Homeರಾಷ್ಟ್ರೀಯಗುಜರಾತ್‌: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್‌‌

ಗುಜರಾತ್‌: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್‌‌

- Advertisement -
- Advertisement -

ಗುಜರಾತ್‌‌ ಶಿಕ್ಷಣ ಸಚಿವ ಮತ್ತು ಇಲಾಖೆಯ ಇತರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿಯಿಂದಲೇ ಸಂಸ್ಕೃತವನ್ನು ಕಡ್ಡಾಯ ವಿಷಯವನ್ನಾಗಿ ಮಾಡಲು ಆರೆಸ್ಸೆಸ್‌ ಒತ್ತಾಯಿಸಿದೆ ಎಂದು ವರದಿಯಾಗಿದೆ.

ಆರೆಸ್ಸೆಸ್‌‌ ಮತ್ತು ರಾಜ್ಯ ಶಿಕ್ಷಣ ಸಚಿವ ಜಿತು ವಘಾನಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಗುಜರಾತ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ನಡುವೆ ಕಳೆದ ಎಪ್ರಿಲ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಅನುಷ್ಠಾನದ ವಿಷಯದ ಕುರಿತು ಸಭೆ ನಡೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

NEP-2020 ಭಾರತದ ಮೂರನೇ ಶಿಕ್ಷಣ ನೀತಿಯಾಗಿದ್ದು, ಅದನ್ನು 2020ರ ಜುಲೈನಲ್ಲಿ ಅಂಗೀಕರಿಸಲಾಗಿದೆ. ಹೊಸ ನೀತಿಯೂ ದೇಶದ ಶೈಕ್ಷಣಿಕ ಸಂರಚನೆಯಲ್ಲಿ ಹಲವಾರು ವ್ಯಾಪಕ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಮುಖ್ಯವಾಗಿ, 5 ನೇ ತರಗತಿಯವರೆಗೆ ವಿದ್ಯಾರ್ಥಿಯ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಪ್ರಾಥಮಿಕ ಬೋಧನಾ ಮಾಧ್ಯಮವನ್ನಾಗಿ ಮಾಡಲು NEP ಶಿಫಾರಸು ಮಾಡುತ್ತದೆ. ಜೊತೆಗೆ ಅದನ್ನು 8 ನೇ ತರಗತಿಯವರೆಗೆ “ಸಾಧ್ಯವಾದಲ್ಲೆಲ್ಲಾ” ಮುಂದುವರಿಸುವಂತೆ ಶಿಫಾರಸು ಮಾಡುತ್ತದೆ.

ಇದನ್ನೂ ಓದಿ: ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

ನೀತಿಯೂ ‘ಮೂರು ಭಾಷಾ ಸೂತ್ರ’ವನ್ನು ಪರಿಚಯಿಸಿದ್ದು, ಅದರ ಭಾಗವಾಗಿ ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾರತೀಯ ಭಾಷೆಯಾಗಿರಬೇಕು. ಇದರ ಕರಡು ನೀತಿಯು, ಭಾಷೆಯ ಆಯ್ಕೆಯು ಶಾಲೆ ಮತ್ತು ವಿದ್ಯಾರ್ಥಿಗಳದ್ದಾಗಿರುತ್ತದೆ ಎಂದು ಹೇಳುತ್ತದೆ. ಆದರೆ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ನಿರ್ಧರಿಸಲು ಸಾಧ್ಯವಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ.

ಇದಲ್ಲದೆ, NEP ಯ ಹಿಂದಿನ ಕರಡು ಹಿಂದಿ ಭಾಷೆಯನ್ನು ಹಿಂದಿಯೇತರ ಭಾಷಾ ರಾಜ್ಯಗಳಲ್ಲಿ 8 ನೇ ತರಗತಿಯವರೆಗೆ ಕಡ್ಡಾಯಗೊಳಿಸಬೇಕೆಂದು ಕರೆ ನೀಡಿತ್ತು. ಆದರೆ ದಕ್ಷಿಣದ ರಾಜ್ಯಗಳು ತೀವ್ರವಾಗಿ ಪ್ರತಿಭಟನೆ ನಡೆಸಿದ ನಂತರ ಈ ನಿಬಂಧನೆಯನ್ನು ತೆಗೆದುಹಾಕಲಾಯಿತು.

ಶಿಕ್ಷಣವು ಸಮಕಾಲೀನ ಪಟ್ಟಿಯಲ್ಲಿ ಶಾಸಕಾಂಗ ವಿಷಯವಾಗಿರುವುದರಿಂದ (ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅದರ ಮೇಲೆ ಕಾನೂನುಗಳನ್ನು ಮಾಡಲು ಅರ್ಹವಾಗಿವೆ) NEP ಯ ನಿಬಂಧನೆಗಳು ಮತ್ತು ಅದರ ಅನುಷ್ಠಾನವನ್ನು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಸಮಾಲೋಚನೆಗಳ ಮೂಲಕ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು 2040 ನೇ ವರ್ಷವನ್ನು NEP ಯ ಸಂಪೂರ್ಣ ಅನುಷ್ಠಾನಕ್ಕೆ ಗಡುವು ಎಂದು ಸೂಚಿಸಿತ್ತು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

ಗುಜರಾತ್‌ ಶಿಕ್ಷಣ ಸಚಿವ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ವಾರಕ್ಕೆ ಕನಿಷ್ಠ ಆರು ಅವಧಿಗಳನ್ನು ಸಂಸ್ಕೃತ ಕಲಿಸಲು ಮೀಸಲಿಡುವಂತೆ ಒತ್ತಾಯಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಸಭೆಯಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್‌ ಅಂಗಸಂಸ್ಥೆಗಳಾದ ವಿದ್ಯಾಭಾರತಿ, ಶೈಶಿಕ್ ಮಹಾಸಂಘ, ಸಂಸ್ಕೃತ ಭಾರತಿ, ಭಾರತೀಯ ಶಿಕ್ಷಣ ಮಂಡಲ್, ಸಭೆಯನ್ನು ಪ್ರಾಥಮಿಕವಾಗಿ ಸಂಸ್ಕೃತ ಬೋಧನೆಯ ಮೇಲೆ ಕೇಂದ್ರೀಕರಿಸಿದ್ದರು.

ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳನ್ನು ಶಾಲೆಗಳಲ್ಲಿ ಕಲಿಸಬೇಕೆಂದು ಈ ಸಂಘಟನೆಗಳು ಒತ್ತಾಯಿಸಿದೆ ಎಂದು ವರದಿಯಾಗಿದೆ. ‘ವೈದಿಕ ಗಣಿತ’ವನ್ನು ಕಡ್ಡಾಯಗೊಳಿಸಬೇಕು; ಉಪನಿಷತ್ತುಗಳು ಮತ್ತು ವೇದಗಳಿಂದ ಮೌಲ್ಯಾಧಾರಿತ ಶಿಕ್ಷಣವನ್ನು ಪರಿಚಯಿಸುವುದು; ಮತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸಬೇಕು ಎಂದು ಅದು ಸಭೆಯಲ್ಲಿ ಆಗ್ರಹಿಸಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ಪ್ರಾಥಮಿಕ ಶಾಲಾ ಶಿಕ್ಷಣದ ಹೊರತಾಗಿ, ಗುಜರಾತಿಯನ್ನು ಪ್ರಥಮ ಭಾಷೆಯಾಗಿ ಮತ್ತು ಸಂಸ್ಕೃತವನ್ನು ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಎರಡನೆ ಭಾಷೆಯಾಗಿ ಕಲಿಸಲು ಆರೆಸ್ಸೆಸ್‌‌ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಮೂರನೇ ಭಾಷೆಯಾಗಿ ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಲು ಬಿಟ್ಟಿದೆ.

ಇದಲ್ಲದೆ, ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ (BAMS) ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸಲು ಪ್ರಯತ್ನಿಸಿದೆ.

ಶಿಕ್ಷಣದಲ್ಲಿ ಸಂಸ್ಕೃತದ ಪಾತ್ರದ ಬಗ್ಗೆ ಎನ್‌ಇಪಿ ಅಸ್ಪಷ್ಟವಾಗಿದೆ ಮತ್ತು ಆದ್ದರಿಂದ ಈ ವಿಷಯದ ಬಗ್ಗೆ ಸಮಾಲೋಚನೆ ಅಗತ್ಯವಿದೆ ಎಂದು ಆರೆಸ್ಸೆಸ್‌‌ ಅಂಗಸಂಸ್ಥೆ ಸಂಸ್ಕೃತ ಭಾರತಿಯ ಸದಸ್ಯರೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದು, ‘‘ಇದಲ್ಲದೆ, ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವುದಿಲ್ಲ ಎಂದು NEP ಹೇಳಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲಾಗುತ್ತದೆ” ಎಂದು ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020: ಪ್ರಭುತ್ವ ಹಿತಾಸಕ್ತಿ v/s ಸಾರ್ವಜನಿಕ ಹಿತಾಸಕ್ತಿ

ಈ ವರ್ಷ ಜುಲೈನಲ್ಲಿ ಕೂಡಾ ಆರ್‌ಎಸ್‌ಎಸ್ ಮತ್ತು ರಾಜ್ಯ ಸರ್ಕಾರದ ನಡುವೆ ಎನ್‌ಇಪಿ ಕುರಿತ ಮುಂದಿನ ಸಭೆ ನಡೆಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಮೂಲಗಳು ಹೇಳಿಕೊಂಡಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...