Homeಅಂತರಾಷ್ಟ್ರೀಯಅಮೇರಿಕಾ ಚುನಾವಣೆ: ಶೇಕಡ 69 ರಷ್ಟು ಮುಸ್ಲಿಮರು ಜೋ ಬೈಡೆನ್ ಪರ; ಸಮೀಕ್ಷೆ!

ಅಮೇರಿಕಾ ಚುನಾವಣೆ: ಶೇಕಡ 69 ರಷ್ಟು ಮುಸ್ಲಿಮರು ಜೋ ಬೈಡೆನ್ ಪರ; ಸಮೀಕ್ಷೆ!

ಅಮೇರಿಕಾದಲ್ಲಿ ಸುಮಾರು 3.45 ಮಿಲಿಯನ್ ಮುಸ್ಲಿಮರು ವಾಸಿಸುತ್ತಿದ್ದು, ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 1.1 ರಷ್ಟಿದ್ದಾರೆ.

- Advertisement -
- Advertisement -

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಸುಮಾರು ಶೇಕಡ 69 ಪ್ರತಿಶತದಷ್ಟು ಮುಸ್ಲಿಂ ಮತದಾರರು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಪರ ಮತ ಚಲಾಯಿಸಿದ್ದು, ಶೇಕಡ 17 ರಷ್ಟು ಜನರು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ ಎಂದು ಮುಸ್ಲಿಂ ನಾಗರಿಕ ಸ್ವಾತಂತ್ರ್ಯ ಮತ್ತು ವಕಾಲತ್ತು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ದೇಶದ ಅತಿದೊಡ್ಡ ಮುಸ್ಲಿಂ ನಾಗರಿಕ ಹಕ್ಕುಗಳು ಮತ್ತು ವಕಾಲತ್ತು ಸಂಘಟನೆ, ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್ (CAIR) ತನ್ನ 2020 ಮುಸ್ಲಿಂ ಮತದಾರರ ಅಧ್ಯಕ್ಷೀಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿತು. ದಾಖಲೆಯ ಶೇಕಡ 84 ರಷ್ಟು ಮುಸ್ಲಿಮರು ಮತಚಲಾವಣೆ ಮಾಡಿದ್ದಾರೆ ಎಂದು CAIR ನ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಸೋಶಿಯಲಿಸಂ-ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಒಂದಾಗಬೇಕು: Jr. ಟ್ರಂಪ್

CAIR ರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ನಿಹಾದ್ ಅವದ್, “ರಾಷ್ಟ್ರಪತಿ ಚುನಾವಣೆ ಸೇರಿದಂತೆ ಈ ದೇಶದಾದ್ಯಂತ ಹಲವಾರು ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಮುಸ್ಲಿಂ ಸಮುದಾಯದ ಮಹತ್ವದ ಸಾಮರ್ಥ್ಯವನ್ನು ರಾಷ್ಟ್ರೀಯವಾಗಿ ಗುರುತಿಸಲಾಗಿದೆ” ಎಂದು ಹೇಳಿದರು.

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯವು ವಹಿಸುವ ಪಾತ್ರವನ್ನು ನಿರಾಕರಿಸುವಂತಿಲ್ಲ ಎಂದು CAIR ಸರ್ಕಾರಿ ವ್ಯವಹಾರಗಳ ನಿರ್ದೇಶಕ ರಾಬರ್ಟ್ ಎಸ್ ಮೆಕ್‌ಕಾವ್ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಎಲ್ಲಾ ಅಮೆರಿಕನ್ನರ ನಾಗರಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ ಮತ್ತು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಚುನಾಯಿತ ರಾಜಕಾರಣಿಗಳನ್ನು ಜವಾಬ್ದಾರಿಯುತವಾಗಿ ಆಯ್ಕೆ ಮಾಡುವ ಸಮಯ ಇದು” ಎಂದು ಮೆಕ್‌ಕಾವ್ ಹೇಳಿದರು.

ಇದನ್ನೂ ಓದಿ: ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

2016 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ಗೆ ಆಗ ಶೇಕಡ 13 ರಷ್ಟು ಮುಸ್ಲಿಮರ ಬೆಂಬಲ ಇತ್ತು. 2020ರಲ್ಲಿ ಇದು ಶೇಕಡ 4 ರಷ್ಟು ಹೆಚ್ಚಿದ್ದು, ಈಗ 17 ರಷ್ಟಾಗಿದೆ.

ಪ್ಯೂ ರಿಸರ್ಚ್ ಸೆಂಟರ್ ಪ್ರಕಾರ, 2017 ರಲ್ಲಿ ಅಮೇರಿಕಾದಲ್ಲಿ ಸುಮಾರು 3.45 ಮಿಲಿಯನ್ ಮುಸ್ಲಿಮರು ವಾಸಿಸುತ್ತಿದ್ದು, ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 1.1 ರಷ್ಟಿದ್ದಾರೆ.


ಇದನ್ನೂ ಓದಿ: US Election 2020 Results LIVE Updates: ಯಾರು ಗೆಲ್ಲಲಿದ್ದಾರೆ ಅಮೆರಿಕಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...