Homeಮುಖಪುಟವಾರಣಾಸಿ: ನೇಪಾಳಿ ಯುವಕನ ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಹಿಂದುತ್ವವಾದಿಗಳು

ವಾರಣಾಸಿ: ನೇಪಾಳಿ ಯುವಕನ ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಹಿಂದುತ್ವವಾದಿಗಳು

ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿ ವಾಸಿಸುತ್ತಿರುವ ನೇಪಾಳಿಗಳು ಒಲಿ ವಿರುದ್ಧ ಧ್ವನಿ ಎತ್ತಬೇಕು, ಇಲ್ಲದಿದ್ದರೆ ಅವರು ಕೂಡ ಇದನ್ನೇ ಎದುರಿಸಬೇಕು ಸಂಘಟನೆ ಎಚ್ಚರಿಸಿದ್ದಾರೆ.

- Advertisement -
- Advertisement -

ಈಗಾಗಲೇ ಬಿಗಡಾಯಿಸಿರುವ ಭಾರತ-ನೇಪಾಳ ಸಂಬಂಧದ ಮೇಲೆ ಪರಿಣಾಮ ಬೀರಬಹುದಾದ ಘಟನೆಯೊಂದರಲ್ಲಿ ವಾರಣಾಸಿಯಲ್ಲಿ ನಡೆದಿದ್ದು, ಕೇಸರಿ ಸಂಘಟನೆಯ ಕಾರ್ಯಕರ್ತರು ನೇಪಾಳಿ ಯುವಕನನ್ನು ತಲೆಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದಾರೆ.

ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಸೇನೆಯ (ವಿಎಚ್‌ಎಸ್) ಕಾರ್ಯಕರ್ತರು ಯುವಕನ ತಲೆಯಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದು ನೇಪಾಳಿ ಪ್ರಧಾನಿ ಓಲಿ ವಿರುದ್ಧ ಘೋಷಣೆಗಳನ್ನು ಕೂಗುವಂತೆ ಮಾಡಿದ್ದಾರೆ.

ಗುರುವಾರ ನಡೆದ ಈ ಘಟನೆಯನ್ನು ವಿಶ್ವ ಹಿಂದೂ ಸೇನಾ ಚಿತ್ರೀಕರಿಸಿದ್ದು, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದೆ.

ನೇಪಾಳಿ ಯುವಕನ ತಲೆ ಬೋಳಿಸಿ ಜೈ ಶ್ರೀರಾಮ್ ಎಂದು ಬರೆದು, ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ ವಾರಣಾಸಿಯ ಹಿಂದುತ್ವ ಸಂಘಟನೆಯ ಯುವಕರು..

Posted by Naanu Gauri on Friday, July 17, 2020

ಅಲ್ಲದೆ ಗಂಗಾ ದಡದಲ್ಲಿ ಮತ್ತು ನಗರದ ದೇವಾಲಯಗಳಲ್ಲಿ ಓಲಿಯನ್ನು ಟೀಕಿಸುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಎಚ್‌ಎಸ್ ಕನ್ವೀನರ್ ಅರುಣ್ ಪಾಠಕ್ ವಿರುದ್ಧ ಎಫ್‌ಐಆರ್ ದಾಖಲಿಸಿ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತರ ಆರೋಪಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ.

ಪಾಠಕ್ ಕೂಡ ಈ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿ ವಾಸಿಸುತ್ತಿರುವ ನೇಪಾಳಿಗಳು ಒಲಿ ವಿರುದ್ಧ ಧ್ವನಿ ಎತ್ತಬೇಕು, ಇಲ್ಲದಿದ್ದರೆ ಅವರು ಕೂಡ ಇದನ್ನೇ ಎದುರಿಸಬೇಕು ಎಂದು ಎಚ್ಚರಿಸಿದ್ದಾರೆ.

‘ಜೈ ಶ್ರೀ ರಾಮ್’ ಎಂದು ಹೇಳಿಸುವುದರ ಜೊತೆಗೆ ನೇಪಾಳಿ ಯುವಕನಿಗೆ ಒಲಿ ವಿರುದ್ಧ ಘೋಷಣೆಗಳನ್ನು ಕೂಗಲು ಹಾಗೂ ಭಾರತಕ್ಕೆ ಜಯಕಾರ ಹಾಕಲು ಒತ್ತಾಯಿಸಲಾಗುತ್ತದೆ. ದೇಶದ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಒಲಿ ವಿಫಲರಾಗಿದ್ದಾರೆ ಮತ್ತು ಭಾರತ ಅವರಿಗೆ ಉದ್ಯೋಗ ನೀಡಿದೆ ಎಂದು ಯುವಕ ಹೇಳಿದ್ದಾರೆ.

“ಅಯೋಧ್ಯೆ ತಮ್ಮ ದೇಶದಲ್ಲಿದೆ ಮತ್ತು ರಾಮ ಸಹ ಅಲ್ಲಿಯೇ ಹುಟ್ಟಿದ್ದಾನೆ ಎಂದು ಹೇಳುವ ಮೂಲಕ ನೇಪಾಳ ಪ್ರಧಾನಿ ಕ್ಷಮಿಸಲಾಗದ ಕೃತ್ಯವನ್ನು ಮಾಡಿದ್ದಾರೆ … ಇದನ್ನು ನಾವು ಸಹಿಸುವುದಿಲ್ಲ” ಎಂದು ಪಾಠಕ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.


ಓದಿ:ಶ್ರೀರಾಮನ ಜನ್ಮಸ್ಥಳ ನೇಪಾಳದಲ್ಲಿದೆ ಎನ್ನುವುದು ಹಾಸ್ಯಾಸ್ಪದ: ಶಿವಸೇನೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...