [email protected]

ಘಟನೆ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಪ್ರತಿಭಟನಾ ನಿರತ ಪಂಜಾಬಿನ ರೈತ ಗುರ್ತೇಜ್ ಸಿಂಗ್, “ಪತ್ರಕರ್ತ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿ ಪ್ರತಿಭಟನೆ ಬಗ್ಗೆ ಮಾಹಿತಿ ಬೇಕು ಎಂದಿದ್ದಾರೆ. ಅವರನ್ನು ನಂಬಿದ ರೈತರು ಬಿಸಿಲು ಜಾಸ್ತಿ ಎಂದು ಟೆಂಟ್ ಒಳಗೆ ಕರೆದು ಕೂರಿಸಿಕೊಂಡಿದ್ದಾರೆ. ಆತ ಸದ್ದಿಲ್ಲದೆ ಬೆಂಕಿ ಹಚ್ಚಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಎರಡು ದೊಡ್ಡ ದೊಡ್ಡ ಟೆಂಟ್‌ಗಳು ಮತ್ತು ಒಂದು ಕಾರು ಎಲ್ಲಾ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರಿಗೆ ಸ್ಪಲ್ಪ ಗಾಯಗಳಾಗಿವೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಹೋರಾಟವನ್ನು ಬೆಂಬಲಿಸಿದ ನಟ ‘ಯಶ್‌’

ರೈತರು ಆರೋಪಿಗಳ ವಿರುದ್ಧ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಒಬ್ಬ ವ್ಯಕ್ತಿಯು ಬಿಆರ್‌ಟಿಎಸ್ ಕಡೆಯಿಂದ ಬಂದು ಎರಡು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾನೆ ಎಂದು ನಮಗೆ ತಿಳಿಸಲಾಗಿದೆ. ಈ ಹುಲ್ಲಿನ ಟೆಂಟ್‌ಗಳನ್ನು ರೈತರು ಬೇಸಿಗೆಯಲ್ಲಿ ನಿರ್ಮಿಸಿದ್ದಾರೆ. ಅವರು ತಮ್ಮ ವಸ್ತುಗಳನ್ನು ಇಟ್ಟುಕೊಂಡು, ಏರ್ ಕೂಲರ್‌ಗಳನ್ನು  ಅಳವಡಿಸಿದ್ದರು” ಎಂದಿದ್ದಾರೆ.

“ಘಟನೆಯ ನಂತರ ಆರೋಪಿಗಳ ಹತ್ತಿರದ ಸ್ಥಳೀಯರ ಗುಂಪಿನಲ್ಲಿ ಸೇರಿಕೊಂಡ ಕಾರಣ ಅವರನ್ನು ಗುರುತಿಸಲು ರೈತರಿಗೆ ಸಾಧ್ಯವಿಲ್ಲ ಎಂದು ರೈತರು ತಿಳಿಸಿದ್ದಾರೆ. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ”ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ದೆಹಲಿಯ ನಾಲ್ಕು ಗಡಿ ಬಿಂದುಗಳಾದ ಸಿಂಘು, ಟಿಕ್ರಿ (ಹರಿಯಾಣದ ಉದ್ದಕ್ಕೂ), ಶಹಜಾನ್‌ಪುರ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....