ಗಾಸಿಪ್ ಲವ್ ಅಂಡ್ ಬ್ರೇಕ್ ಅಪ್ ಮೀಡಿಯಾ ಮಧ್ಯಸ್ಥಿಕೆ

ಒಬ್ಬ ಗಂಡು ಮತ್ತು ಹೆಣ್ಣು ಜೊತೆಯಾಗಿ ಓಡಾಡ್ತಿದ್ದಾರೆ, ಹೆಚ್ಚು ಸಮಯ ಮಾತಾಡ್ತಿದ್ದಾರೆ ಅಂತ ನೋಡಿದ ತಕ್ಷಣ ಅವರಿಬ್ಬರು ಪ್ರೇಮಿಗಳೆಂದು ನಿರ್ಧಾರಕ್ಕೆ ಬಂದುಬಿಡುವುದು ನಮ್ಮ ಸಮಾಜದೊಳಗೆ ಹಳ್ಳಿಯಿಂದ ದಿಲ್ಲಿ(ನಗರ)ಯವರೆಗೆ ಸಾಮಾನ್ಯವೆಂಬಂತೆ ಬೆಳೆದುಹೋಗಿದೆ. ಹಳ್ಳಿಗಳಲ್ಲಿ ಇಂಥ ವಿಷಯಗಳು ಸಿಕ್ಕಿಬಿಟ್ಟರೆ ಆ ಇಬ್ಬರು ಮಾತನಾಡಿದ್ದೇ ಘನ ಘೋರ ಅಪರಾಧವೆಂಬಷ್ಟರ ಮಟ್ಟಕ್ಕೆ ಬಾಯಿಗೆ ತಾಂಬೂಲವಾಗಿ ಪರಿಣಮಿಸುತ್ತವೆ. ಇನ್ನು ಸಿಟಿಗಳಲ್ಲೋ ಹೈ-ಫೈ ಲೈಫ್‍ನ ಡೇಟಿಂಗ್, ಸಂಥಿಂಗ್-ಸಂಥಿಂಗ್‍ಗಳಾಗಿ ಕಾಡುತ್ತವೆ. ಇಂತಹ ವಿಚಾರಗಳಲ್ಲಿ ಸಿನಿಮಾ ಸ್ಟಾರ್‍ಗಳು ಸಿಕ್ಕಿಕೊಂಡರಂತೂ ಮಾಧ್ಯಮದವರಿಗೆ ಅಂದು ಬಾಡೂಟ ಸಿಕ್ಕಂತೆ. ಟಿಆರ್‍ಪಿ ಗೀಳಿನಲ್ಲಿ ಸರಣಿ ಕಾರ್ಯಕ್ರಮಗಳು ನಡೆದೋಗುತ್ತವೆ. ಇತ್ತೀಚೆಗೆ ಕಲ್ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‍ಬಾಸ್ ಸ್ಪರ್ಧಿಗಳ ನಡುವಿನ ತಮಾಷೆಗಳೂ ಅವರ ನಡುವೆ ಇರುವವರಿಗೇ ಅನುಮಾನವಾಗಿ ಕಾಡಲಾರಂಭಿಸಿದ್ದವು. ಅಲ್ಲದೆ, ಬುಲ್‍ಬುಲ್ ಬೆಡಗಿ ಎಂದೇ ಖ್ಯಾತಿ ಪಡೆದಿರುವ ರಚಿತಾ ರಾಮ್ ಸೀತಾರಾಮ ಕಲ್ಯಾಣ ಸಿನಿಮಾ ಮಾಡಿದ ನಂತರ ಕುಮಾರಸ್ವಾಮಿ ಕುಟುಂಬದೊಂದಿಗೆ ಒಂದು ಹಂತದ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ರಚಿತಾರಾಮ್ ಅಕ್ಕನ ಮದುವೆಯಲ್ಲಿ ನಿಖಿಲ್ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಶೃಂಗೇರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಲ್ಲಿಸಿದ ಪೂಜೆಯಲ್ಲಿ ರಚಿತಾ ಭಾಗಿಯಾಗಿದ್ದರು ಅದಾದ ಕೆಲವೇ ದಿನಗಳ ನಂತರ ನಿಖಿಲ್ ಹುಟ್ಟಿದ ಹಬ್ಬಕ್ಕೆ ಶುಭಾಷಯವನ್ನು ಕೋರಿದ್ದರು. ಇಷ್ಟು ನಡೆದದ್ದೇ ತಡ ಮಾಂಸದಂಗಡಿ ಮುಂದೆ ಮೂಳೆ ತುಂಡಿಗಾಗಿ ಕಾದು ಕುಳಿತಿದ್ದ ನಾಯಿಯ ರೀತಿಯಲ್ಲಿ ರಚಿತಾ-ನಿಖಿಲ್ ಲವ್ವಿ-ಡವ್ವಿ, ನಿಖಿಲ್-ರಚಿತಾ ಮದುವೆ ಫಿಕ್ಸ್ ಎಂಬಂತ ಸುದ್ದಿಗಳನ್ನು ಬಿತ್ತರಿಸಲಾರಂಭಿಸಿದ್ದವು. ಪದೇ ಪದೇ ಇಂಥ ಗಾಸಿಪ್‍ಗಳನ್ನು ಕೇಳಿದ್ದ ರಚಿತಾ ಮತ್ತು ನಿಖಿಲ್ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಬೇರೇನೂ ಇಲ್ಲ ಎಂದು ಇಬ್ಬರೂ ಹೇಳಿದ್ದರು. ಅದಾದ ಕೆಲವೇ ದಿನಗಳಲ್ಲಿ ನಿಖಿಲ್‍ಗೆ ಬೇರೊಂದು ಹುಡುಗಿಯೊಂದಿಗೆ ಜೊತೆ ಮದುವೆ ಫಿಕ್ಸ್ ಆಗಿದೆ. ಸದ್ಯಕ್ಕೆ ಇಬ್ಬರ ಸ್ಟೋರಿಗೆ ಬ್ರೇಕ್ ಬಿದ್ದಿದ್ದು, ಮಾಧ್ಯಮಗಳು ಇಂಥದ್ದೇ ಸುದ್ದಿಯ ಹುಡುಕಾಟದಲ್ಲಿ ನಿರತವಾಗಿವೆ. ಅಂದಹಾಗೇ ಈ ರೀತಿಯ ಗಾಸಿಪ್ ಸುದ್ದಿಗಳು ಇದೇ ಮೊದಲೇನೂ ಅಲ್ಲ ಎಂಬುದು ಸಮಾಧಾನಕರ ಸಂಗತಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here