Homeಅಂತರಾಷ್ಟ್ರೀಯ1962 ರ ನಂತರ ಇದೇ ಮೊದಲ ಬಾರಿಗೆ ಲಡಾಖ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ಒಪ್ಪಿಕೊಂಡ ವಿದೇಶಾಂಗ...

1962 ರ ನಂತರ ಇದೇ ಮೊದಲ ಬಾರಿಗೆ ಲಡಾಖ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ಒಪ್ಪಿಕೊಂಡ ವಿದೇಶಾಂಗ ಸಚಿವ

ಲಡಾಖ್ ಗಡಿಯೊಳಗೆ ನುಗ್ಗಿ ಯಾವುದೇ ಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.

- Advertisement -
- Advertisement -

1962 ರ ಭಾರತ-ಚೀನಾ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಲಡಾಖ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ.

ತಮ್ಮ ಪುಸ್ತಕ ಬಿಡುಗಡೆಯ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿವ ಜೈಶಂಕರ್‌, “ಇದು ಖಂಡಿತವಾಗಿಯೂ 1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ. ವಾಸ್ತವದಲ್ಲಿ 45 ವರ್ಷಗಳ ನಂತರ ಈ ಗಡಿಯಲ್ಲಿ ಮಿಲಿಟರಿ ಸಾವುನೋವುಗಳು ಆಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಪ್ರಸ್ತುತ ಎರಡೂ ಕಡೆಯವರು ಭಾರಿ ಸಂಖ್ಯೆಯ ಪಡೆಗಳನ್ನು ನಿಯೋಜಿಸಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇತ್ತೀಚಿನ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಡಿಯೋ ಬಹಿರಂಗ? ವಾಸ್ತವವೇನು?

ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸದೆ ಎಲ್ಲಾ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಗೌರವಿಸುವ ಬಗ್ಗೆ ಚೀನಾದೊಂದಿಗಿನ ಗಡಿ ರೇಖೆಗೆ ಪರಿಹಾರವನ್ನು ದೃಡೀಕರಿಸಬೇಕು ಎಂದು ಸಚಿವರು ಹೇಳಿದರು.

ವಾಸ್ತವಿಕ ನಿಯಂತ್ರಣ ರೇಖೆಯ ಪರಿಸ್ಥಿತಿಯ ಬಗ್ಗೆ ಜೂನ್‌ನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಗಡಿಯೊಳಗೆ ಯಾರೂ ನುಗ್ಗಿಲ್ಲ, ನುಗ್ಗಿವಂತಿಲ್ಲ ಹಾಗೂ ನಮ್ಮ ಯಾವುದೇ ಪ್ರದೇಶಗಳನ್ನು ಯಾರೂ ವಶಪಡಿಸಿಕೊಂಡಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!

“ಚೀನಾ ಸೇನೆ ಟಿಬೆಟ್‌ನ ಗಯಾಂಟ್ಸೆಯಲ್ಲಿ ಬ್ರಿಗೇಡ್ ಗಾತ್ರದ ಸೇನಾನೆಲೆಯನ್ನು ಅನ್ನು ನಿರ್ಮಿಸುತ್ತಿದೆ, ಇದು ಭೂಸೈನ್ಯಕ್ಕೆ ಮೀಸಲಾಗಿರುವಂತೆ ಕಾಣುತ್ತದೆ. ಇದನ್ನು ಜನವರಿ 2020 ರ ನಂತರ ಪ್ರಾರಂಭಿಸಲಾಯಿತು ಮತ್ತು 2021 ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ” ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ಉಲ್ಲೇಖಿಸಿವೆ. ಹೊಸ ಸೇನಾನೆಲೆಯಲ್ಲಿ ಆರು ಬೆಟಾಲಿಯನ್ ಪ್ರದೇಶದ ಪ್ರಧಾನ ಕಚೇರಿ ಮತ್ತು 600 ಕ್ಕೂ ಹೆಚ್ಚು ವಾಹನಗಳು ಹಾಗೂ ಸಲಕರಣೆಗಳ ಶೆಡ್‌ಗಳನ್ನು ಹೊಂದಿರುವ ಆಡಳಿತ ಪ್ರದೇಶವಿದೆ.

ಲಡಾಖ್ ಮಾತ್ರವಲ್ಲದೆ, ವಾಸ್ತವಿಕ ನಿಯಂತ್ರಣ ರೇಖೆಯ ಪೂರ್ವ ಗಡಿಯಲ್ಲಿಯೂ ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


ಓದಿ: ಪ್ಯಾಂಗೊಂಗ್ ತ್ಸೊದಲ್ಲಿ ಹೆಲಿಪ್ಯಾಡ್ ಹಾಗೂ ಸೈನ್ಯವನ್ನು ಒಟ್ಟುಗೂಡಿಸುತ್ತಿರುವ ಚೀನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...