Homeಮುಖಪುಟದೆಹಲಿಯಲ್ಲಿ ಮತ್ತೊಂದು ಶಾಹೀನ್ ಬಾಗ್ ಆಗಲು ಬಿಡುವುದಿಲ್ಲ: ಬಿಜೆಪಿ ಮುಖಂಡ ಕಪಿಲ್ ಮಿಶ್ರಾ

ದೆಹಲಿಯಲ್ಲಿ ಮತ್ತೊಂದು ಶಾಹೀನ್ ಬಾಗ್ ಆಗಲು ಬಿಡುವುದಿಲ್ಲ: ಬಿಜೆಪಿ ಮುಖಂಡ ಕಪಿಲ್ ಮಿಶ್ರಾ

- Advertisement -
- Advertisement -

ಭಾರತೀಯ ಜನತಾ ಪಕ್ಷದ ಮುಖಂಡ ಕಪಿಲ್ ಮಿಶ್ರಾ ಮಂಗಳವಾರ ಪೊಲೀಸರಿಂದ ಸುತ್ತುವರಿದ ಕಿರು ವೀಡಿಯೊವನ್ನು ಟ್ವೀಟ್ ಮಾಡಿದ್ದು, ಜಾಫ್ರಾಬಾದ್‌ ಖಾಲಿಯಾಗಿದೆ ದೆಹಲಿಯಲ್ಲಿ ಮತ್ತೊಂದು ಶಾಹೀನ್ ಬಾಗ್ ಆಗಲು ಬಿಡುವುದಿಲ್ಲ ಬರೆದಿದ್ದಾರೆ.

ಇದು ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಈಶಾನ್ಯ ದೆಹಲಿಯ ಜಾಫ್ರಾಬಾದ್‌ನ ಮೆಟ್ರೋ ನಿಲ್ದಾಣದ ಕೆಳಗಿರುವ ಖಾಲಿ ರಸ್ತೆಯಲ್ಲಿ ಪೊಲೀಸರನ್ನು ತೋರಿಸುತ್ತದೆ. ಆ ಮೂಲಕ ಹಿಂಸಾಚಾರಕ್ಕೆ ನಾವೇ ಕಾರಣ ಅಂತಲೂ, ಸಿಎಎ ವಿರೋಧಿ ಪ್ರತಿಭಟನೆ ತಡೆಯಲು ಹೀಗೆ ಮಾಡಲಾಯಿತು ಎಂತಲೂ ಅರ್ಥ ಬರುವ ರೀತಿಯಲ್ಲಿ ಕಪಿಲ್‌ ಮಿಶ್ರಾ ಮಾತಾಡಿರುವುದು ಸ್ಪಷ್ಟವಾಗಿದೆ.

ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಕೆಳಗಿರುವ ಪ್ರತಿಭಟನಾ ಸ್ಥಳವನ್ನು ಪೊಲೀಸರು ಮಂಗಳವಾರ ಸಂಜೆ ತೆರವುಗೊಳಿಸಿದ್ದಾರೆ.

ಜಾಫ್ರಾಬಾದ್, ಮೌಜ್‌ಪುರ ಮತ್ತು ಈಶಾನ್ಯ ದೆಹಲಿಯ ಇತರ ಪ್ರದೇಶಗಳಲ್ಲಿ ಮೂರು ದಿನಗಳ ಹಿಂಸಾಚಾರದಲ್ಲಿ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಆ ಸ್ಥಳದಲ್ಲಿ ಶನಿವಾರದಿಂದ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಮಿಶ್ರಾ ಈ ಪ್ರದೇಶಕ್ಕೆ ಭೇಟಿ ನೀಡಿ ಮೂರು ದಿನಗಳೊಳಗೆ ಪ್ರತಿಭಟನಾಕಾರರನ್ನು ಪೊಲೀಸರು ಹೊರಕಳಿಸಿದಬೇಕೆಂದು ಒತ್ತಾಯಿಸಿ, ಇಲ್ಲದಿದ್ದಲ್ಲಿ ನಾವು ಬೀದಿಗಿಳಿಯುತ್ತೇವೆ ಎಂದು ಧಮಕಿ ಹಾಕಿದ ನಂತರ ಭಾನುವಾರ ಸಂಜೆ ಹಿಂಸಾಚಾರಗಳು ಭುಗಿಲೆದ್ದಿವೆ.

ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಮತ್ತು ಇತರರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಅರ್ಜಿಯಲ್ಲಿ ಮಿಶ್ರಾ ಅವರು ಗಲಭೆಗಳನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿಲಾಗಿದೆ.


ಇದನ್ನೂ ಓದಿ: ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ: BJPಯ ಕಪಿಲ್‌ ಮಿಶ್ರಾ ವಿರುದ್ಧ ದೂರು ದಾಖಲು 


ಸಿಎಎಗೆ ಬೆಂಬಲ ನೀಡುವ ಮೂಲಕ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕಪಿಲ್‌ ಮಿಶ್ರಾ ಸೋಮವಾರ ಸಂಜೆ ಪೋಸ್ಟ್ ಮಾಡಿದ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ನಾನು ವಿದೇಶದಿಂದ ಮತ್ತು ಭಾರತದಿಂದ ಮಾರಣಾಂತಿಕ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದೇನೆ. ನನಗೆ ಬೆದರಿಕೆ ಇದೆ. ಪ್ರತಿಭಟನೆಯಿಂದಾಗಿ ಮುಚ್ಚಿದ ರಸ್ತೆ ತೆರೆಯಲು ಸಹಾಯ ಮಾಡುವುದು ಅಪರಾಧವಲ್ಲ, ಸಿಎಎಗೆ ಬೆಂಬಲ ನೀಡುವುದು ಅಪರಾಧವಲ್ಲ, ಸತ್ಯವನ್ನು ಮಾತನಾಡುವುದು ಅಪರಾಧವಲ್ಲ ”ಎಂದು ಮಿಶ್ರಾ ಹಿಂದಿಯಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಅವರು ಮಿಶ್ರಾ ಸೇರಿದಂತೆ ಯಾರಾದರೂ “ಪ್ರಚೋದನಕಾರಿ” ಭಾಷಣಗಳನ್ನು ನೀಡಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು.

“ಯಾರು, ಅವರು ಯಾವ ಪಕ್ಷಕ್ಕೆ ಸೇರಿದವರಾಗಿರಲಿ, ಅವರು ಕಪಿಲ್ ಮಿಶ್ರಾ ಆಗಿರಲಿ ಅಥವಾ ಜನರನ್ನು ಪ್ರಚೋದಿಸಲು ಭಾಷಣ ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಗಂಭೀರ್ ಪಟ್ಪರ್ಗಂಜ್ ಆಸ್ಪತ್ರೆಯಲ್ಲಿ ದಾಖಲಾದ ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read