ಕವಿ ವರವರ ರಾವ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ: ಮಾನವ ಹಕ್ಕುಗಳ ಆಯೋಗ ಆದೇಶ

ಕ್ರಾಂತಿಕಾರಿ ಕವಿ-ಸಾಮಾಜಿಕ ಕಾರ್ಯಕರ್ತ ವರವಾರ ರಾವ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವರ್ಗಾಯಿಸುಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಆದೇಶಿಸಿದೆ. ಅಷ್ಟೆ ಅಲ್ಲದೆ ಅದರ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದೂ ಹೇಳಿದೆ.

ಈ ಕುರಿತು ಆಯೋಗದ ವಿಶೇಷ ಅಧೀಕ್ಷಕ ಮಜಾ ದಾರುವಾಲಾ ದೂರು ನೀಡಿದ್ದು, ಅದರಲ್ಲಿ ಅವರು ಜೈಲಿನಲ್ಲಿ ವರವರ ರಾವ್ ಅನುಭವಿಸಿದ ನೋವುಗಳನ್ನು ಉಲ್ಲೇಖಿಸಿದ್ದಾರೆ.

ಮುಂಬೈನ ತಾಲೋಜ ಜೈಲಿನಲ್ಲಿ 80 ವರ್ಷದ ವರವರ ರಾವ್ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಅವರ ಆರೋಗ್ಯವು ಹದಗೆಡುತ್ತಿದೆ ಎಂದು ವರದಿಯಾಗಿತ್ತು.

ವರವಾರ ರಾವ್ ಅವರಿಗೆ ನಡೆಯಲು ಸಹ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜೈಲು ಅಧಿಕಾರಿಗಳು ಯಾವುದೇ ನೆರವು ನೀಡಲು ಮುಂದೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಸೌಲಭ್ಯಗಳು ಮೂಲಭೂತ ಹಕ್ಕಾಗಿದ್ದು, ಬಂಧಿತರಿಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಆಯೋಗ ತಿಳಿಸಿದೆ.

ಈ ನಿಟ್ಟಿನಲ್ಲಿ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಆಯೋಗವು ವರವರ ರಾವ್ ಅವರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿದೆಯೇ ಎಂದು ಪರಿಶೀಲಿಸಲು ವೈದ್ಯಕೀಯ ತಂಡವನ್ನೂ ರಚಿಸಿತು.

ನಿನ್ನೆ ವರವರ ರಾವ್ ಅವರಿಗೆ ಕೊರೊನಾ ದೃಡಪಟ್ಟಿದ್ದು, ಅವರನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಕುಟುಂಬ, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಹೇಳಿಕೆ ಇನ್ನೂ ಬಂದಿಲ್ಲ.


ಓದಿ: ಕವಿ ವರವರ ರಾವ್ ಬಿಡುಗಡೆಗೊಳಿಸಿ: ಸಾಹಿತಿ, ಚಿಂತಕರ ಆಗ್ರಹ


 

LEAVE A REPLY

Please enter your comment!
Please enter your name here