Homeಎಕಾನಮಿಹತ್ತು ವರ್ಷಗಳ ಬಳಿಕ ದಿನವೊಂದರಲ್ಲೆ ಅತಿ ಹೆಚ್ಚು ಕುಸಿತ ಕಂಡ ರಿಲಯನ್ಸ್‌ ಷೇರುಗಳು..

ಹತ್ತು ವರ್ಷಗಳ ಬಳಿಕ ದಿನವೊಂದರಲ್ಲೆ ಅತಿ ಹೆಚ್ಚು ಕುಸಿತ ಕಂಡ ರಿಲಯನ್ಸ್‌ ಷೇರುಗಳು..

- Advertisement -
- Advertisement -

ರಿಲಯನ್ಸ್‌ ಷೇರುಗಳು ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ದಿನವೊಂದರಲ್ಲೆ ಅತಿ ಹೆಚ್ಚು ಕುಸಿತ ಕಂಡುವೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡಾ 10 ರಷ್ಟು ಕುಸಿದಿವೆ.

ಸೌದಿ ಮತ್ತು ರಷ್ಯಾದ ನಡುವೆ ನಡೆಯುತ್ತಿರುವ ದರ ಸಮರದಿಂದಾಗಿ ಪೆಟ್ರೋಲ್‌ ಕಚ್ಚಾ ತೈಲಗಳ ಬೆಲೆಯು 30 ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಕುಸಿದಿದೆ. ಇದರ ಹೊಡೆತವು ಉಳಿದ ತೈಲ ಪೂರೈಕೆದಾರರ ಮೇಲೂ ಆಗಿದ್ದ ಪರಿಣಾಮ ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಷೇರುಗಳು ಕುಸಿದಿವೆ.

ಜಾಮ್‌ನಗರದಲ್ಲಿರುವ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕ ಮತ್ತು ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕೆಜಿ-ಡಿ 6 ಜಲಾನಯನ ಪ್ರದೇಶದ ಆಪರೇಟರ್ – ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 10 ರಷ್ಟು ಕುಸಿದಿದೆ. ಇಂದು ಅದು 1,143, ಬಿಎಸ್‌ಇಯ ದತ್ತಾಂಶಕ್ಕೆ ಇಳಿದಿದೆ.

ಕೇಂದ್ರದ ಒಡೆತನದ ಒಎನ್‌ಜಿಸಿ ಸಹ ಶೇಕಡಾ 13 ರಷ್ಟು ಕುಸಿದು ದಿನದ ದಿನದ ಕನಿಷ್ಠ 77.80 ರೂ.ಗೆ ತಲುಪಿದೆ.

ಕೊರೋನಾ ವೈರೆಸ್‌ ಭೀತಿ ಸಮಯದಲ್ಲಿ ರಷ್ಯಾದೊಂದಿಗೆ ದರಸಮರಕ್ಕೆ ಇಳಿದಿರುವ ಸೌದಿಯು ಬೆಲೆಗಳನ್ನು ಕಡಿತಗೊಳಿಸಿದ ನಂತರ 1991 ರ ನಂತರದ ಕಚ್ಚಾ ತೈಲಬೆಲೆಯಲ್ಲಿ ಅತಿದೊಡ್ಡ ಕುಸಿತ ಉಂಟಾಗಿದೆ.

ಬ್ರೆಂಟ್ ಕಚ್ಚಾ ತೈಲಬೆಲೆಯು ಬ್ಯಾರೆಲ್‌ ಒಂದಕ್ಕೆ $ 14.25 ಡಾಲರ್‌ (31.5%)ಕುಸಿದಿದ್ದು $ 31.02 ಡಾಲರ್‌ಗೆ ತಲುಪಿದೆ. ಇದು ಜನವರಿ 17, 1991 ರ ನಂತರ ಅತಿ ಹೆಚ್ಚಿನ ಇಳಿಕೆಯಾಗಿದೆ.

ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾ, ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ರಷ್ಯಾದ ವಿರುದ್ಧ ದರ ಸಮರಕ್ಕೆ ಮುಂದಾಗಿದೆ. ಆ ಮೂಲಕ ದರ ಕಡಿಮೆ ಮಾಡಿ ಹೆಚ್ಚಿನ ಗ್ರಾಹಕ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಇದರ ಉದ್ದೇಶವಾಗಿದೆ.

ಕರೋನವೈರಸ್ ಭೀತಿಯಿಂದ ಏಕಾಏಕಿ ಉಂಟಾದ ಆರ್ಥಿಕ ಕುಸಿತದಿಂದ ತೈಲ ಆಮದು ದಿನೇ ದಿನೇ ಕಡಿಮೆಯಾಗುತ್ತಿರುವುದು ಸಹ ದರ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.

ಈ ದರ ಇಳಿಕೆಯ ಪ್ರಯೋಜನ ಜನಸಾಮಾನ್ಯರಿಗೆ ದಕ್ಕುವುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...