Homeಅಂತರಾಷ್ಟ್ರೀಯಎಲ್ಜಿಬಿಟಿಕ್ಯು ಸಮುದಾಯಕ್ಕೆ ವಿಶ್ವದಾದ್ಯಂತ ಬೆಂಬಲ ಹೆಚ್ಚಾಗುತ್ತಿದೆ: ಸಮೀಕ್ಷೆ

ಎಲ್ಜಿಬಿಟಿಕ್ಯು ಸಮುದಾಯಕ್ಕೆ ವಿಶ್ವದಾದ್ಯಂತ ಬೆಂಬಲ ಹೆಚ್ಚಾಗುತ್ತಿದೆ: ಸಮೀಕ್ಷೆ

- Advertisement -
- Advertisement -

ಇತ್ತೀಚೆಗಿನ ವರ್ಷದಲ್ಲಿ ಅಮೆರಿಕಾ ಸೇರಿದಂತೆ ಇತರ ದೇಶಗಳಲ್ಲಿ ಎಲ್ಜಿಬಿಟಿಕ್ಯು ಸಮುದಾಯಕ್ಕೆ ಬಂಬಲ ಹೆಚ್ಚಾಗುತ್ತಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಮೀಕ್ಷೆಯೂ 2019 ರಲ್ಲಿ 34 ದೇಶಗಳಲ್ಲಿ 38,000 ಕ್ಕೂ ಹೆಚ್ಚು ಜನರನ್ನು ಸಲಿಂಗಕಾಮವನ್ನು ಸಮಾಜವು ಒಪ್ಪಿಕೊಳ್ಳಬೇಕು ಎಂದು ಭಾವಿಸಿದ್ದೀರಾ ಎಂದು ಕೇಳಿದೆ. ಅಮೆರಿಕಾದಲ್ಲಿ ಸಲಿಂಗಕಾಮವನ್ನು ಬೆಂಬಲಿಸುವ ಶೇಕಡಾವಾರು ಪ್ರಮಾಣವು 2019 ರಲ್ಲಿ 72% ಕ್ಕೆ ಏರಿದ್ದು, ಇದು 2013 ರಲ್ಲಿ ನಡೆದ ಸಮೀಕ್ಷೆಯಲ್ಲಿ ಅದು 60% ರಷ್ಟಿತ್ತು.

ಭಾರತ ಮತ್ತು ಟರ್ಕಿಯಲ್ಲಿ ಈ ದರಗಳು ಕ್ರಮವಾಗಿ 20 ಮತ್ತು 16 ಕ್ಕಿಂತಲೂ ಹೆಚ್ಚಾಗಿವೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಈ ಬೆಂಬಲ ಕಡಿಮೆಯಾಗಿಯೇ ಇದೆ. ಇದು ಕ್ರಮವಾಗಿ 37% ಮತ್ತು  25 % ರಷ್ಟು ಇದೆ. 2018 ರಲ್ಲಿ ಭಾರತದ ಹೈಕೋರ್ಟ್ ಸಲಿಂಗಕಾಮವನ್ನು ಕಾನೂನು ಬದ್ದಗೊಳಿಸಿತ್ತು.

ಮಧ್ಯಪ್ರಾಚ್ಯ, ಪೂರ್ವ ಯುರೋಪ್ ಮತ್ತು ಆಗ್ನೇಯ ಏಷ್ಯಾದ ಕೆಲವು ದೇಶಗಳಿಗಿಂತ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳು ಸಲಿಂಗಕಾಮವನ್ನು ಹೆಚ್ಚು ಒಪ್ಪಿಕೊಳ್ಳುತ್ತಿವೆ ಎಂದು “ಸಲಿಂಗಕಾಮ ನಿರಂತರತೆಯ ಜಾಗತಿಕ ವಿಭಜನೆ” ಎಂಬ ಶೀರ್ಷಿಕೆಯ ಈ ವರದಿ ಹೇಳುತ್ತದೆ.

ಉದಾಹರಣೆಗೆ, ಲೆಬನಾನ್‌ನಲ್ಲಿ 85% ರಷ್ಟು ಜನರು ಸಲಿಂಗಕಾಮವನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿದರೆ, ಟುನೀಶಿಯಾದಲ್ಲಿ 72% ಜನರು ಇದನ್ನು ಹೇಳಿದ್ದಾರೆ. ಮಧ್ಯ ಮತ್ತು ಪೂರ್ವ ಯುರೋಪಿನಲ್ಲಿ ಸಲಿಂಗಕಾಮವನ್ನು ಸ್ವೀಕರಿಸುವ ಸರಾಸರಿ ದರ 46% ಆಗಿತ್ತು.

“ಆರ್ಥಿಕ ಅಭಿವೃದ್ಧಿಯ ಸೂಚಕವಾಗಿರಬಹುದಾದ ಪ್ರದೇಶಗಳಲ್ಲಿನ ವ್ಯತ್ಯಾಸಗಳು ನಿಜವಾಗಿಯೂ ಆಸಕ್ತಿದಾಯಕ ಆವಿಷ್ಕಾರಗಳಾಗಿವೆ, ಒಟ್ಟಾರೆ ಸ್ವೀಕಾರದ ಮಟ್ಟದಲ್ಲಿ ಬದಲಾವಣೆಗಳಾಗಿದ್ದರೂ ಸಹ, ಸ್ಥಿರವಾಗಿ ಉಳಿದಿವೆ” ಎಂದು ವರದಿಯ ಲೇಖಕ ಹಾಗೂ ಪ್ಯೂ ರಿಸರ್ಚ್ ಸೆಂಟರ್ನ ಜಾಗತಿಕ ವರ್ತನೆಗಳ ಸಂಶೋಧನೆಯ ಸಹಾಯಕ ನಿರ್ದೇಶಕರಾದ ಜಾಕೋಬ್ ಪೌಶ್ಟರ್ ಹೇಳಿದ್ದಾರೆ.

ಸಲಿಂಗಕಾಮದ ಬಗೆಗಿನ ವರ್ತನೆಗಳು ದೇಶದ ಸಂಪತ್ತಿನೊಂದಿಗೆ ಸಂಬಂಧ ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಡ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಜನರಿಗಿಂತ ಶ್ರೀಮಂತ ದೇಶಗಳಲ್ಲಿನ ಜನರು ಸಾಮಾನ್ಯವಾಗಿ ಸಲಿಂಗಕಾಮವನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ.

ರಾಜಕೀಯ ಸಿದ್ಧಾಂತ ಮತ್ತು ಶಿಕ್ಷಣವು ಸಲಿಂಗಕಾಮವನ್ನು ಅಂಗೀಕರಿಸುವುದರೊಂದಿಗೆ ಪರಸ್ಪರ ಸಂಬಂಧ ಹೊಂದಿದೆ, ಎಡ-ಒಲವು ಮತ್ತು ಹೆಚ್ಚು ವಿದ್ಯಾವಂತ ಜನರು ಸಾಮಾಜಿಕ ಸ್ವೀಕಾರಕ್ಕೆ ಹೆಚ್ಚು ಬೆಂಬಲ ನೀಡುತ್ತಾರೆ.

ಕೇವಲ 29 ದೇಶಗಳಲ್ಲಿ ಸಲಿಂಗ ಮದುವೆ ಕಾನೂನುಬದ್ಧವಾಗಿದೆ ಎಂದು ಮಾನವ ಹಕ್ಕುಗಳ ಅಭಿಯಾನ ಉಲ್ಲೇಖಿಸಿದೆ.


ಓದಿ: ದೆಹಲಿಯಿಂದ ಮಂಗಳೂರಿನವರೆಗೆ CAA-NRC ವಿರೋಧಿಗಳನ್ನು ಹಣಿಯಲು ಹಿಂಬಾಗಿಲ ಸಂಚು


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...