ಸಂಯುಕ್ತ ಕಿಸಾನ್ ಮೋರ್ಚಾ ಇಂದಿನ (ಫೆ.16) ವಸಂತ ಪಂಚಮಿಯನ್ನು ‘ರೈತ ಹೋರಾಟಗಾರ ಸರ್ ಛೋಟು ರಾಮ್ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ದಿನವೆಂದು’ ಗುರುತಿಸಿ ಭಾರತದ ರೈತರಿಗೆ ಈ ದಿನವನ್ನು ಸಮರ್ಪಿಸಿದೆ. ವಿವಿಧ ರೈತ ಸಂಘಗಳ ಮುಖಂಡರು, ಸರ್ ಛೋಟು ರಾಮ್ ಅವರನ್ನು ಗೌರವಯುತವಾಗಿ ಸ್ಮರಿಸಿ ಅವರ ಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರೈತ ಮುಖಂಡರು, ಸರ್ ಛೋಟು ರಾಮ್ ಅವರು ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೃಷಿ ಸಮುದಾಯಗಳಿಗೆ ನೀಡಿದ ಮಾರ್ಗದರ್ಶನ ಮತ್ತು ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸಿದ ವಿಧಾನವನ್ನು ಶ್ಲಾಘಿಸಿದರು. ರೈತರ ಅನುಕೂಲಕ್ಕಾಗಿ ಬ್ರಿಟಿಷ್ ಆಡಳಿತಗಾರರಿಂದ ಕನಿಷ್ಠ 22 ಪ್ರಮುಖ ಶಾಸನಗಳನ್ನು ಜಾರಿಗೊಳಿಸುವಲ್ಲಿ ಅವರು ಸಫಲರಾದರು. ಇಂದಿಗೂ, ದೇಶದ ರೈತರು ಶೋಷಣೆಯ ವಿರುದ್ಧ ಹೋರಾಡುತ್ತಿದ್ದಾರೆ. ಇವರಿಗೆ ಸರ್ ಛೋಟು ರಾಮ್ ಉತ್ತಮ ಸ್ಫೂರ್ತಿಯ ಮೂಲವಾಗಿ ಉಳಿದಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಸರ್‌ ಛೋಟು ರಾಮ್‌, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪಂಜಾಬ್‌ ಪ್ರಾಂತ್ಯವನ್ನು ಪ್ರತಿನಿಧಿಸುತ್ತಿದ್ದ ರೈತ ನಾಯಕ. ನ್ಯಾಷನಲ್‌ ಯೂನಿಯನಿಸ್ಟ್‌ ಪಕ್ಷವನ್ನು ಕಟ್ಟಿ, ಪಂಜಾಬ್‌ ಪ್ರಾಂತ್ಯದಲ್ಲಿ ರಾಜಕೀಯವಾಗಿ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಬೆಳೆದವರು. ವಕೀಲರಾಗಿ ವೃತ್ತಿ ಆರಂಭಿಸಿದ ಛೋಟು ರಾಮ್‌ 1916ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದರು. ರೋಹ್ಟಕ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಸಂಘಟನೆ ಮಾಡಿದ ಅವರು ರೈತ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಹಂಬಲದೊಂದಿಗೆ 1923ರಲ್ಲಿ ಯೂನಿಯನಿಸ್ಟ್‌ ಪಕ್ಷ ಕಟ್ಟಿದರು. ರೈತರ ಒಳಿತಿಗಾಗಿ ಸಂಘಟನೆಯನ್ನು ತೀವ್ರವಾಗಿಸಿದ ಪಂಜಾಬ್‌ನಲ್ಲಿ ಜಾರಿಗೆ ಬಂದ ಎರಡು ಕೃತಿ ಕಾನೂನುಗಳಿಗೆ ಇವರ ಕೊಡುಗೆ ಅಪಾರವಾದದ್ದು. ಅಷ್ಟೇ ಅಲ್ಲ, 1934 ಪಂಜಾಬ್‌ ಸಾಲ ಪರಿಹಾರ ಕಾಯ್ದೆ ಮತ್ತು ಪಂಜಾಬ್‌ ಸಾಲಗಾರರ ರಕ್ಷಣಾ ಕಾಯ್ದೆ 1936ರ ಜಾರಿಗೂ ಇವರು ಶ್ರಮಿಸಿದರು. ಈ ಕಾನೂನುಗಳು ರೈತರನ್ನು ಸಾಲಗಾರರ ಶೋಷಣೆಯಿಂದ ರಕ್ಷಿಸಿದವು. ಅಷ್ಟೇ ಅಲ್ಲ, ರೈತರ ಭೂಮಿಯನ್ನು ಉಳಿಸಿಕೊಟ್ಟವು. ಇದಲ್ಲದೆ ಎಪಿಎಂಸಿ ಕಾಯ್ದೆ, ಸಾಲ ಮನ್ನಾ ಅಧಿನಿಯಮಗಳ ಜಾರಿಗೂ ಛೋಟು ರಾಮ್‌ ಶ್ರಮಿಸಿ ರೈತರನ್ನು ವಿವಿಧ ರೀತಿಯ ಶೋಷಣೆಗಳಿಂದ ರಕ್ಷಿಸಿದರು.

ಮುಂದುವರಿದು, ಹರಿಯಾಣದ ಮಂತ್ರಿಗಳಾದ ಜೆಪಿ ದಲಾಲ್ ಮತ್ತು ಅನಿಲ್ ವಿಜ್ ಅವರಂತಹ ರೈತ ವಿರೋಧಿ ಮಂತ್ರಿಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಹರಿಯಾಣ ರೈತ ಮುಖಂಡರು ಒತ್ತಾಯಿಸಿದರು. ಹರಿಯಾಣದ ಮಹಾಪಂಚಾಯತ್‌ಗಳು ಈ ನಿಟ್ಟಿನಲ್ಲಿ ನಿರ್ಣಯಗಳನ್ನು ಅಂಗೀಕರಿಸುತ್ತಿದ್ದು, ತಮ್ಮ ರೆಸಲ್ಯೂಶನ್ ಪ್ರತಿಗಳನ್ನು ಮುಖ್ಯಮಂತ್ರಿ ಮತ್ತು ಹರಿಯಾಣ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಣದುಬ್ಬರವಾಗುತ್ತಿದ್ದಂತೆ ಕಬ್ಬಿನ ಬೆಲೆಗಳು ಸ್ಥಿರವಾಗಿ ಉಳಿದಿವೆ ಮತ್ತು ಕಬ್ಬು ಬೆಳೆಯುವ ರೈತರಿಗೆ ಉತ್ತರ ಪ್ರದೇಶದಲ್ಲೇ ಸುಮಾರು 12,000 ಕೋಟಿ ರೂಪಾಯಿ ಬಾಕಿ ಇರುವುದನ್ನು ತಿಳಿಸಿ ಉತ್ತರ ಪ್ರದೇಶದ ರೈತರು ಗಮನಸೆಳೆದಿದ್ದಾರೆ. ಇದರ ಜೊತೆಗೆ “ಯುಪಿ ಸರ್ಕಾರದ ರೈತ ವಿರೋಧಿ ನೀತಿಗಳು ಬಹಳ ಸ್ಪಷ್ಟವಾಗಿದ್ದು, ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇನ್ನು ಹೆಚ್ಚಿನ ರೈತರು ಸೇರುವ ನಿರೀಕ್ಷೆಯಿದೆ” ಎಂಬ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಮೋದಿ ಅಳಿಯಂದಿರು ಬಂದರು ಹುಷಾರು’: ರೈತ ಬೂಟಾ ಸಿಂಗ್ ಎಚ್ಚರಿಕೆ

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ದೇಶಾದ್ಯಂತ ಕಿಸಾನ್ ಮಹಾಪಂಚಾಯತ್ ಮತ್ತು ಜನಸಭೆಗಳು ಹೆಚ್ಚಾಗುತ್ತಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. ಇತ್ತೀಚಿಗೆ ತೆಲಂಗಾಣದ ಖಮ್ಮಂನಲ್ಲಿ ಮಹಾಪಂಚಾಯತ್ ನಡೆದಿದ್ದು, ಅಲ್ಲಿ ಹತ್ತಾರು ಸಾವಿರ ರೈತರು ಭಾಗವಹಿಸಿದ್ದಾರೆ ಎಂದು ತಿಳಿಸಲಾಗಿದೆ. ರ್ಯಾಲಿ ಮತ್ತು ಸಾರ್ವಜನಿಕ ಸಭೆಯನ್ನು ಎಐಕೆಎಂಎಸ್ ಆಯೋಜಿಸಿತ್ತು.

ರೈತರ ಆಂದೋಲನವನ್ನು ಬೆಂಬಲಿಸಿ ವಾರ್ಧಾದಲ್ಲಿ ಪ್ರಾರಂಭವಾದ ಪಕ್ಕಾ ಮೋರ್ಚಾ ಈಗ 65 ನೇ ದಿನಕ್ಕೆ ಕಾಲಿಟ್ಟಿದ್ದು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಇತರೆ ಅನೇಕ ವರ್ಗಗಳು ಈ ಮೋರ್ಚಾದ ಭಾಗವಾಗಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದ ಮೇಲಿನ ಆಕ್ರೋಶದಿಂದ ಇತರ ಜನರು ಕಾನೂನುಗಳನ್ನು ಉಲ್ಲಂಘಿಸುತ್ತಾರೆ. ಆದರೆ ರೈತರಿಗೇನಾದರೂ ಆಕ್ರೋಶವುಂಟಾದರೆ ಅವರು ಕೇವಲ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ, ಸರ್ಕಾರದ ಬುಡವನ್ನೇ ಮುರಿಯುತ್ತಾರೆ. – ಸರ್ ಛೋಟು ರಾಮ್


ಇದನ್ನೂ ಓದಿ: ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್‌ನಲ್ಲಿ ವಿಭಿನ್ನ ಪ್ರತಿರೋಧ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here