Homeಮುಖಪುಟಉನ್ನಾಂವ್ ಅತ್ಯಾಚಾರದ ಸಂತ್ರಸ್ಥೆಯನ್ನೇ ಕೊಲ್ಲುವ ಯತ್ನ: ಪ್ರಕರಣ ಸಿಬಿಐಗೆ

ಉನ್ನಾಂವ್ ಅತ್ಯಾಚಾರದ ಸಂತ್ರಸ್ಥೆಯನ್ನೇ ಕೊಲ್ಲುವ ಯತ್ನ: ಪ್ರಕರಣ ಸಿಬಿಐಗೆ

ಈ ಅಪಘಾತಕ್ಕೆ ಆರೋಪಿ ಬಿಜೆಪಿ ಶಾಸಕನ ಕೈವಾಡವಿದೆ ಎಂದು ಕೇಳಿಬರುತ್ತಿದ್ದು, ಈ ಹಿಂದೆ ಸಂತ್ರಸ್ಥೆ ತಂದೇ ಜೈಲಲ್ಲೇ ಮೃತಪಟ್ಟಿದ್ದೂ ಕೂಡ ಈಗ ಮುನ್ನಲೆಗೆ ಬಂದಿದೆ.

- Advertisement -
- Advertisement -

ಉನ್ನಾಂವ್ ಅತ್ಯಾಚಾರಕ್ಕೆ ಒಳಗಾಗಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂತ್ರಸ್ತೆಯನ್ನೇ ಕೊಲ್ಲುವ ಭಯಾನಕ ಯತ್ನ ನಿನ್ನೆ ನಡೆದಿದೆ. ಈ ಅತ್ಯಾಚಾರದ ಪ್ರಮುಖ ಆರೋಪಿ ಉತ್ತರಪ್ರದೇಶದ ಬಿಜೆಪಿ ಶಾಸಕನಾಗಿದ್ದಾನೆ. ಈ ಹಿಂದೆಯೇ ಸಂತ್ರಸ್ತೆಯ ತಂದೆ ಜೈಲಿನಲ್ಲೇ ಅನುಮಾನಾಸ್ಪಾದವಾಗಿ ನಿಧನ ಹೊಂದಿದರು ಎಂಬ ವಿಷಯಗಳನ್ನು ಗಣನೆಗೆ ತೆಗೆದುಕೊಂಡಾಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ಆರೋಪಿಯನ್ನು ರಕ್ಷಿಸುವ ಯತ್ನವನ್ನು ಮೊದಲಿಂದಲೂ ಮಾಡುತ್ತಲೇ ಬಂದಿದೆ ಎಂಬ ಅನುಮಾನಗಳಿಗೆ ಪುಷ್ಠಿ ಸಿಗುವಂತಿದೆ….

ಅಪಘಾತವೋ, ಕೊಲೆಯ ಸಂಚೋ?
ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಪ್ರಮುಖ ಆರೋಪಿಯಾಗಿರುವ ಉನ್ನಾಂವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಸಂತ್ರಸ್ತ ಯುವತಿ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಲ್ಲಿದ್ದರೆ, ಆಕೆಯ ಇಬ್ಬರು ಸಂಬಂಧಿಕರು ಅಪಘಾತದಲ್ಲಿ ನಿಧನರಾಗಿದ್ದಾರೆ.

ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಿಂದ ಇಲ್ಲಿವರೆಗೂ ನಡೆದ ಘಟನೆಗಳು ಮತ್ತು ಉತ್ತರಪ್ರದೇಶ ಸರ್ಕಾರ ಆರೋಪಿ ಶಾಸಕ ಕುಲದೀಪ್ ಪರವಾಗಿ ನಿಲ್ಲುತ್ತಲೇ ಬಂದಿವೆ. ಹಾಗಾಗಿ ಸಂತ್ರಸ್ತೆಯ ತಂದೆ ಜೈಲಿನಲ್ಲಿ ಅನುಮಾನಾಸ್ಪಾದವಾಗಿ ಮರಣ ಹೊದಿದ್ದನ್ನು ಗಂಭೀರವಾಗಿ ಪರಿಗಣಿಸಿದರೆ, ರವಿವಾರ ನಡೆದದ್ದು ಅಪಘಾತವಲ್ಲ, ಕೊಲೆ ಯತ್ನ ಎಂಬುದು ಸ್ಪಷ್ಟವಾಗುತ್ತದೆ.

ರಾಯ್‍ಬರೇಲಿ ಜೈಲಿನಲ್ಲಿರುವ ತನ್ನ ಚಿಕ್ಕಪ್ಪನನ್ನು ನೋಡಲು ಸನತ್ರಸ್ತ ಯುವತಿ ಪ್ರಯಾಣಿಸುವಾಗ ಈ ‘ಅಪಘಾತ’ ನಡೆದಿದ್ದು ಸಂಶಯಗಳನ್ನು ಹುಟ್ಟು ಹಾಕಿದೆ. ಅಪಘಾತದಲ್ಲಿ ಸಂತ್ರಸ್ತೆಯ ಚಿಕ್ಕಮ್ಮ, ಆಕೆಯ ಸಹೋದರಿ ಮೃತರಾಗಿದ್ದು, ಸಂತ್ರಸ್ತೆಯ ವಕೀಲರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅತ್ಯಾಚಾರ ಪ್ರಕರಣದ ಬಳಿಕ ನಡೆದ ಘಟನೆಗಳನ್ನು ನೋಡುತ್ತ ಹೋದರೆ ಇದು ಅಪಘಾತವಲ್ಲ, ಸಂತ್ರಸ್ತೆಯನ್ನು ಕೊಲ್ಲುವ ಯತ್ನ ಎಂಬುದು ಮನದಟ್ಟಾಗುತ್ತದೆ. ಹೀಗಾಗಿಯೇ ಉತ್ತರಪ್ರದೇಶದ ವಿರೋಧ ಪಕ್ಷಗಳು ಇಲ್ಲಿ ಫೆಡೆರಲ್ ತನಿಖೆ ಆಗಬೇಕೆಂದು ಆಗ್ರಹಿಸಿದ್ದು ಸಮಂಜಸವಾಗಿಯೇ ಇದೆ.

ಆರೋಪಿ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಂಗಾರ್ ತುಂಬ ಪ್ರಭಾವಿಯಾಗಿದ್ದು, ಆರಂಭದಲ್ಲಿ ಈತನ ಪರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಮಾತಾಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದನ್ನು ಗಮನಿಸಬಹುದು. ಏಪ್ರಿಲ್ 8, 2018ರಂದು ಆರೋಪಿ ಶಾಸಕ ಕುಲದೀಪ್ ಮನೆ ಮುಂದೆ ಸಂತ್ರಸ್ತ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ. ಆ ಕಾರಣಕ್ಕೆ ಇದು ದೇಶದ ಗಮನ ಸೆಳೆಯುವಂತಾಗಿದ್ದು.

ಶಾಸಕನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು ಸಂತ್ರಸ್ತೆಯ ತಂದೆಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿಯೇ ಶಾಸಕನ ಸಹೋದರರು ಆಕೆಯ ತಂದೆಯ ಮೇಲೆ ಮಾರಣಾಂತಿ ಹಲ್ಲೆ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ನಂತರ ಆಕೆಯ ತಂದೆ ಕಸ್ಟಡಿಯಲ್ಲೆ ನಿಧನ ಹೊಂದಿದರು.

ಇನ್ನು ಕಾರಿಗೆ ಗುದ್ದಿರುವ ಲಾರಿಯ ನಂಬರ್ ಪ್ಲೇಟ್ ಅನ್ನೇ ಕಪ್ಪು ಬಣ್ಣ ಬಳಿದು ಅಳಿಸಲಾಗಿದೆ ಎನ್ನಲಾಗುತ್ತಿದೆ. ಈ ಘಟನೆಯ ನಂತರ ವ್ಯಾಪಕ ಖಂಡನೆ ವ್ಯಕ್ತವಾದ ಪರಿಣಾಮ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಹೀಗೆ ಎಲ್ಲ ಘಟನಾವಳಿಗಳನ್ನು ಗಮನಿಸಿದರೆ ಕೇಸನ್ನು ಮುಚ್ಚು ಹಾಕಲು ಆರೋಪಿ ಶಾಸಕ ಕುಲದೀಪ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಯತ್ನಿಸುತ್ತಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಇದಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕರ ಬೆಂಬಲವೂ ಇದ್ದಂತಿದೆ. ಅಮಿತ್ ಶಾ ಕೇಸಿಗೆ ಸಂಬಂಧಿಸಿದಂತೆ ಸಂಭವಿಸಿದ ‘ಅಸಹಜ’ ಸಾವುಗಳನ್ನು ಗಮನಿಸಿದರೆ, ತಮ್ಮ ಪಾಪಕೃತ್ಯಗಳನ್ನು ಮುಚ್ಚಿ ಹಾಕಲು ಈ ದುರುಳರೆಲ್ಲ ಎಂತಹ ಹೇಯ ಕೃತ್ಯಕ್ಕೂ ಕೈ ಹಾಕಬಲ್ಲರು ಎಂಬ ಅನುಮಾನ ಮೂಡದೇ ಇರುತ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...