ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರೇಲರ್‌ನಲ್ಲಿ 46 ವಲಸಿಗರ ಮೃತದೇಹಗಳು ಪತ್ತೆಯಾಗಿವೆ. 16 ಜನರು ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್-ಮೆಕ್ಸಿಕೊ ಗಡಿಯಲ್ಲಿ ಮಾನವ ಕಳ್ಳಸಾಗಣೆ ಹೆಚ್ಚಾಗಿ ನಡೆಯುತ್ತಿದೆ ಎನ್ನಲಾಗಿದೆ. ಪೊಲೀಸರು ಟ್ರಕ್ ಕಂಡು ಹಿಡಿಯುವ ಸ್ವಲ್ಪ ಸಮಯದಲ್ಲಿ ಚಾಲಕ ಅಲ್ಲಿಂದ ಪರಾರಿಯಾಗಿರಬಹುದು ಎಂದು, ಚಾಲಕನ ಹುಡುಕಾಟವನ್ನು ನಡೆಸಲಾಗುತ್ತಿದೆ.
ಟ್ರೈಲರ್‌ನಲ್ಲಿಮೃತದೇಹಗಳ ಜೊತೆಗೆ ಪತ್ತೆಯಾದದ ಇತರ ಹದಿನಾರು ಜನರು ವಿಪರೀತ ಉಷ್ಣಾಂಶ ಮತ್ತು ಬಳಲಿಕೆಯಿಂದ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಇದರಲ್ಲಿ ನಾಲ್ಕು ಮಂದಿ ಅಪ್ರಾಪ್ತ ವಯಸ್ಕರು ಇದ್ದಾರೆ. ಮೃತರಲ್ಲಿ ಅಪ್ರಾಪ್ತರಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಗಲಭೆಗಳಿಗೆ ಪ್ರಚೋದನೆ ಆರೋಪ: ಆಲ್ಟ್‌ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನ
ಮೆಕ್ಸಿಕನ್ ಗಡಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಸ್ಯಾನ್ ಆಂಟೋನಿಯೊದಲ್ಲಿನ ಜೂನ್ ತಿಂಗಳಲ್ಲಿ ಹೆಚ್ಚಿನ ಉಷ್ಣ ವಾತಾವರಣವಿರುತ್ತದೆ. ಸೋಮವಾರ 39.4 ಡಿಗ್ರಿ ಸೆಲ್ಸಿಯಸ್ ಉಷ್ಣ ವಾತಾವರಣವಿತ್ತು ಎಂದು ವರದಿಯಾಗಿದೆ.
ಆದರೂ 46 ಮಂದಿಯ ಸಾವಿಗೆ ಸ್ಪಷ್ಟ ಕಾರಣವಿನ್ನು ಸಿಕ್ಕಿಲ್ಲ. ಈ ರೀತಿ ಅಕ್ರಮ ವಲಸಿಗರು ಮೃತಪಟ್ಟಿರುವುದು ಅತಿದೊಡ್ಡ ಘಟನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಹದ್ದೆ ಪ್ರಕರಣಗಳಲ್ಲಿ ಈವರೆಗೆ ಮೂರು ಮಂದಿ ಬಂಧನದಲ್ಲಿದ್ದಾರೆ. ಆದರೆ, ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
En route to a possible human smuggling case off of Quintana Rd on the South/Southeast side.
📸 credit Joe Arredondo, KSAT pic.twitter.com/DviwaEv1Ep
— Leigh Waldman (@LeighWaldman) June 27, 2022
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ ವಿಭಾಗವು ಸ್ಥಳೀಯ ಪೋಲೀಸ್‌ನೊಂದಿಗೆ ಸಮನ್ವಯ ಸಾಧಿಸಿ “ಅಕ್ರಮ ಮಾನವ ಕಳ್ಳಸಾಗಣೆ ಘಟನೆ” ಯನ್ನು ತನಿಖೆ ನಡೆಸುತ್ತಿದೆ ಎಂದು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ವಕ್ತಾರರು ತಿಳಿಸಿದ್ದಾರೆ.
ಜುಲೈ 2017 ರಲ್ಲಿ, 10 ವಲಸಿಗರು ಟ್ರ್ಯಾಕ್ಟರ್-ಟ್ರೇಲರ್‌ನಲ್ಲಿ ಸಾಗಿಸುತ್ತಿದ್ದಾಗ ಸಾವನ್ನಪ್ಪಿದರು, ಇದನ್ನು ಸ್ಯಾನ್ ಆಂಟೋನಿಯೊ ಪೊಲೀಸರು ಪಾರ್ಕಿಂಗ್ ಸ್ಥಳದಲ್ಲಿ ಪತ್ತೆ ಮಾಡಿದ್ದರು. ಪ್ರಕರಣದಲ್ಲಿ ಟ್ರಕ್ ಚಾಲಕನಿಗೆ ಮಾನವ ಕಳ್ಳಸಾಗಣೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು.
ಇದನ್ನೂ ಓದಿ: ಗುಜರಾತ್: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್