Homeಮುಖಪುಟರಾಜಸ್ಥಾನ ಆಡಿಯೋ ಪ್ರಕರಣ: ಕಾಂಗ್ರೆಸ್ ವಕ್ತಾರ ಸುರ್ಜೇವಾಲ ವಿರುದ್ಧ ದೂರು ದಾಖಲು

ರಾಜಸ್ಥಾನ ಆಡಿಯೋ ಪ್ರಕರಣ: ಕಾಂಗ್ರೆಸ್ ವಕ್ತಾರ ಸುರ್ಜೇವಾಲ ವಿರುದ್ಧ ದೂರು ದಾಖಲು

- Advertisement -
- Advertisement -

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ‌ ಸರ್ಕಾರವನ್ನು ಉರುಳಿಸಲೆಂದು ಕಾಂಗ್ರೆಸ್ ಬಂಡಾಯ ಶಾಸಕರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ರೊಡನೆ ನಡೆಸಿರುವ ಸಂಭಾಷಣೆಯ ಆಡಿಯೋ ಫೇಕ್ ಎಂದು ಬಿಜೆಪಿ ಹೇಳಿದೆ. ಈ ಕುರಿತು ಬಿಜೆಪಿ ವಕ್ತಾರರಾದ ಲಕ್ಷ್ಮೀಕಾಂತ್ ಭಾರದ್ವಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲ ಮತ್ತು ಗೋವಿಂದ್ ಸಿಂಗ್ ದೋಟಾಸ್ರಾರವರ ಮೇಲೆ ಪ್ರಕರಣ ದಾಖಲಾಗಿದೆ.

ಬಿಜೆಪಿಯ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಮನೆಯಲ್ಲಿಯೇ ಪಿತೂರಿ ನಡೆಸಲಾಗಿದೆ. ಮಹೇಶ್ ಜೋಶಿ, ರಂದೀಪ್ ಸುರ್ಜೆವಾಲಾ ಮತ್ತು ಇತರರು ಸದಾ ಸುಳ್ಳು ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚಿನ ಬಿಕ್ಕಟ್ಟನ್ನು ಬಿಜೆಪಿ ಮೇಲೆ ಹೊರಿಸಿರುವುದು ಸರ್ವಾಥ ಸರಿಯಲ್ಲ ಎಂದು ರಾಜಸ್ಥಾನದ ಬಿಜೆಪಿ ವಕ್ತಾರ ಭರದ್ವಾಜ್ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಿಎಂರವರ ಆದೇಶದ ಮೇರೆಗೆ ಕೇಂದ್ರ ಸಚಿವರ ಹೆಸರನ್ನು ಎಳೆದು ತರಲಾಗಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಕೋಟ್ಯಂತರ ರೂಪಾಯಿಗಳನ್ನು ಬಿಜೆಪಿ ನೀಡುತ್ತಿದೆ ಎಂಬ ನಕಲಿ ಫೋನ್ ಸಂಭಾಷಣೆಯನ್ನು ಸೃಷ್ಟಿಸಲಾಗಿದೆ. ತನ್ನನ್ನು ಮುಖ್ಯಮಂತ್ರಿಯ ಓಎಸ್ಡಿ ಎಂದು ಕರೆದುಕೊಳ್ಳುವ ಲೋಕೇಶ್ ಶರ್ಮಾ ಇದರ ನೇತೃತ್ವ ವಹಿಸಿದ್ದಾರೆ. ಈ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪಿಗಳು ತಮ್ಮ ಸ್ಥಾನ ಮತ್ತು ಅಧಿಕಾರವನ್ನು ತೀವ್ರವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲೋಕೇಶ್ ಶರ್ಮಾ ಅವರು “ಜುಲೈ 16, 2020 ರಂದು ರಾತ್ರಿ 8:25 ರ ಸುಮಾರಿಗೆ ವಾಟ್ಸಾಪ್ ಮೂಲಕ ಮೂರು ಆಡಿಯೊ ಟೇಪ್‌ಗಳನ್ನು ಮಾಧ್ಯಮ ಕಾರ್ಯಕರ್ತರಿಗೆ ಬಿಡುಗಡೆ ಮಾಡಿದ್ದಾರೆ. ಇದು ಕೇಂದ್ರ ಸಚಿವರ ವಿರುದ್ಧ ದೊಡ್ಡ ಮಟ್ಟದ ಮಾನಹಾನಿ ಮಾಡಿದೆ ಎಂದು ದೂರಲಾಗಿದೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಣದೀಪ್ ಸುರ್ಜೆವಾಲಾ, ಗೋವಿಂದ್ ಸಿಂಗ್ ದೋಟಾಸ್ರಾ ಅವರು ಆಡಿಯೋ ಟೇಪ್‌ಗಳಲ್ಲಿನ ಸಂಭಾಷಣೆಯನ್ನು ಸಾರ್ವಜನಿಕವಾಗಿ ಓದಿದ್ದಾರೆ ಮತ್ತು “ಅವುಗಳನ್ನು ಆಧಾರವಾಗಿ ಬಳಸಿ ಬಿಜೆಪಿ ಪ್ರಜಾಪ್ರಭುತ್ವವನ್ನು ಪ್ರಚೋದಿಸುತ್ತದೆ, ಜನಾದೇಶವನ್ನು ಹಾಳುಮಾಡುತ್ತದೆ ಮತ್ತು ಸರ್ಕಾರವನ್ನು ಉರುಳಿಸುತ್ತಿದೆ ಎಂದು ಆರೋಪಿಸುವ ಮೂಲಕ ಬಿಜೆಪಿ ಖ್ಯಾತಿಗೆ ಧಕ್ಕೆ ತಂದಿದೆ ಎಂದು ಉಲ್ಲೇಖಿಲಸಲಾಗಿದೆ.


ಇದನ್ನೂ ಓದಿ; ಬಿಜೆಪಿಯೊಂದಿಗಿನ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ ಗೆಹ್ಲೋಟ್ ಬಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read