Homeಮುಖಪುಟಬಿಜೆಪಿಗೂ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೂ ಸಂಬಂಧವೇನು? : ಕಾಂಗ್ರೆಸ್‌ನಿಂದ ಹತ್ತು ಪ್ರಶ್ನೆಗಳು

ಬಿಜೆಪಿಗೂ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೂ ಸಂಬಂಧವೇನು? : ಕಾಂಗ್ರೆಸ್‌ನಿಂದ ಹತ್ತು ಪ್ರಶ್ನೆಗಳು

- Advertisement -
- Advertisement -

ಲಡಾಖ್ ಗಡಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ನಂತರ ಭುಗಿಲೆದ್ದಿರುವ ಚರ್ಚೆಗಳಲ್ಲಿ ಕಾಂಗ್ರೆಸ್‌ ಪಕ್ಷವೂ ಆಡಳಿತ ಪಕ್ಷ ಬಿಜೆಪಿ ವಿರುದ್ಧ 10 ಪ್ರಶ್ನೆಗಳನ್ನು ಕೇಳುವ ಮೂಲಕ ಟೀಕಾಪ್ರಹಾರ ನಡೆಸಿದೆ.

ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್ ಸುರ್ಜೆವಾಲಾ ಅವರು ಬಿಜೆಪಿಯು ಚೀನಾ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಹೊಂದಿರುವ ನಿಗೂಢ ಸಂಬಂಧದ ಬಗ್ಗೆ ಪ್ರಶ್ನೆಯೆತ್ತಿದ್ದರೆ ಉತ್ತರಿಸುವ ಬದಲು ಹೆದರುತ್ತಿದೆ ಎಂದು ಆರೋಪಿಸಿದ್ದಾರೆ.

ಚೀನಾ ಅಸೋಸಿಯೇಷನ್ ​​ಫಾರ್ ಇಂಟರ್ನ್ಯಾಷನಲ್ ಫ್ರೆಂಡ್ಲಿ ಕಾಂಟ್ಯಾಕ್ಟ್ (ಸಿಎಐಎಫ್‌ಸಿ) ನೊಂದಿಗೆ ಬಿಜೆಪಿ ಸಂಬಂಧಗಳನ್ನು ಒಳಗೊಂಡ 10 ಪ್ರಶ್ನೆಗಳ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದ್ದಾರೆ.

“ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿ.ಸಿ.ಪಿ) ಗೆ ಬಿಜೆಪಿಗೆ ಏನು ಸಂಬಂಧವಿದೆ? ಜನವರಿ 30, 2007 ರಂದು ಸಿ.ಸಿ.ಪಿ ನಿಯೋಗವೊಂದರ ಭೇಟಿಯ ಸಂದರ್ಭದಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಮಾತನಾಡಿದ್ದಾರೆ. ಅಕ್ಟೋಬರ್ 17, 2008 ರಂದು CCP ಯ ಪಾಲಿಟ್‌ಬ್ಯುರೊ ಸದಸ್ಯರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಹಾಗಾದರೆ ಬಿಜೆಪಿ ಮತ್ತು ಸಿ.ಸಿ.ಪಿ ನಡುವಿನ ಐತಿಹಾಸಿಕ ಸಂಬಂಧ ಏನು? ಎಂದು ಕಾಂಗ್ರೆಸ್ ಕೇಳಿದೆ

ಸಿ.ಸಿ.ಪಿ ಯ ಆಹ್ವಾನದ ಮೇರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (‘ಆರ್‌ಎಸ್‌ಎಸ್’) 2009 ರ ಜನವರಿಯಲ್ಲಿ ಚೀನಾಕ್ಕೆ ಏಕೆ ಹೋಯಿತು? ರಾಜಕೀಯ ಪಕ್ಷವಾಗಿರದಿದ್ದರೂ ಆರ್‌‌ಎಸ್‌ಎಸ್ ನಿಯೋಗವನ್ನು ಸಿ.ಸಿ.ಪಿ ಏಕೆ ಆಹ್ವಾನಿಸಿತು? ನಮ್ಮ ಅರಿವಿಗೆ ಬಾರದೇ ಅರುಣಾಚಲ ಪ್ರದೇಶ ಮತ್ತು ಟಿಬೆಟ್‌ ಬಗ್ಗೆ ಯಾವ ಚರ್ಚೆಗಳು ನಡೆದವು?

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (‘ಸಿ.ಸಿ.ಪಿ’) ಯ ಆಹ್ವಾನದ ಮೇರೆಗೆ ಜನವರಿ 19, 2011 ರಂದು ಐದು ದಿನಗಳ ಭೇಟಿಗೆ ಆಗಿನ ಬಿಜೆಪಿ ಅಧ್ಯಕ್ಷರಾದ ನಿತಿನ್ ಗಡ್ಕರಿ ಅವರು  ಚೀನಾಕ್ಕೆ ಏಕೆ ಹೋದರು?”

ಪ್ರಧಾನಿ ನರೇಂದ್ರ ಮೋದಿಯವರ ಚೀನಾಕ್ಕೆ ಹಲವಾರು ಭೇಟಿಗಳು, ಚೀನಾದ ಅಧ್ಯಕ್ಷರಿಗಾಗಿ ಭಾರತದಲ್ಲಿ ಭವ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಫೋಟೊಶೂಟ್‌ಗಳು ಯಾತಕ್ಕಾಗಿ?

“ಚೀನಾದ ಕಮ್ಯುನಿಸ್ಟ್ ಪಕ್ಷದ (‘ಸಿಸಿಪಿ’) “ದಿ ಪಾರ್ಟಿ ಸ್ಕೂಲ್” ನಲ್ಲಿ ಒಂದು ವಾರದ ಅಧ್ಯಯನಕ್ಕಾಗಿ ಅಂದಿನ ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಅವರು 2014ರ ನವೆಂಬರ್‌ನಲ್ಲಿ ಸಂಸದರ / ಶಾಸಕರ ನಿಯೋಗವನ್ನು ಚೀನಾಕ್ಕೆ ಏಕೆ ಕಳುಹಿಸಿದರು?” ಎಂದು ಕಾಂಗ್ರೆಸ್ ಕೇಳಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿದೇಶಿ ದೇಣಿಗೆ ಸೇರಿದಂತೆ ಯಾರಿಂದ ಹಣಕಾಸಿನ ನೆರವು ಪಡೆಯುತ್ತಿದೆ ಎಂದು ಘೋಷಿಸುವ ಧೈರ್‍ಯವಿದೆಯೆ?

“ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ದೇಣಿಗೆ ಪಡೆದ ದಾನಿಗಳ ಹೆಸರನ್ನು ಬಿಜೆಪಿ ಘೋಷಿಸಲಿದೆಯೇ?” ಬಿಜೆಪಿ ಪಕ್ಷ, ಆರ್‌ಎಸ್‌ಎಸ್ ಮತ್ತು ಇತರ ಅಂಗಸಂಸ್ಥೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದರ ಕುರಿತು ಮಾಹಿತಿ ನೀಡುವಿರಾ? ಇತ್ಯಾಧಿ ಪ್ರಶ್ನೆಗಳನ್ನು ಕಾಂಗ್ರೆಸ್‌ ಕೇಳಿದೆ.


ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಪೊಲೀಸ್ ಹಾಗೂ ಮ್ಯಾಜಿಸ್ಟ್ರೇಟ್ ವಿರುದ್ದ ಹಲವಾರು ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...