Homeಮುಖಪುಟನಮ್ಮ ಪ್ರಜಾಪ್ರಭುತ್ವ ಪಾಕಿಸ್ತಾನಕ್ಕಿಂತ ದುರ್ಬಲವಾಗಬಾರದು: ಒಂದು ಆಶಯ

ನಮ್ಮ ಪ್ರಜಾಪ್ರಭುತ್ವ ಪಾಕಿಸ್ತಾನಕ್ಕಿಂತ ದುರ್ಬಲವಾಗಬಾರದು: ಒಂದು ಆಶಯ

- Advertisement -
- Advertisement -

ನೀಲಗಾರ |

ಕೆಲವು ವರ್ಷಗಳ ಕೆಳಗೆ ಪಾಕಿಸ್ತಾನದ ಕವಿಯೊಬ್ಬರು ನಮ್ಮ ದೇಶದಂತೆ ನೀವಾಗಬೇಡಿ ಎಂದು ಭಾರತವನ್ನು ಉದ್ದೇಶಿಸಿ ಬಹಳ ನೋವಿನಿಂದ ಕೂಡಿದ ಕವಿತೆಯೊಂದನ್ನು ಬರೆದಿದ್ದರು.

ನಮ್ಮದೇ ಸೋದರಿ ದೇಶ, ಇಂದಲ್ಲಾ ನಾಳೆ ಒಂದೇ ಆಗಬೇಕಿರುವ ನೆರೆಯ ದೇಶವು ಅತ್ಯಂತ ಅರಾಜಕವಾದ ಪರಿಸ್ಥಿತಿಯಲ್ಲಿರುವುದು ನಮಗೆಲ್ಲರಿಗೂ ಗೊತ್ತು. ಸೈನ್ಯ, ಇಂಟೆಲಿಜೆನ್ಸ್ ಸಂಸ್ಥೆ, ಮತೀಯವಾದಿಗಳು, ಅಮೆರಿಕಾ ಮತ್ತು ಭ್ರಷ್ಟ ರಾಜಕಾರಣಿಗಳು ಇವೆಲ್ಲದರ ಮಧ್ಯೆ ನಲುಗುತ್ತಿರುವ ಜನಸಾಮಾನ್ಯರು  ಇದೇ ಪಾಕಿಸ್ತಾನ. ಹಾಗಾಗಿಯೇ ಭಯೋತ್ಪಾದಕರನ್ನೂ ಮಟ್ಟ ಹಾಕಲಾಗದ ದುಸ್ಥಿತಿ. ಬಹುಶಃ ಇದೇ ಆ ಕವಿಯ ಮನದಾಳದಲ್ಲಿದ್ದದ್ದು.

ಆದರೆ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ದುಃಖಕರವಾಗಿದೆ. ನಮ್ಮ ದೇಶದ ಸಿಆರ್‌ಪಿಎಫ್ ಮೇಲೆ ಭಯೋತ್ಪಾದಕ ದಾಳಿ ನಡೆದು ಸುಮಾರು 40ಕ್ಕೂ ಹೆಚ್ಚು ಯೋಧರು ಸಾವಿಗೀಡಾಗುತ್ತಾರೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಕರೆಯುತ್ತದೆ – ಪ್ರಧಾನಮಂತ್ರಿಯೇ ಅದರಲ್ಲಿ ಪಾಲ್ಗೊಳ್ಳದೇ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಾರೆ.

ಆ ನಂತರ ಭಾರತದ ವಾಯುಪಡೆಯು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತದೆ. ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನೊಂದು ಸರ್ವಪಕ್ಷ ಸಭೆ ನಡೆಯುತ್ತದೆ. ಆಗಲೂ ಪ್ರಧಾನಿ ಗೈರುಹಾಜರು. ಅವರು ಪ್ರತಿನಿತ್ಯ ಚುನಾವಣೆಯ ಸಿದ್ಧತೆಯಲ್ಲೇ ಹೆಚ್ಚು ತೊಡಗಿರುವುದು ಕಂಡು ಬರುತ್ತದೆ.

ಇದೇ ಅವಧಿಯಲ್ಲಿ ಪಾಕಿಸ್ತಾನದ ಇಮ್ರಾನ್‌ಖಾನ್ ಅವರು ಮಾಡಿದ ಭಾಷಣವೊಂದು ಎಲ್ಲೆಡೆ ಚರ್ಚೆಯಲ್ಲಿದೆ. ಆ ಭಾಷಣ ಮಾಡಿದ್ದು ಎಲ್ಲಿ ಗೊತ್ತೇ? ಸಂಸತ್ತಿನಲ್ಲಿ. ಅದೂ ಸಹಾ, ಈ ಸನ್ನಿವೇಶದಲ್ಲಿ ದೇಶದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೆಂದೇ ಕರೆದ ವಿಶೇಷ ಅಧಿವೇಶನ. ಅಲ್ಲಿಯೇ ಭಾರತದ ಜೊತೆಗೆ ಶಾಂತಿ ಹಸ್ತವನ್ನು ಚಾಚುವ ಉದ್ದೇಶದಿಂದ ನಾವು ಪೈಲಟ್ ಅಭಿನಂದನ್‌ರನ್ನು ಬಿಡುಗಡೆ ಮಾಡುತ್ತೇವೆ ಎಂದು ಇಮ್ರಾನ್‌ಖಾನ್ ಹೇಳಿದಾಗ, ಇಡೀ ಸಂಸತ್ತು ಮೇಜುತಟ್ಟಿ ಅದನ್ನು ಅನುಮೋದಿಸುತ್ತದೆ.

ಫೆ.28ರಂದು ನಡೆದ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರದ ಬಿಜೆಪಿ ಜಾಹೀರಾತು

ಅಭಿನಂದನ್‌ರ ಬಿಡುಗಡೆಯ ಸಂದೇಶ ಹೊರಬಂದ ಕೆಲ ಹೊತ್ತಿನಲ್ಲಿ ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಧಾನಿ ಮೋದಿಯವರಲ್ಲಿ ಒಂದು ಕೋರಿಕೆ ಮುಂದಿಡುತ್ತಾರೆ. ಅಭಿನಂದನ್ ದೇಶದೊಳಕ್ಕೆ ಬರುವುದು ವಾಘಾ ಗಡಿಯಿಂದ. ವಾಘಾ ಆ ಕಡೆಯ ಪಂಜಾಬ್‌ನಲ್ಲಿದ್ದರೆ, ಈ ಕಡೆಗೆ ಭಾರತದ ಪಂಜಾಬಿನ ಅಟ್ಟಾರಿ ಇದೆ. ಅಮೃತಸರ ಮತ್ತು ಲಾಹೋರ್ ನಡುವಿನ ದೂರ ಕೇವಲ 58 ಕಿ.ಮೀ. ತಾನು ಖುದ್ದಾಗಿ ಹೋಗಿ ಅಭಿನಂದನ್‌ರನ್ನು ಕರೆತರುತ್ತೇನೆ ಎಂದು ಅಮರಿಂದರ್ ಕೋರಿಕೆ.

ಇದಕ್ಕೆ ಕಾರಣವಿದೆ. ಅವರು ಕ್ಯಾಪ್ಟನ್ ಅಮರಿಂದರ್. ಸ್ವತಃ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದವರು. ಜೊತೆಗೆ ಈ ಸದ್ಯ ವಾಘಾ-ಅಟ್ಟಾರಿ ಬಾರ್ಡರ್ ಬರುವ ಪಂಜಾಬಿನ ಮುಖ್ಯಮಂತ್ರಿ. ಅಭಿನಂದನ್ ಮತ್ತು ಅವರ ತಂದೆಯು  ಶಿಕ್ಷಣ ಹಾಗೂ ತರಬೇತಿ ಪಡೆದುಕೊಂಡ ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿಯಲ್ಲೇ ಅಮರಿಂದರ್ ಸಿಂಗ್ ಸಹಾ ತರಬೇತಿ ಪಡೆದುಕೊಂಡಿದ್ದರು. ಜೊತೆಗೆ ಈ ಮನವಿ ಮಾಡಿಕೊಳ್ಳುವ ಹೊತ್ತಿನಲ್ಲಿ ಅಮರಿಂದರ್ ಸಿಂಗ್ ಅದೇ ಪ್ರದೇಶದಲ್ಲಿದ್ದರು. ಒಂದು ವೇಳೆ ಕ್ಯಾಪ್ಟನ್ ಅಮರಿಂದರ್ ಅವರು ವ್ಯಕ್ತಿಗತ ಇಮೇಜ್ ಹೆಚ್ಚಿಸಿಕೊಳ್ಳಲೆಂದೇ ಈ ಪ್ರಸ್ತಾಪ ಮುಂದಿಟ್ಟಿದ್ದಾರೆಂದುಕೊಳ್ಳಿ.

ಆದರೂ, ದೇಶದ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ದೇಶದ ಪ್ರಧಾನಿಗೆ ಇದೊಂದು ಅವಕಾಶವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಸೈನಿಕರಾದ ಅಮರಿಂದರ್‌ರನ್ನು ಅದಕ್ಕೆ ಕಳಿಸುವುದಕ್ಕಿಂತ ಒಳ್ಳೆಯ ನಡೆ ಇನ್ನೇನಾಗಿರಲು ಸಾಧ್ಯವಿತ್ತು?

ಆದರೆ ಮೋದಿಯವರು ಅಂಥಾ ಪ್ರಬುದ್ಧ ನಡೆಯನ್ನು ತೋರಲೇ ಇಲ್ಲ. ನಮ್ಮದೇ ದೇಶದ ಪ್ರಧಾನಿ ಹುದ್ದೆಯನ್ನು ಹೀಗಳೆಯುವುದು ಯಾರಿಗೂ ಇಷ್ಟವಿಲ್ಲದ ಸಂಗತಿ, ಆದರೆ ಪುಲ್ವಾಮಾ ಘಟನೆಯ ತರುವಾಯ ಪಾಕಿಸ್ತಾನದ ಪ್ರಧಾನಿ ವ್ಯವಹರಿಸಿದ ರೀತಿಗೂ ನಮ್ಮ ಭಾರತದ ಪ್ರಧಾನಿಯಾಗಿ ಮೋದಿಯವರು ತೋರಿದ ರಾಜಕೀಯ ಪ್ರೇರಿತ ನಡವಳಿಕೆಗಳಿಗೂ ಹೋಲಿಕೆ ಮಾಡಿದರೆ ನಿಜಕ್ಕೂ ಭಾರತೀಯರು ವಿಷಾದಗೊಳ್ಳಬೇಕಾಗಿ ಬಂದಿದೆ.

ಫೆಬ್ರವರಿ 28ರಂದು ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷವು `ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ (ಸಿಡ್ಬ್ಲುಸಿ) ಯ ಸಭೆ ಆಯೋಜಿಸಿತ್ತು. ಕಳೆದ ಆರು ದಶಕಗಳ (60 ವರ್ಷಗಳ) ನಂತರ ಈ ಅತಿದೊಡ್ಡ ಸಭೆ ನಡೆಸಲು ಕಾಂಗ್ರೆಸ್ ಯೋಜಿಸಿಕೊಂಡಿತ್ತು. ಜೊತೆಗೆ ಚುನಾವಣಾ ಪ್ರಚಾರಕ್ಕಾಗಿ `ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡುವುದೂ ಅದರ ಭಾಗವಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ್ದರಿಂದ ದೇಶದ ಭದ್ರತೆಗೆ ಒತ್ತು ಕೊಟ್ಟು ಕಾಂಗ್ರೆಸ್ ಆ ಸಭೆಗಳನ್ನು ಮುಂದಕ್ಕೂಡಿತು.

ಆದರೆ ಪ್ರಧಾನಿಯಾಗಿ ಮೋದಿಯವರು ಪುಲ್ವಾಮಾ ಘಟನೆಯ ತರುವಾಯ ನಿರಂತರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಆ ಭಯೋತ್ಪಾದಕ ದಾಳಿ ನಡೆದ ಸುದ್ದಿ ನಡೆದ ಮೇಲೂ ಮೋದಿಯವರು ಜಿಮ್ ಕಾರ್ಬೆಟ್  ನ್ಯಾಶನಲ್ ಪಾರ್ಕಿನಲ್ಲಿ ಜಾಹಿರಾತೊಂದರ ಶೂಟಿಂಗ್ ಮುಂದುವರೆಸಿದರು ಎಂಬ ಆಪಾದನೆ ಸುಳ್ಳೋ ನಿಜವೋ ಎಂದು ಇತ್ಯರ್ಥಗೊಳ್ಳುವ ಮೊದಲೇ ಅವರು ಝಾಂಸಿಯೂ ಒಳಗೊಂಡಂತೆ ಬೇರೆಬೇರೆ ಕಡೆ ಪಕ್ಷದ ಪರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯ ವೇದಿಕೆಯಲ್ಲಿ ಸರಕಾಗಿಸಿಕೊಂಡು ಮಾತನಾಡಿದರು. ಯಾವ ಆತಂಕವೂ ಇಲ್ಲದಂತೆ `ಖೇಲೊ ಇಂಡಿಯಾ’ ಆಪ್ ಬಿಡುಗಡೆ ಮಾಡಿದರು.

ಫೆಬ್ರವರಿ 28ರಂದು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮೂಲಕ `ಮೇರಾ ಬೂತ್ ಸಬ್ ಸೇ ಮಜಬೂತ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚುನಾವಣಾ ಪ್ರಚಾರ ಮಾಡಿದರು. ದೇಶದ ರಾಜಕಾರಣಿಗಳಲ್ಲೆ ಅತಿಹೆಚ್ಚು ಸೋಶಿಯಲ್ ಮೀಡಿಯಾ ಬಳಸುವ, ಫಾಲೋವರ್ ಗಳನ್ನು ಹೊಂದಿರುವ ರಾಜಕಾರಣಿ ಅಂದ್ರೆ ಮೋದಿಯವರು. ಟ್ವೀಟ್ಟರ್ ನಲ್ಲಿ ನಾಲ್ಕೂವರೆ ಕೋಟಿಗೂ ಹೆಚ್ಚು ಫಾಲೋವರ್.ಗಳನ್ನು ಹೊಂದಿದ್ದಾರೆ. ಆದರೆ ಪುಲ್ವಾಮಾ ಘಟನೆಯ ನಂತರ ಟ್ವಿಟ್ಟರ್ ನಲ್ಲೂ ಅವರು ಬಿಜೆಪಿ ರಾಜಕೀಯ ಪ್ರಚಾರಗಳನ್ನು ಹೆಚ್ಚಾಗಿ ಟ್ವೀಟ್ ಮಾಡಿದ್ದಾರೆಯೇ ವಿನಾಃ ಆತಂಕದ ಸ್ಥಿತಿಯಲ್ಲಿ ದೇಶಕ್ಕೆ ಅಗತ್ಯವಿರುವ ನಾಯಕತ್ವದ ಮಾತುಗಳು ಅವರಿಂದ ಟ್ಟೀಟುಗೊಂಡಿಲ್ಲ.

ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದಕ್ಕೆಂದೇ ವಿಶೇಷ ಅಧಿವೇಶನ ಕರೆದು ವಿರೋಧ ಪಕ್ಷಗಳನ್ನೂ ಸಹಮತಕ್ಕೆ ತೆಗೆದುಕೊಂಡು ಸಮತೂಕದ ಮಾತುಗಳನ್ನಾಡುವ ಇಮ್ರಾನ್ ಖಾನ್ ಜಿನೆವಾ ಒಪ್ಪಂದವನ್ನು ಗೌರವಿಸಿ ತನ್ನ ವಶದಲ್ಲಿದ್ದ ಭಾರತದ ಕಮಾಂಡರ್ ಅಬಿನಂದನ್ ಬಿಡುಗಡೆಯನ್ನು ಸಂಸತ್ತಿನಲ್ಲೇ ಘೋಷಿಸುವಾಗ ಒಂದು ಆಶಯವಂತೂ ಭಾರತದ ಶಾಂತಿಪ್ರಿಯತೆ ಮತ್ತು ಸೌಹಾರ್ದತೆಯನ್ನು ಗೌರವಿಸುವ ನಿಜವಾದ ದೇಶಪ್ರೇಮಿಗಳಲ್ಲ ಮನಸಿನಲ್ಲಿ ಪುಟಿದೇಳುತ್ತಿರುತ್ತದೆ.  ಅದು, ಮೋದಿಯವರ ಕಾಲದಲ್ಲಿ ಭಾರತ ಪಾಕಿಸ್ತಾನದಂತಾಗದಿರಲಿ, ದೇಶದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿ ಎಂಬುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋವಿಡ್-19 ಲಸಿಕೆ ಮತ್ತು ಯುವ ವಯಸ್ಕರ ಹಠಾತ್ ಸಾವುಗಳ ನಡುವೆ ಯಾವುದೇ ವೈಜ್ಞಾನಿಕ ಸಂಬಂಧ ಕಂಡುಬಂದಿಲ್ಲ: ಏಮ್ಸ್ ಅಧ್ಯಯನ

ನವದೆಹಲಿ: ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ಒಂದು ವರ್ಷದ ಸಮಗ್ರ, ಶವಪರೀಕ್ಷೆ ಆಧಾರಿತ ವೀಕ್ಷಣಾ ಅಧ್ಯಯನವು, ಯುವ ವಯಸ್ಕರಲ್ಲಿ ಕೋವಿಡ್-19 ಲಸಿಕೆಯನ್ನು ಹಠಾತ್ ಸಾವುಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ಇದು ಕೋವಿಡ್ ಲಸಿಕೆಗಳ...

ಬಿಜೆಪಿ ಜನ ನಾಟಕೀಯರು, ದೇಶದ್ರೋಹಿಗಳು; ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಲ್ಲಿಕಾರ್ಜುನ ಖರ್ಗೆ

"ಬಿಜೆಪಿಯವರು 'ಗದ್ದಾರ್‌ಗಳು' (ದೇಶದ್ರೋಹಿಗಳು) ಮತ್ತು 'ಡ್ರಮೆಬಾಜ್' (ನಾಟಕೀಯದಲ್ಲಿ ತೊಡಗಿಸಿಕೊಳ್ಳುವವರು). ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ಕುರಿತ...

ಆಸ್ಟ್ರೇಲಿಯಾ | ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ : 12 ಜನರು ಸಾವು

ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ 'ಹನುಕ್ಕಾ' ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

ಕೋಲ್ಕತ್ತಾದಲ್ಲಿ ನಡೆದ ಅವ್ಯವಸ್ಥೆ: ‘ಮೆಸ್ಸಿ ಭಾರತ ಪ್ರವಾಸ 2025’ರ ಪ್ರಮುಖ ಆಯೋಜಕರಿಗೆ 14 ದಿನಗಳ ಕಸ್ಟಡಿ

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಲಿಯೋನೆಲ್ ಮೆಸ್ಸಿ ಅವರ ಇಂಡಿಯಾ ಟೂರ್ 2025 ರ ಪ್ರಮುಖ ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ.  ಈ ಘಟನೆಯು ಪ್ರತಿಭಟನೆಗಳಿಗೆ...

ಹೆಡ್ಗೆವಾರ್ ಸ್ಮಾರಕ ಭೇಟಿ ತಪ್ಪಿಸಿಕೊಂಡ ಅಜಿತ್ ಪವಾರ್ : ನಮ್ಮದು ಅಂಬೇಡ್ಕರ್, ಫುಲೆ ಸಿದ್ಧಾಂತ ಎಂದ ಎನ್‌ಸಿಪಿ ವಕ್ತಾರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ (ಡಿ.14) ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಸ್ಮಾರಕ ಭೇಟಿ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದು, ಅವರ ಪಕ್ಷ ಎನ್‌ಸಿಪಿ ರಾಜ್ಯದ ಅಭಿವೃದ್ಧಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವುದಾಗಿ ಒತ್ತಿ...

ದೆಹಲಿಗೆ ಬರುವ ನಮ್ಮ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ : ಡಿಕೆಶಿ

ದೆಹಲಿ ಬರುತ್ತಿರುವ ನಮ್ಮವರ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್‌ಲೀಲಾ...

ಹೊಸೂರು ವಿಮಾನ ನಿಲ್ದಾಣ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಿಂದ 2,900 ಎಕರೆ ಸ್ವಾಧೀನ ಸಾಧ್ಯತೆ

ಚೆನ್ನೈ: ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ ಸುಮಾರು 3,000...

ಸೋನಮ್ ವಾಂಗ್‌ಚುಕ್ ಸಂಸ್ಥೆ ಅನುಕರಣೀಯ ಕೆಲಸ ಮಾಡುತ್ತಿದೆ, ಯುಜಿಸಿ ಮಾನ್ಯತೆ ನೀಡಬೇಕು ಎಂದ ಸಂಸದೀಯ ಸಮಿತಿ

ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್‌) 'ಅನುಕರಣೀಯ' ಕೆಲಸ ಮಾಡುತ್ತಿದೆ. ಹಾಗಾಗಿ, ಆ ಸಂಸ್ಥೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾನ್ಯತೆ...

ಮುಸ್ಲಿಂ ಎಂದು ಪರಿಶೀಲಿಸಿ ಗುಂಪುಹಲ್ಲೆ: ತೀವ್ರ ದಾಳಿಗೆ ಒಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ  ಸಾವು

ನವಾಡಾ ಜಿಲ್ಲೆಯ ರೋಹ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಕ್ರೂರವಾಗಿ ಹಲ್ಲೆಗೊಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಥರ್ ಹುಸೇನ್ ಶುಕ್ರವಾರ ತಡರಾತ್ರಿ ಬಿಹಾರ್ಷರೀಫ್ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್...

ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 2 ಸಾವು, 8 ಜನರಿಗೆ ತೀವ್ರ ಗಾಯಗಳಾಗಿವೆ

ಅಮೆರಿಕಾದ ರೊಡ್ ಐಲ್ಯಂಡ್ ರಾಜ್ಯದ ಪ್ರೊವಿಡೆನ್ಸ್ ನಗರದಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಸಮಯದಲ್ಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದೆ, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಡಿಸೆಂಬರ್ 13ರ,...