Homeಅಂಕಣಗಳುಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ...

ಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ…

- Advertisement -
- Advertisement -

ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಇವುಗಳ ಸಂಯುಕ್ತ ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದೆ. ಜಾತ್ಯಾತಿತ ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ವಿನಂತಿಸಿಕೊಂಡಿತು. ಈ ಕರಾರಿನ ಪ್ರಕಾರವೇ ಈಗ ಸರ್ಕಾರ ನಡೆಯುತ್ತಿದೆ.
‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಭಾಜಪ ಈ ಸಂಯುಕ್ತ ಸರಕಾರದ ಬಗೆಗೆ ವಿಷ ಕಾರುತ್ತಿದೆ. ಅದು ಭಾಜಪಗೆ ಸಹಜ. ಯಡಿಯುರಪ್ಪನವರು ‘ತೀನ್‍ದಿನ್‍ಕಾ ಸುಲ್ತಾನ್’ ಆಗಿ ಬಹುಮತವಿಲ್ಲದೆ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಹೋಗಬೇಕಾದ ದುಸ್ಥಿತಿ ಬಂದಿದ್ದರಿಂದ ಅವರಿಗೆ ಮುಖ ಭಂಗವಾಗಿದೆ. ಅದಕ್ಕಾಗಿ ಯಡಿಯುರಪ್ಪನವರೂ, ಭಾಜಪದ ಇತರ ಶಾಸಕರೂ ಹೊಸ ಸರ್ಕಾರದ ಬಗೆಗೆ ಮನಸೋ ಇಚ್ಛೆ ಮಾತಾನಾಡುತ್ತಿದ್ದಾರೆ. ಅದೂ ಅವರಿಗೆ ಸಹಜ.
ಆದರೆ ಆಡಳಿತ ಪಕ್ಷಗಳ ಶಾಸಕರೇ ಸರ್ಕಾರದ ಕಾಲು ಹಿಡಿದು ಎಳೆಯುವ ಕಾರ್ಯದಲ್ಲಿ ತೊಡಗಿರುವುದು ಅವರ ಬೇಜವಾಬ್ದಾರಿ ಪ್ರವೃತ್ತಿಯನ್ನು ತೋರಿಸುತ್ತದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಮಾದ್ಯಮಗಳು ಕೂಡ ಈ ಸರ್ಕಾರದ ವಿರುದ್ಧದ ಅನವಶ್ಯಕ ಟೀಕೆಗಳಿಗೆ ಹೆಚ್ಚಿನ ಮಹತ್ವ ನೀಡಿ ಪ್ರಚಾರ ಮಾಡುತ್ತಿರುವುದು ಅಪೇಕ್ಷಣೀಯವಲ್ಲ.
‘ಕುಮಾರಸ್ವಾಮಿಯವರು ಸರ್ಕಾರವನ್ನು ರಚಿಸಲಿ, ಅವರಿಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಎಲ್ಲ ಅಧಿಕಾರ ನೀಡಬೇಕು, ಕಾಂಗ್ರೆಸ್ ನಿಷ್ಕ್ರಿಯವಾಗಬೇಕು ಎಂಬಂತೆ ಅರ್ಥೈಸಬಾರದು. ಮೈತ್ರಿ ಧರ್ಮಕ್ಕೆ ಪಾಲಿಸುತ್ತಾ ಎರಡೂ ಪಕ್ಷಗಳ ಮ್ಯಾನಿಫೆಸ್ಟೋಗಳಿಗೆ ಮನ್ನಣೆ ನೀಡಬೇಕು. ಎರಡೂ ಪಕ್ಷಗಳು ಚುನಾವಣಾ ವೇಳೆಯಲ್ಲಿ ಘೋಷಿಸಿರುವ ಮುಖ್ಯ ಭರವಸೆಗಳನ್ನು ಕಾರ್ಯರೂಪಕ್ಕಿಳಿಸುವ ಮಾರ್ಗಗಳನ್ನು ಹುಡುಕಬೇಕು. ಎರಡೂ ಪಕ್ಷಗಳೂ ಜನರ ಮನ್ನಣೆ ಪಡೆಯಬೇಕು ಎಂಬ ಧ್ಯೇಯ ಇಟ್ಟುಕೊಂಡು ಸರ್ಕಾರ ಮುನ್ನಡೆಯಬೇಕಾಗುತ್ತದೆ.
ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಘೋಷಣೆ ಮಾಡಿದ್ದಾರೆ. ಅದು ಕಷ್ಟ ಸಾಧ್ಯವಾದ ಕೆಲಸ ಎಂಬುದು ಉಭಯ ಪಕ್ಷಗಳಿಗೂ ಗೊತ್ತು. ರೈತರ ಆಗ್ರಹಕ್ಕೆ ತುತ್ತಾಗಲು ಕುಮಾರಸ್ವಾಮಿಗಳು ತಯಾರಿಲ್ಲವಾದ್ದರಿಂದ ಅವರ ಮಾತನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳೂ ಇದಕ್ಕೆ ಒಪ್ಪಿಕೊಂಡಿವೆ. ಅದರಂತೆಯೇ ಕಾಂಗ್ರೆಸ್ ತಾನು ಆರಂಭಿಸಿದ ಜನಪ್ರಿಯ ಕಾರ್ಯಕ್ರಮಗಳನ್ನು ಈ ಸರ್ಕಾರ ಮುಂದುವರೆಸಬೇಕು ಎಂದು ಒತ್ತಾಯ ಹಾಕುತ್ತಿದೆ. ಅದನ್ನು ಕಾರ್ಯಗತಗೊಳಿಸುವುದು ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿCommon Minimum Programme ಏನಿರಬೇಕು ಎಂಬುದನ್ನು ಗೊತ್ತುಮಾಡಿ ಅದರಂತೆ ನಡೆಯುವುದು ಸೂಕ್ತ.
ಕುಮಾರಸ್ವಾಮಿ ತಾವು ಹೇಗೊ ಅಧಿಕಾರಕ್ಕೆ ಬರುವುದಿಲ್ಲವೆಂದು ತಿಳಿದು ರೈತರ ಸಾಲಮನ್ನಾ ವಿಚಾರವನ್ನು ಚುನಾವಣಾ ಪ್ರಚಾರ ಕಾಲದಲ್ಲಿ ಪ್ರಸ್ತಾಪಿಸಿರಬಹುದು. ಅಕಸ್ಮಾತ್ ಅಧಿಕಾರಕ್ಕೆ ಬಂದಿರುವುದರಿಂದ ಅದನ್ನು ಕಾರ್ಯಗತ ಮಾಡಿ ತೋರಿಸಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಇದನ್ನು ಹೇಗೆ ನಿಭಾಯಿಸುವರೆಂಬುದನ್ನು ಕುತೂಹಲದಿಂದ ಕರ್ನಾಟಕದ ಜನತೆ ಎದುರು ನೋಡುತ್ತಿದೆ.
‘ಎತ್ತು ಏರಿಗೆ ಎಳೆಯಿತು, ಎಮ್ಮೆ ನೀರಿಗಿಳಿಯಿತು’. ಎಂಬ ರೀತಿ ಈ ಸಂಯುಕ್ತ ಸರ್ಕಾರ ಮೂರಾಬಟ್ಟೆ ಯಾಗಬೇಕೆಂದು ವಿರೋಧಪಕ್ಷ ಆಶಿಸುತ್ತದೆ. ವಿರೋಧ ಪಕ್ಷದ ಈ ಆಶಯವನ್ನು ಸುಳ್ಳು ಮಾಡುವುದಾಗಿ ಅಧಿಕಾರಾರೂಢ ಪಕ್ಷಗಳು ಶಪಥ ತೊಡಬೇಕು. ಎಲ್ಲ ಶಾಸಕರಿಗೂ, ಮಂತ್ರಿಗಳಿಗೂ ಒಳ್ಳೆಯ ಆಡಳಿತ ನೀಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು, ಭ್ರಷ್ಟಾಚಾರರಹಿತ ಆಡಳಿತವನ್ನು ಜಾರಿಗೆ ತರಬೇಕು ಎಂಬ ಕಾತರ ಇರಬೇಕು. ಯಾವುದೇ ಕಾರಣದಿಂದ ಈ ಉಭಯ ಪಕ್ಷಗಳು ಕಚ್ಚಾಡಿಕೊಂಡು ಬೀದಿಗೆ ಬೀಳಬಾರದು. ನಮ್ಮ ಶಾಸಕರಲ್ಲಿ, ಮಂತ್ರಿಗಳಾಗಿರುವವರಲ್ಲಿ ಅನೇಕರಿಗೆ ತಮ್ಮ ಹೊಣೆಗಾರಿಕೆ ಏನು ಎಂಬುದು ತಿಳಿದಿಲ್ಲ. ರಾಜ್ಯಾಡಳಿತ ಮಕ್ಕಳ ಆಟವಲ್ಲ ಎಂಬ ಅರಿವು ಅವರಲ್ಲಿ ಮೂಡಬೇಕು. ಅಧಿಕಾರ ಹಂಚಿಕೆಯೆಂಬುದು ಪಿತ್ರಾರ್ಜಿತ ಸ್ವತ್ತುಗಳ ಹಂಚಿಕೆಯಂತಲ್ಲ ಎಂಬುದನ್ನು ಉಭಯರೂ ಅರ್ಥಮಾಡಿಕೊಳ್ಳಬೇಕು.
ಕುಮಾರಸ್ವಾಮಿಯವರ ಸರ್ಕಾರ ರೈತರ ಸಾಲಮನ್ನಾದಂತಹ ಕ್ಲಿಷ್ಟವಾದ ಸಮಸ್ಯೆಗಳನ್ನು ತನ್ನ ಆಡಳಿತಾವಧಿಯಲ್ಲಿ ಮತ್ತೆ ಸೃಷ್ಟಿಸಬಾರದು. ರೈತ ಸಂಘಕ್ಕೆ ರೈತರ ಸಾಲಮನ್ನಾ ಧ್ಯಾನ ಬಿಟ್ಟರೆ ಇತರೆ ವಿಚಾರಗಳ ಬಗ್ಗೆ ಅವರು ಲಕ್ಷ್ಯ ಕೊಡುವುದಿಲ್ಲ. ರೈತರ ಸಂಘಟನೆಗಳ ನಾಯಕತ್ವದಲ್ಲಿ ಬಹಳಷ್ಟು ಮಂದಿ ಜಮೀನ್ದಾರರು. ಇವರು ರೈತಸಂಘಕ್ಕೂ ಸದಸ್ಯರು, ಬೇರೆ ಬೇರೆ ರಾಜಕೀಯ ಪಾರ್ಟಿಗಳಿಗೂ ಸದಸ್ಯರು. ರೈತ ಸಂಘಟನೆಗಳಲ್ಲಿ ನುಸುಳಿರುವ ಈ ಪಟ್ಟ ಭದ್ರ ಹಿತಾಸಕ್ತಿಗಳು, ರೈತ ಸಂಘಕ್ಕೆ ಸದಸ್ಯರಾಗುವ ಏಕೈಕ ಉದ್ದೇಶ, ಸಾಲಮನ್ನಾ ಮೊದಲುಗೊಂಡು ರೈತರ ಹೆಸರಿನಲ್ಲಿ ದೊರಕಬಹುದಾದ ಎಲ್ಲ ಸೌಕರ್ಯಗಳನ್ನೂ ತಮ್ಮದಾಗಿಸಿಕೊಳ್ಳುವುದಲ್ಲದೆ ಬೇರೇನೂ ಇಲ್ಲ. ಈ ವ್ಯವಸ್ಥೆಯಲ್ಲಿ ಸರ್ಕಾರದಿಂದ ಬಡ ರೈತರಿಗೆ ಪುಡಿಕಾಸು ಸಿಕ್ಕಿದರೆ ಈ ಛದ್ಮ ವೇಷದ ಸ್ವಾರ್ಥಿ ಜಮೀನ್ದಾರರಿಗೆ ದೊಚಲು ಸಿಗುವುದು ಸಿಂಹಪಾಲು.
ಪ್ರತಿವರ್ಷ ಸ್ವಾರ್ಥಿಗಳ ಕಿಸೆತುಂಬುವ ಈ ಸಾಲಮನ್ನಾ ಪ್ರಹಸನವನ್ನು ಈ ಸರ್ಕಾರ ಕೊನೆಗಾಣಿಸಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿರ್ಧರಿಸಬೇಕು. ರೈತರು ಬೆಳೆದ ಬೆಳೆ ನೇರವಾಗಿ ಗ್ರಾಹಕನಿಗೆ ದೊರಕುವಂತೆ ಮಾಡಿ ದಳ್ಳಾಳಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಬೇಕು.
ರೈತ ಸಂಘಕ್ಕೆ ಒಂದು ಸೂಚನೆ. ರೈತ ಸಂಘ ಒಂದು ರಾಜಕೀಯ ಪಕ್ಷವಾಗಿಯೂ ಬೆಳೆಯಬೇಕು. ಹಾಗೆಯೇ ಅದು ಒಂದು ರೈತರ ಹಿತಕಾಯುವ ಹೋರಾಟ ಸಮಿತಿಯಾಗಿಯೂ ಕೆಲಸ ಮಾಡಬೇಕು. ರೈತ ಸಂಘಕ್ಕೆ ಸೇರುವವರು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸದಸ್ಯರಾಗಿರಬಾರದು ಎಂಬ ನಿಯಮವನ್ನು ಜಾರಿಗೆ ತರಬೇಕು. ಹೀಗಾದಾಗ ಒಂದಲ್ಲ ಒಂದು ದಿನ ಕರ್ನಾಟಕದಲ್ಲಿ ರೈತರ ರಾಜ್ಯ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ರಾಜ್ಯದ ರೈತ ಸಂಘ ಗಂಭೀರವಾಗಿ ವಿಚಾರ ಮಾಡಿ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...