Homeಕರ್ನಾಟಕರೋಷನ್ ಬೇಗ್ ಉಚ್ಛಾಟನೆ: ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆದ ಕಾಂಗ್ರೆಸ್

ರೋಷನ್ ಬೇಗ್ ಉಚ್ಛಾಟನೆ: ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆದ ಕಾಂಗ್ರೆಸ್

- Advertisement -
- Advertisement -

| ನಾನು ಗೌರಿ ಡೆಸ್ಕ್ |

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಹಾಗೂ ಭಿನ್ನಮತೀಯ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಆ ಮೂಲಕ ಪಕ್ಷದ ರಾಜ್ಯ ಚುಕ್ಕಾಣಿ ಹಿಡಿದಿರುವ ನಾಯಕರು ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆದಂತಾಗಿದೆ. ಆದರೆ, ಈ ಏಟು ಹೊಡೆಯುವ ಮುನ್ನವೇ, ರೋಷನ್ ಬೇಗ್‍ರನ್ನು ಸಂಪೂರ್ಣ ಮಕಾಡೆ ಮಲಗಿಸಲಾಗಿತ್ತು ಎಂಬುದು ಅಸಲೀ ವಿಚಾರ.

ಐಎಂಎ ಎಂಬ ನಕಲಿ ಕಂಪೆನಿಯೊಂದರ ಜೊತೆ ಸಖ್ಯ ಹೊಂದಿದ್ದ ರೋಷನ್ ಬೇಗ್‍ರನ್ನು ಹಣಿಯಲೆಂದೇ, ಸದರಿ ಹಗರಣವನ್ನು ವ್ಯವಸ್ಥಿತವಾಗಿ ಹೊರತೆಗೆಯಲಾಯಿತು. ಅದರ ಮೂಲಕ ಯಾವ ರೀತಿ ಸನ್ನಿವೇಶ ಸೃಷ್ಟಿಯಾಯಿತೆಂದರೆ, ರೋಷನ್ ಬೇಗ್‍ರಂತಹ ನಾಯಕ ಬರುತ್ತೇನೆಂದರೂ ಇತರ ಪಕ್ಷಗಳು ಬೇಡ ಎಂದು ಹೇಳಬೇಕು, ಆ ರೀತಿಯಲ್ಲಿ. ಸಿದ್ದರಾಮಯ್ಯನವರನ್ನು ಅಹಂಕಾರಿ, ದಿನೇಶ್ ಗುಂಡೂರಾವ್ ನಾಲಾಯಕ್ ಮತ್ತು ಕೆ.ಸಿ.ವೇಣುಗೋಪಾಲ್‍ರನ್ನು ಬಫೂನ್ ಎಂದು ಕರೆದ ವ್ಯಕ್ತಿಯೊಬ್ಬರನ್ನು ಪಕ್ಷದಲ್ಲಿ ಮುಂದುವರೆಸಿದ್ದರೆ, ಪಕ್ಷವೇ ನಾಲಾಯಕ್ ಆಗಿರುತ್ತಿತ್ತು.

ಆದರೆ, ಮೋದಿಯನ್ನು ಹೊಗಳಲು ಶುರು ಮಾಡಿದ್ದ ಬೇಗ್‍ರನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲವೆಂಬ ಗ್ಯಾರಂಟಿ ಇರಲಿಲ್ಲ. ಹಾಗೇನಾದರೂ ಆಗಿದ್ದರೆ ಕಾಂಗ್ರೆಸ್‍ಗೆ ಕಷ್ಟವಾಗುತ್ತಿತ್ತು. ಆದರೆ, ಯಾವಾಗ ಲೋಕಸಭಾ ಚುನಾವಣೆಯಲ್ಲಿ ಬೇಗ್‍ರ ಅಸಹಕಾರದ ನಡುವೆಯೂ, ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್‍ಗೆ ಲೀಡ್ ಬಂದಿತ್ತೋ ಆಗಲೇ ಬೇಗ್ ಮತ್ತೆ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಶಿವಾಜಿನಗರದಲ್ಲಿ ಗೆಲ್ಲಲಾರರು ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ ಏಕಾಏಕಿ ಅವರನ್ನು ಹೊರಹಾಕುವುದು ಅಷ್ಟು ಸುಲಭವಿರಲಿಲ್ಲ. ಆದರೆ, ಐಎಂಎ ಹಗರಣದ ನಂತರ, ಬೇಗ್ ಕಥೆ ಮುಗಿದಂತೆ ಎಂದಾಗಿಬಿಟ್ಟಿತ್ತು.

ಇದೀಗ ಅವರನ್ನು ಉಚ್ಛಾಟಿಸುವ ಮೂಲಕ ಕಾಂಗ್ರೆಸ್ ಹಲವು ಸಂದೇಶಗಳನ್ನು ಕೊಟ್ಟಿದೆ. ಕಾಂಗ್ರೆಸ್‍ನ ಮುಸ್ಲಿಂ ನಾಯಕರು ಜಮೀರ್, ರಿಜ್ವಾನ್‍ರೇ ಹೊರತು ಬೇಗ್ ಅಲ್ಲ ಎಂಬುದು ಒಂದು ಸಂದೇಶ. ಭಿನ್ನಮತೀಯರ ಜೊತೆ ಸಾಫ್ಟ್ ಆಗಿರುವುದಿಲ್ಲವೆಂಬ ಸಂದೇಶ. ಅದರಲ್ಲೂ ಸಿದ್ದರಾಮಯ್ಯನವರನ್ನು ಬೈದು ಪಕ್ಷದಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂಬ ಮೆಸೇಜ್. ನಾವೂ ಯಾರ್ಯಾರನ್ನು ಹೇಗ್ಹೇಗೆ ಬಲಿ ಹಾಕಬೇಕೆಂಬುದರಲ್ಲಿ ಪಟ್ಟು ಸಾಧಿಸಿದ್ದೀವಿ ಎಂಬುದನ್ನೂ ಈ ಮೂಲಕ ಹೇಳಿದಂತಾಗಿದೆ.

ರೋಷನ್ ಬೇಗ್ ಅಮಾನತಿನಿಂದ ಅವರು ಶಾಸಕ ಸ್ಥಾನವನ್ನೇನೂ ಕಳೆದುಕೊಳ್ಳುವುದಿಲ್ಲ. ಅದರ ಅರ್ಥ ಬೇರೆ ಪಕ್ಷಕ್ಕೆ ಹೋಗುವಂತೆಯೂ ಇಲ್ಲ. ಒಂಥರಾ ತ್ರಿಶಂಕು ಸ್ಥಿತಿ. ಬೆಂಗಳೂರಿನ ಮತ್ತು ರಾಜ್ಯದ ಇತರ ಭಿನ್ನಮತೀಯರೂ ಒಂದು ಸಾರಿ ಬೆಚ್ಚಿಬೀಳುವ ಸ್ಥಿತಿ ಇದರಿಂದ ನಿರ್ಮಾಣವಾಗಿದೆ.

ಹಗರಣದಲ್ಲಿ ಭಾಗಿಯಾದವರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನವಿಲ್ಲ ಎಂದೂ ಇದರಿಂದ ಹೇಳಿದಂತಾಗಿದೆ. ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೇಗ್‍ರಿಗೆ ಇದ್ದದ್ದು ರಾಜ್ಯ ನಾಯಕರ ಬಲವಲ್ಲ, ಹೈಕಮ್ಯಾಂಡ್‍ನಲ್ಲಿ ಪ್ರಬಲವಾಗಿರುವ ನಾಯಕರ ಬಲ. ಅದನ್ನು ಸೂಕ್ತವಾಗಿ ನ್ಯೂಟ್ರಲೈಸ್ ಮಾಡಿಯೇ ಈ ತೀರ್ಮಾನವನ್ನು ಘೋಷಿಸಲಾಗಿದೆ.

ಇನ್ನು ರೋಷನ್‍ಬೇಗ್‍ರ ಮುಂದಿನ ನಡೆ ಏನಾಗಿರುತ್ತದೆಂದು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. People like Roshan baig, should be shown place. So far he has enjoyed powers as Congress MLA, minister and so on. Now he is barking against his own party superiors. If he doesn’t like to stay in Congress, let him have a graceful exit. Who cares for such an idiotic leader.Even without blaming siddaramaiah, Dinesh gundurao and venugopal he can join BJP or any other party he likes. Praising Modi shows his boot licking nature just to enjoy power under Muslim quota. Even BJP doesn’t need a boot licker and back staber. People of Karnataka should call it a day for such selfish people.

LEAVE A REPLY

Please enter your comment!
Please enter your name here

- Advertisment -

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...