Homeಚಳವಳಿಉನ್ನಾಂವ್ ಸಂತ್ರಸ್ತೆ ಕೊಲೆಯತ್ನಕ್ಕೆ ವ್ಯಾಪಕ ವಿರೋಧ: ಘಟನೆ ವಿರೋಧಿಸಿ ಇಂದು ಸಂಜೆ ದೆಹಲಿಯಲ್ಲಿ ಪ್ರತಿಭಟನೆ

ಉನ್ನಾಂವ್ ಸಂತ್ರಸ್ತೆ ಕೊಲೆಯತ್ನಕ್ಕೆ ವ್ಯಾಪಕ ವಿರೋಧ: ಘಟನೆ ವಿರೋಧಿಸಿ ಇಂದು ಸಂಜೆ ದೆಹಲಿಯಲ್ಲಿ ಪ್ರತಿಭಟನೆ

- Advertisement -
- Advertisement -

ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಪ್ರಮುಖ ಆರೋಪಿಯಾಗಿರುವ ಉನ್ನಾಂವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಸಂತ್ರಸ್ತ ಯುವತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಆಕೆಯ ಇಬ್ಬರು ಸಂಬಂಧಿಕರು ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ಘಟನೆ ಕುರಿತು ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ನೇರಾ ನೇರ ಕೊಲೆ ಯತ್ನ ಎಂದು ಆರೋಪಿಸಲಾಗಿದೆ.

ಇದನ್ನು ವಿರೋಧಿಸಿ ಇಂದು ಸಂಜೆ 7 ಗಂಟೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಟಾರ್ಚ್ ಲೈಟ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

“ಉನ್ನಾಂವ್ ಘಟನೆ ನೋಡಿ ನಿಮಗೆ ಆಕ್ರೋಶ ಹುಟ್ಟುತ್ತಿಲ್ಲವೇ?

ಹೌದು ಎಂದಾದರೆ, ಆ ಧೈರ್ಯಶಾಲಿ ಮಹಿಳೆಯೊಂದಿಗೆ ನಿಲ್ಲಲು ಇಂದು ಸಂಜೆ ಬನ್ನಿ ಸೇರಿಕೊಳ್ಲಿ

ಸ್ಥಳ: ಇಂಡಿಯಾ ಗೇಟ್
ಸಮಯ: ಸಂಜೆ 7
ಫಾರ್ಮ್: (ಮೊಬೈಲ್) ಟಾರ್ಚ್ ಲೈಟ್
ವಿನಂತಿ: ದಯವಿಟ್ಟು ಯಾವುದೇ ಪಕ್ಷ / ಸಂಘಟನೆಗಳ ಬ್ಯಾನರ್‌ಗಳು / ಧ್ವಜಗಳು ಇಲ್ಲ

ಸಾಧ್ಯವಾದಷ್ಟು ವ್ಯಾಪಕವಾಗಿ ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.”

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ” ಉನ್ನಾಂವ್ ಅತ್ಯಾಚಾರದ ಸಂತ್ರಸ್ತೆಯನ್ನು ಮತ್ತು ಅವಳ ಕುಟುಂಬವನ್ನು ನಿರ್ಮೂಲನೆ ಮಾಡುವ ವ್ಯವಸ್ಥಿತ, ಪೂರ್ವ ಯೋಜಿತ ಪಿತೂರಿ ನಡೆಯುತ್ತಿವೆ. ಇದು  ಕಾನೂನಿನ ನಿಯಮಗಳನ್ನೆ ಅಣಕ ಮಾಡುತ್ತಿವೆ.
ಇಂತಹ ರಾಜ್ಯ ಪ್ರಾಯೋಜಿತ ಅನಾಗರೀಕತೆಗೆ ಯಾವುದೇ ನಾಗರಿಕ ಸಮಾಜವು ಹೇಗೆ ಅನುಮತಿಸುತ್ತದೆ?’ ಎಂದು ಟ್ವೀಟ್ ಮಾಡಿದ್ದಾರೆ.

ಸ್ವಾತಿ ಚತುರ್ವೇದಿಯವರು “ಉನ್ನಾಂವ್ ಅತ್ಯಾಚಾರ ಆರೋಪಿ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನನ್ನು ಇನ್ನು ಯಾಕೆ ಬಿಜೆಪಿಯಿಂದ ಅಮಿತ್ ಶಾ ಉಚ್ಛಾಟಿಸಿಲ್ಲ” ಎಂದು ಪ್ರಶ್ನಿಸಿದ್ದಾರೆ.

“ಈ ನಡುವೆ ಕಾಂಗ್ರೆಸ್‌ ಬೇಟಿ ಬಚಾವೊ-ಬೇಟಿ ಪಡಾವೊ – ಟ್ವೀಟ್ಸ್ ಲಗಾವೊ ಎಂದು ಟ್ವೀಟ್ ಮಾಡುತ್ತಿದೆ.

ಬಿಜೆಪಿ ಶಾಸಕರಿಗೆ ಇಷ್ಟು ಲಜ್ಜೆಗೆಟ್ಟ ಆತ್ಮವಿಶ್ವಾಸ ಎಲ್ಲಿಂದ ಬಂತು?
ಬಹುಶಃ ಬೆನ್ನುಮೂಳೆಯಿಲ್ಲದ, ನಾಯಕರಿಲ್ಲದ, ದೃಷ್ಟಿಯಿಲ್ಲದ ಮತ್ತು ನಿರ್ದಾಕ್ಷಿಣ್ಯ ವಿರೋಧವಿಲ್ಲದ್ದಕ್ಕೆ?” ಎಂದು ಸಾಮಾಜಿಕ ಕಾರ್ಯಕರ್ತ ಆಕಾಶ್ ಬ್ಯಾನರ್ಜಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ: ನೆಮ್ಮದಿಯ ಬದುಕಿಗಾಗಿ ಇನ್ನೂ ಹೆಣಗಾಡುತ್ತಿರುವ ಜನರು

0
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭಗೊಂಡು ಇಂದಿಗೆ (ಮೇ 3, 2024) ಒಂದು ವರ್ಷ ಪೂರ್ಣಗೊಂಡಿದೆ. ಭಾರತದ ಈಶಾನ್ಯದಲ್ಲಿರುವ ಪ್ರಶಾಂತವಾದ ಬೆಟ್ಟ ಗುಡ್ಡಗಳಾವೃತ ಪುಟ್ಟ ರಾಜ್ಯದ ಮೇ 3, 2023ರಿಂದ ಹಿಂಸಾಚಾರದ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ....