Homeಮುಖಪುಟಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

ಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

- Advertisement -
- Advertisement -

ಸಂತ ತುಕಾರಾಂ ಎಂದರೆ ನಮಗೆ ಡಾ ರಾಜ್ ಅಭಿನಯದ “ಜಯತು ಜಯ ವಿಠಲ” ಎಂದು ಹಾಡಿಕೊಂಡು, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ಸದಾ ಸಾಧು ಸ್ವಭಾವದ ಆಕಳಂತೆ ಇದ್ದು, ಪಡಬಾರದ ಪಾಡನ್ನೆಲ್ಲಾ ಪಟ್ಟ ಭಕ್ತನ ಕಾಪಾಡದ ದೇವರು ಕೊನೆಗೆ ನನ್ನ ಹತ್ತಿರ ನೆಮ್ಮದಿಯಾಗಿರು ಎಂದು ಪುಷ್ಪಕವಿಮಾನದಲ್ಲಿ ಬಂದು ಕರೆದುಕೊಂಡು ಹೋಗುವ ಚಿತ್ರವು ಮನಸ್ಸಿನಲ್ಲಿ ಬಂದರೆ ಅದು ನಮ್ಮ ತಪ್ಪಲ್ಲ. ಪೌರಾಣಿಕದ ಬೂದಿಯಲ್ಲಿ ಇತಿಹಾಸದ ಕೆಂಡವನ್ನು ಮರೆಮಾಡುತ್ತಾ ಒಂದು ನಿರ್ದಿಷ್ಟ ಮನಸ್ಥಿತಿಯಿಂದ ಬರಹಗಾರರು ಸಾಮಾಜಿಕ ಸಾಮರಸ್ಯದಲ್ಲಿ, ಧಾರ್ಮಿಕ ಸಮಾನತೆಯಲ್ಲಿ, ಆಧ್ಯಾತ್ಮಿಕ ಔನ್ನತ್ಯದಲ್ಲಿ ಕ್ರಾಂತಿಕಾರಿ ಸಿಂಹಗಳಾಗಿದ್ದವರನ್ನೂ ಮುಂದೆ ಕುರಿಗಳಂತೆ ತೋರಿಬಿಡುತ್ತಾರೆ ಎಂದು ಸಾಳುಂಖೆ ಎಚ್ಚರಿಸುತ್ತಾರೆ.

ಕಳೆದ ಮೂರು ಶತಮಾನಗಳಿಂದ ತುಕಾರಾಮ ಮಹಾರಾಷ್ಟ್ರದ ಜನರ ಹೃದಯದಲ್ಲಿ ಸಂವೇದನೆಯಾದ. ಅವನ ಅಭಂಗಗಳು ಮರಾಠ ಸಂಸ್ಕೃತಿಯ ಭಾಗವಾಗುವಷ್ಟು ನಾಡು ಅವನನ್ನು ಪ್ರೀತಿಸಿತು. ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸಿನಲ್ಲಿರುವ ಹಳೆಯ ಸಂತ ತುಕಾರಾಮನ ಪ್ರತಿಮೆಯನ್ನು ದೂರ ಮಾಡಬೇಕಾಗುತ್ತದೆ ಎನ್ನುವರು ಸಾಳುಂಖೆ. ಏಕೆಂದರೆ ಅದು ಅವನ ಮೂಲ ವ್ಯಕ್ತಿತ್ವಕ್ಕೆ ಹೋಲುವುದಿಲ್ಲ. ದಿವಾಳಿಯಾಗಿ, ಅಸಹಾಯಕನಾಗಿ ದೇವರ ಭಕ್ತನಾಗಿ, ಸರಿಯಾಗಿ ಸಂಸಾರ ತೂಗಿಸಲಾಗದೇ, ಸದಾ ತಾಳ ಕುಟ್ಟುತ್ತಾ ಕುಳಿತುಕೊಂಡು, ವ್ಯವಹಾರ ಶೂನ್ಯ, ಮುಗ್ಧ ಭೋಳೆ ಸಂತನಂತೆ (ಅದೇ ಸಂತ ತುಕಾರಾಂ ಚಿತ್ರದಲ್ಲಿ ತೋರಿಸುವಂತೆ) ಇರಿಸಲಾಗಿದೆ. ಆದರೆ ಧರ್ಮದ ಹೆಸರಿನಲ್ಲಿ ಅನೀತಿಯ ವ್ಯಾಪಾರ ನಡೆಸುತ್ತಿದ್ದ ಧಾರ್ಮಿಕಸತ್ತೆಯ ವಿರುದ್ಧವಾಗಿ ಇವನು ಮಹಾನ್ ಯೋಧನಂತೆ ಹೋರಾಡಿದ್ದ. ಅತ್ಯಂತ ಪ್ರಬಲ ಮತ್ತು ಮಜಬೂತಾಗಿರುವ ಸಮಾಜ ವ್ಯವಸ್ಥೆಯ ಮೂಲಕ್ಕೆ ಸಿಡಿಮದ್ದು ಇರಿಸುವ ಕಾರ್ಯವನ್ನು ಅವನು ಬದುಕಿನ ಉದ್ದಕ್ಕೂ ಮಾಡುತ್ತಲೇ ಬಂದಿದ್ದ.

ತುಕಾರಾಮನ ಜೀವನದ ಕ್ರಾಂತಿಕಾರಕ ಅನೇಕ ಘಟನೆಗಳನ್ನು ನಿರ್ಲಕ್ಷಿಸಿ, ಅವನನ್ನು ಸಂತನಾಗಿ ತೋರುವ ಧಾವಂತದಲ್ಲಿ ಮರೆಮಾಚಲಾಗಿರುವ ಸಂಗತಿಗಳ ಮೇಲೆ ಸಾಳುಂಖೆ ಬೆಳಕು ಚೆಲ್ಲುತ್ತಾರೆ.

ತನ್ನ ಅಭಂಗಗಳಲ್ಲಿ ತುಕಾರಾಮ ಬುವಾ ಡಾಂಭಿಕ ವ್ಯವಸ್ಥೆಯ ಮೇಲೆ ನೇರಾನೇರ ಪ್ರಹಾರ ಮಾಡುತ್ತಾರೆ. ಧಾರ್ಮಿಕತೆಯು ಮಾಡುವ ಅನ್ಯಾಯಗಳನ್ನು ಖಂಡಿಸಿ ಬರೆಯುತ್ತಿದ್ದ ಅವನ ಅಭಂಗಗಳನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿಬಿಡುವ ಶಿಕ್ಷೆ ಕೊಡುವುದು ತಿಳಿದಿರುವುದೇ. ಆದರೆ ಹೊಡೆದು, ಬಡಿದು, ನಿಂದಿಸಿ ನಾನಾ ರೀತಿಯಲ್ಲಿ ಹಿಂಸೆಗಳನ್ನು ಕೊಟ್ಟರೂ, “ತುಂಡು ಮಾಡಿ ಕೊಚ್ಚಿ ಹಾಕಿದರೂ ಹೆದರಲಾರೆ” ಎನ್ನುವ ತುಕಾರಾಮ ಅಭಂಗಗಳನ್ನು ಬರೆಯುತ್ತಾನೆ.

ಧಾರ್ಮಿಕನಾಗಿಯೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ತುಕಾರಾಮ ಸತ್ತದ್ದೂ ನಿಗೂಢವೇ. ಇಂದ್ರಾಣಿ ನದಿಯ ತೀರದಲ್ಲಿ ಕೀರ್ತನೆ ಹಾಡುತ್ತಿದ್ದಾಗ ಅದೃಶ್ಯನಾದ ಎಂಬ ಐತಿಹ್ಯವನ್ನು ಬೇಧಿಸಿದರೆ ರಾಮೇಶ್ವರ ಭಟ್ಟ ತುಕಾರಾಮನ ಮೇಲೆ ಖಟ್ಲೆ ಹೂಡಿದವನು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡವನು, ಬಹಿಷ್ಕಾರ ಹಾಕಿಸಿದವನು, ಗಡಿಪಾರಿನ ಆಜ್ಞೆ ಮಾಡಿಸಿದವನು, ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಮುಳುಗಿಸಿದವನು, ಅಂತವನು ಸಾರುವುದೇನೆಂದರೆ, ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು. ಅಂದರೆ ಹೆಣವೂ ಕೂಡ ಸಿಗದಂತೆ ಮುಗಿಸಿದರೇ?

ತುಕಾರಾಮನ ವೈಕುಂಠಯಾನ ಹೇಗೆ ಹತ್ಯೆಯಾಗಿದ್ದಿರಬಹುದೆಂದು ಸಾಳುಂಖೆ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತಾರೆ.

ಒಟ್ಟಾರೆ ತುಕಾರಾಮನೆಂಬ ಕ್ರಾಂತಿಕಾರಿಯನ್ನು ಅವನ ಸಾಮಾಜಿಕ ಹೋರಾಟದ ಮತ್ತು ಆಧ್ಯಾತ್ಮಿಕತೆಯ ಮೌಲ್ಯದ ಸಮೇತ ಪರಿಚಯಿಸಿ ಕೊಡುವ ಸಾಳುಂಖೆಯವರ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ. ಪುಟಪುಟದಲ್ಲೂ ನಮ್ಮ ಭಾರತದ ಧಾರ್ಮಿಕತೆಯಲ್ಲಿ ತನ್ನ ಕ್ರೌರ್ಯ ಮತ್ತು ಅಸಹನೆಯನ್ನು ಮೆರೆದ ಧಾರ್ಮಿಕಸತ್ತೆಯ ದೌರ್ಜನ್ಯದ ಅನಾವರಣವಾಗುತ್ತದೆ. ಜೊತೆಗೆ ತುಕಾರಾಮನ ಹೋರಾಟದ ಘನತೆ ಮತ್ತು ತಾತ್ವಿಕತೆಯು ಪುಟಕ್ಕಿಟ್ಟಂತೆ ಹೊಳೆಯುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇದನ್ನು ಪ್ರಕಟಿಸಿ ಸಂತ ಯೋಧನ ಅರಿಯುವಲ್ಲಿ ಉಪಕರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಂತ ತುಕಾರಾಮನ ನಿಜ ಚರಿತ್ರೆಯನ್ನು ತಿಳಿಸಿರುವ ಡಾ.ಸಾಳುಂಕೆ ಮತ್ತು ಚಂದ್ರಕಾಂತ ಪೋಕಳೆಯವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...