Homeಮುಖಪುಟಸಾಕಾಗದ ಪರಿಹಾರ ಹಣ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಿಲ್ಲದ ಟೀಕೆ..

ಸಾಕಾಗದ ಪರಿಹಾರ ಹಣ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಿಲ್ಲದ ಟೀಕೆ..

- Advertisement -
- Advertisement -

ಪ್ರವಾಹ ಪರಿಹಾರ ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ, ಒತ್ತಾಯ ಮತ್ತು ಟೀಕೆಯ ನಂತರ ಕೇಂದ್ರ ಸರ್ಕಾರ 1200 ಕೋಟಿ ಪರಿಹಾರ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಅದಕ್ಕೂ ಬಿಜೆಪಿ ಶಾಸಕರು, ಬೆಂಬಲಿಗರೂ ಸೇರಿದಂತೆ ಉತ್ತರ ಕರ್ನಾಟಕದ ಜನ ಬಹಳಷ್ಟು ಹೋರಾಟ ಮಾಡಬೇಕಾಗಿ ಬಂದಿತ್ತು. ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

“ಹೊದ್ಕೊಳ್ಳೊಕೆ ಕಂಬಳೀ ಕೇಳ್ದ್ರೆ .. ಕರ್ಚೀಪ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ ಉತ್ತರಕುಮಾರರು…ಪ್ರಜೆಗಳೇ.. ಮರುಳಾಗದಿರಿ ..ದೇಶದ ದುಡ್ಡು ನಮ್ದು.. ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ… ಪ್ರಶ್ನಿಸೋದನ್ನ ನಿಲ್ಲಿಸ್ಬೇಡಿ… ಯಾರೇ ಆದ್ರು ನಾವು ಉಗೀತಿದ್ರೇನೆ ಕೆಲಸ ಮಾಡೊದು ಅಲ್ವಾ?? ಜಸ್ಟ್ ಆಸ್ಕಿಂಗ್” ಎಂದು ಚಿತ್ರನಟ ಎಂದು ಪ್ರಕಾಶ್ ರಾಜ್ ಮತ್ತೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

“ಹಿಂದೆಂದೂ ಕಂಡರಿಯದ ನೆರೆ ಪರಿಸ್ಥಿತಿಯಿಂದ ಆಗಿರುವ ನಷ್ಟ ಅಂದಾಜು ರೂ.50,000‌ ಕೋಟಿ, ರಾಜ್ಯ ಸರ್ಕಾರ ಕೇಳಿದ್ದು ರೂ.35,000 ಕೋಟಿ. ಕೇಂದ್ರ ಕೊಟ್ಟಿರುವುದು ರೂ.1200 ಕೋಟಿ. ಇದು ಬ್ರಹ್ಮಾಂಡ ಹಸಿವಿಗೆ ಅರೆಕಾಸಿನ ಮಜ್ಜಿಗೆಯಂತೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಕೇಂದ್ರದ ಗೃಹ ಇಲಾಖೆ 1200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅಂತ ಶಿಫಾರಸ್ಸು ಮಾಡಿದ್ದೆ ಹೊರತು ಕರ್ನಾಟಕಕ್ಕೆ ಕೊಟ್ಟೆ ಕೊಡಬೇಕು ಅಂತಲ್ಲ. ಗೃಹ ಇಲಾಖೆ ಶಿಫಾರಸ್ಸನ್ನು ಪರಿಗಣಿಸಿದ NDRF ಕೊಟ್ಟ ಅನುದಾನ 897 ಕೋಟಿ ರೂಪಾಯಿ. ಒಟ್ಟಿನಲ್ಲಿ ಬಿಜೆಪಿಗೆ ಕನ್ನಡಿಗರ ವೋಟ್ ಬೇಕೆ ಹೊರತು ಕನ್ನಡಿಗರ ಹಿತಾಸಕ್ತಿ ಅಲ್ಲ ಕಣ್ರಪ್ಪ” ಎಂದು ಪ್ರಾಧ್ಯಾಪಕರಾದ ನಾಗೇಗೌಡ ಕೀಲಾರರವರು ಬೇಸರ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕ ಒಂದು ದಿನಕ್ಕೆ ಕೇಂದ್ರ ಸರಕಾರಕ್ಕೆ ಕಟ್ಟೋ ತೆರಿಗೆ, ನೆರೆ ಪರಿಹಾರಕ್ಕೆ ನೀಡಿರೋ ದುಡ್ಡಿಗಿಂತ ಹೆಚ್ಚು ಕೊನೆಪಕ್ಷ ಅದುನ್ನಾದ್ರೂ ಕೊಟ್ರಲ್ಲಾ.. ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ನಮ್ಮ ತೆರಿಗೆ ಹಣಕ್ಕೆ ನಾವು ಭಿಕ್ಷೆ ಬೇಡಿದ್ದು ಸಾಕು. ಕರ್ನಾಟಕಕ್ಕೆ ಆರ್ಥಿಕ ಸ್ವಾಯತ್ತತೆ ಬೇಕು” ಎಂದು ಪತ್ರಕರ್ತರಾದ ದಿನೇಶ್ ಕುಮಾರ್‌ ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...