Homeಕರ್ನಾಟಕಕಾಲೇಜ್‌‌ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ‘ಗೂಂಡಾ ಸಂಘಟನೆ’ಗಳಿಗೆ ಹಕ್ಕಿಲ್ಲ: ಅಲೋಶಿಯಸ್‌‌ ಬೆಂಬಲಕ್ಕೆ ನಿಂತ ಜನಪರ ಸಂಘಟನೆಗಳು

ಕಾಲೇಜ್‌‌ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ‘ಗೂಂಡಾ ಸಂಘಟನೆ’ಗಳಿಗೆ ಹಕ್ಕಿಲ್ಲ: ಅಲೋಶಿಯಸ್‌‌ ಬೆಂಬಲಕ್ಕೆ ನಿಂತ ಜನಪರ ಸಂಘಟನೆಗಳು

ಏನೇ ಆದರೂ ಸರಿಯೇ, ನಾವು ಫಾದರ್ ಸ್ಟಾನ್‌ ಸ್ವಾಮಿ ಪರ ನಿಲ್ಲುತ್ತೇವೆ ಎಂದು ಜನಪರ ಸಂಘಟನೆಗಳು ಮತ್ತು ಹಳೆ ವಿದ್ಯಾರ್ಥಿಗಳು ಹೇಳಿದ್ದಾರೆ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್‌‌ ಸ್ವಾಯತ್ತ ಕಾಲೇಜ್‌ ತನ್ನ ಕ್ಯಾಂಪಸ್‌ನಲ್ಲಿ ಇರುವ ಉದ್ಯಾನವನಕ್ಕೆ, ದೇಶದ ಖ್ಯಾತ ಮಾನವಹಕ್ಕು ಕಾರ್ಯಕರ್ತ ದಿವಂಗತ ಫಾದರ್‌ ಸ್ಟಾನ್ ಸ್ವಾಮಿ ಅವರ ಹೆಸರನ್ನು ಇಡಲು ನಿರ್ಧರಿಸಿದೆ. ಆದರೆ ಇದಕ್ಕೆ ಬಿಜೆಪಿ ಪರ ಸಂಘಟನೆಗಳಾದ ಬಜರಂಗದಳ ಮತ್ತು ವಿಎಚ್‌ಪಿ ವಿರೋಧ ವ್ಯಕ್ತಪಡಿಸಿತ್ತು. ಈ ದಾಳಿಯನ್ನು ವಿರೋಧಿಸಿರುವ ಜನಪರ ಸಂಘಟನೆಗಳು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾಲೇಜನ್ನು ಬೆಂಬಲಿಸಿ ಬಹಿರಂಗ ಪತ್ರ ಬರೆದಿದ್ದಾರೆ.

ಜನಪರ ಸಂಘಟನೆಗಳು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಗಳು ಬರೆದ ಬಹಿರಂಗ ಪತ್ರದಲ್ಲಿ, ‘‘ಖಾಸಗಿ ಸ್ವಾಯತ್ತ ಕಾಲೇಜು ತೆಗೆದುಕೊಳ್ಳುವ ಸಮಾಜಮುಖಿ ನಿರ್ಧಾರಗಳ ಮೇಲೆ ಹಸ್ತಕ್ಷೇಪ ಮಾಡಲು ಗೂಂಡಾ ಸಂಸ್ಥೆಗಳಿಗೆ ಯಾವುದೆ ಹಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆದರಿಕೆ ಹಾಕುವ ಈ ಸಂಘಟನೆಗಳ ವಿರುದ್ದ ತಕ್ಷಣ ಕ್ರಮಕೈಗೊಳ್ಳಬೇಕು ಮತ್ತು ಕಾಲೇಜಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಹೋರಾಟಗಾರರನ್ನು ಬಿತ್ತಲಾಗುತ್ತದೆ; ಹೂಳಲಾಗುವುದಿಲ್ಲ’ – ಸ್ಟಾನ್‌ಸ್ವಾಮಿ ನಿಧನಕ್ಕೆ ಒಕ್ಕೂಟ ಸರ್ಕಾರದ ವಿರುದ್ದ ದೇಶದಾದ್ಯಂತ ಆಕ್ರೋಶ

“ಗಂಭೀರವಾದ ಅಪರಾಧಿಕ ಬೆದರಿಕೆಗಳನ್ನು ಹಾಕುವುದರಲ್ಲಿ ತೊಡಗಿಸಿಕೊಂಡಿರುವ ಗೂಂಡಾ ಸಂಸ್ಥೆಗಳ ವಿರುದ್ದ ಪೊಲೀಸರು ತಕ್ಷಣ ಕ್ರಮಕೈಗೊಳ್ಳಬೇಕು. ಖಾಸಗಿ ಸ್ವಾಯತ್ತ ಕಾಲೇಜು ತೆಗೆದುಕೊಳ್ಳುವ ಸಮಾಜಮುಖಿ ನಿರ್ಧಾರಗಳ ಮೇಲೆ ಹಸ್ತಕ್ಷೇಪ ಮಾಡಲು ಗೂಂಡಾ ಸಂಸ್ಥೆಗಳಿಗೆ ಯಾವುದೆ ಹಕ್ಕಿಲ್ಲ. ಈ ಸಂಘಟನೆಗಳಿಗೆ ಒಂದು ನಿರ್ಧಿಷ್ಟ ಉದ್ದೇಶಿತ ಕಾರ್ಯಸೂಚಿಯಿದ್ದು, ಅದರ ಈಡೇರಿಕೆಗಾಗಿ ಹಿಂಸೆ ಮತ್ತು ಕೋಮುವಾದ ಹರಡಿರುವುದರಲ್ಲಿ ಕುಖ್ಯಾತ ಇತಿಹಾಸವನ್ನು ಹೊಂದಿವೆ” ಎಂದು ಉಲ್ಲೇಖಿಸಲಾಗಿದೆ.

“ಗೂಂಡಾ ಸಂಸ್ಕೃತಿಯನ್ನು ಹೊಂದಿರುವ ಫ್ಯಾಸಿಸ್ಟ್‌‌ ಸಂಘಟನೆಗಳು ಕರಾವಳಿ ಕರ್ನಾಟಕದಲ್ಲಿ ನಾಗರೀಕರ ಖಾಸಗಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಯಾವುದೆ ಭಯವಿಲ್ಲದೆ ದಿನನಿತ್ಯ ಹಿಂಸಾಚಾರ ಮತ್ತು ಬೆದರಿಕೆಯನ್ನು ಒಡ್ಡುವುದು ಕೆಲಸವನ್ನಾಗಿ ಮಾಡಿಕೊಂಡಿದೆ. ಏನೇ ಆದರೂ ಸರಿಯೇ, ನಾವು ಫಾದರ್ ಸ್ಟಾನ್‌ ಸ್ವಾಮಿ ಪರ ನಿಲ್ಲುತ್ತೇವೆ. ಬೆದರಿಕೆ ಹಾಕುವ ಈ ಸಂಘಟನೆಗಳ ವಿರುದ್ದ ತಕ್ಷಣ ಕ್ರಮಕೈಗೊಳ್ಳಬೇಕು ಮತ್ತು ಕಾಲೇಜಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಕ್ಯಾಥೋಲಿಕ್ ಪಾದ್ರಿಯಾಗಿದ್ದ ಸ್ಟಾನ್ ಸ್ವಾಮಿ ಕೇರಳ ಮೂಲದವರಾಗಿದ್ದು ತಮ್ಮ ಜೀವನದ 50 ವರ್ಷಗಳ ಕಾಲ ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಹಲವು ರೀತಿಯ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಎಲ್ಗರ್‌ ಪರಿಷತ್ ಪ್ರಕರಣದಲ್ಲಿ NIA ಕಳೆದ ವರ್ಷ ಅಕ್ಟೋಬರ್‌ 8 ರಂದು ಬಂಧಿಸಿತ್ತು. ಅವರು ಪ್ರಕರಣದ ಸಂಬಂಧ ಬಂಧನಕ್ಕೊಳಗಾದ 16 ನೇ ವ್ಯಕ್ತಿಯಾಗಿದ್ದು, ಇದುವರೆಗೂ ಬಂಧಿಸಿದವರಲ್ಲಿ ಹಿರಿಯರಾಗಿದ್ದರು. ಸುಮಾರು ಒಂಬತ್ತು ತಿಂಗಳು ಜೈಲಿನಲ್ಲೇ ಇದ್ದ ಅವರು ಕಳೆದ ಜುಲೈ 5 ರಂದು ಮೃತಪಟ್ಟಿದ್ದರು. ಅವರ ಹೆಸರನ್ನು ಕಾಲೇಜಿನ ಉದ್ಯಾನವೊಂದಕ್ಕೆ ಇಡುವುದಾಗಿ ಕಾಲೇಜು ಮಂಡಳಿ ನಿರ್ಧರಿಸಿತ್ತು.

ಪತ್ರವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: ಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...