Homeಸಾಮಾಜಿಕಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

ಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

- Advertisement -
- Advertisement -

ದು.ಸರಸ್ವತಿ |

ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ ಅನ್ನುವ ಕಾನ್ಸೆಪ್ಟನ್ನು ಮೊದಲು ಕೇಳಿದ್ದು ಉಮಾ ಚಕ್ರವರ್ತಿಯವರ ಜಂಡರಿಂಗ್ ಕಾಸ್ಟ್ ಎನ್ನುವ ಪುಸ್ತಕದಲ್ಲಿ. ಮಂಡಲ್ ಆಯೋಗ ವರದಿ ಜಾರಿಯಾದ ನಂತರ ದೇಶ ಹೊತ್ತಿ ಉರಿವಾಗ ಕೆಲವು ಹೆಣ್ಣು ಮಕ್ಕಳು, ಐಎಎಸ್, ಐಪಿಎಸ್ ಆಫೀಸರ್ ಗಂಡುಗಳು ಸಿಗುವುದಿಲ್ಲ ಎಂದು ಪ್ಲೆಕಾರ್ಡ್ ಹಿಡಿದು ನಿಂತಿದ್ದರು. ಅಂದರೆ ರಿಸರ್ವೇಶನ್ ಇದ್ರೆ ನಾವು ಮದುವೆ ಆಗಲು ಮೇಲ್ಜಾತಿ ಆಫೀಸರ್‌ಗಳು ಸಿಗುವುದಿಲ್ಲ ಎಂದು ಪರೋಕ್ಷವಾಗಿ ಮೀಸಲಾತಿಯ ವಿರುದ್ಧ ದನಿ ಎತ್ತಿದ್ದರು. ಮಹಿಳೆಯರೆಲ್ಲ ದಲಿತರು, ಶೋಷಿತರು ಎಂದು ಹೋರಾಟದಲ್ಲಿದ್ದ ಮಹಿಳಾ ಚಳುವಳಿಗೆ ಇದು ದೊಡ್ಡ ಸವಾಲಾಗಿ ಎದುರಾಯಿತು. ಈ ಸಂದರ್ಭದಲ್ಲಿ ಉಮಾ ಚಕ್ರವರ್ತಿ ‘ಜೆಂಡರಿಂಗ್ ಕಾಸ್ಟ್’ ಪುಸ್ತಕ ಬರೆದರು. ಮಹಾರಾಷ್ಟ್ರದ ದಲಿತ ಸ್ತ್ರೀವಾದಿಗಳು ಅಂಬೇಡ್ಕರ್ ಮತ್ತು ಮಹಿಳೆ ಬಗ್ಗೆ ತುಂಬಾ ಆಳವಾದ ಅಧ್ಯಯನ ಮಾಡಿದರು. ಆಗ, ಅಂಬೇಡ್ಕರ್ ಅವರ ಜಾತಿ ವಿನಾಶ ಚಳುವಳಿಯ ಪರಂಪರೆ ಅಂದರೆ, ಲಿಂಗ ತಾರತಮ್ಯದ ವಿರುದ್ಧವೂ ಹೋರಾಡುವ ಪರಂಪರೆ; ಅದನ್ನ ಯಾಕೆ ಮಹಿಳಾ ಚಳುವಳಿಗಳು ಗುರುತಿಸಲೇ ಇಲ್ಲ ಎಂದು ಮೊದಲನೇ ಬಾರಿ ಎಲ್ಲರೂ ಆಲೋಚಿಸುವಂತಾಯಿತು. ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ, ಅಂಬೇಡ್ಕರ್‌ರ ವಿಚಾರಗಳನ್ನು ಕುರಿತ ಪುಸ್ತಕಗಳು ಬಂದವು. ಅಂಬೇಡ್ಕರ್ ಮತ್ತು ಮಹಿಳೆ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣಿಕೆಯ ಪಿತೃಪ್ರಧಾನತೆ ಎಂಬ ಪರಿಕಲ್ಪನೆ ನಮಗೆಲ್ಲ ಸರಿಯಾಗಿ ಅರ್ಥವಾದದ್ದು.

ಈ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಪಿತೃಪ್ರಧಾನವಾದುದ್ದು ಎಂದು ಎಲ್ಲರಿಗೂ ಗೊತ್ತು. ರಾಜ್ಯವನ್ನು, ಆಸ್ತಿಯನ್ನ ಹಾಗೂ ಎಲ್ಲಾ ಅಧಿಕಾರವನ್ನು ಚಲಾಯಿಸುವಂತಹ, ಗಂಡು ನಾನೇ ಸುಪ್ರೀಂ ಎನ್ನುವ ವ್ಯವಸ್ಥೆ ಇದು. ಬ್ಯಾಹ್ಮಣ್ಯದ ಶ್ರೇಣೀಕರಣದಲ್ಲಿ ಬ್ರಾಹ್ಮಣರು ಜಾತಿ ವ್ಯವಸ್ಥೆಯ ಮೇಲ್ದರ್ಜೆಯ ತುತ್ತ ತುದಿಯಲ್ಲಿದ್ದಾರೆ. ಗಂಡು ಎನ್ನುವ ಶ್ರೇಷ್ಠತೆ, ಮೇಲ್ಜಾತಿ ಎನ್ನುವ ಶ್ರೇಷ್ಠತೆ ಎರಡೂ ಕೂಡಿ ಬ್ರಾಹ್ಮಣ ಶ್ರೇಷ್ಠತೆ ಉತ್ಕೃಷ್ಟ ಮಾದರಿಯಾಗಿ ನಿಲ್ಲುತ್ತದೆ. ಹಾಗಾಗಿ ಎಲ್ಲಾ ದೇವಾಲಯಗಳಲ್ಲಿ ಬ್ರಾಹ್ಮಣ ಗಂಡಸರು ಪೂಜೆ ಮಾಡುತ್ತಾರೆ, ಇತರರು ಕೈ ಮುಗಿದು ನಿಲ್ಲುತ್ತಾರೆ, ದಲಿತರು ಹೊರಗಿರಿಸಲ್ಪಡುತ್ತಾರೆ. ಇದು ಎಲ್ಲ ಸಮುದಾಯಗಳ ಒಳಕ್ಕೂ ಇಳಿದುಬಿಟ್ಟಿದೆ. ಮಾದಿಗರ ದಾಸಯ್ಯರು ಪೂಜೆ ಮಾಡ್ತಾರೆ, ಸಮಗಾರರು ಚರ್ಮದ ಕೆಲಸವನ್ನು ಮಾಡ್ತಾರೆ. ಇನ್ನು ಹೈರಾರ್ಕಿಯಲ್ಲಿ ಎಲ್ಲಾ ಸಮುದಾಯದಲ್ಲೂ ಪುರುಷರು ಮೇಲು ಎನ್ನುವುದೂ ಬೆಳೆದು ಬಂದಿದೆ, ಮೇಲ್ ಹೈರಾರ್ಕಿ, ಬ್ರಾಹ್ಮಿಣಿಕಲ್ ಹೈರಾರ್ಕಿಯ ಆಳದಲ್ಲಿ ಕಾಸ್ಟ್ ಸುಪ್ರಿಮಸಿ ಪ್ರಧಾನವಾಗಿದೆ, ಈ ಮೇಲರಿಮೆಯಲ್ಲಿ ಖಾಸಗಿ ಆಸ್ತಿಯೂ ಸೇರಿಕೊಂಡಿದೆ. ಇದು ಬೌದ್ಧಿಕ ಪವರ್‌ನೂ ಹೌದು ಮತ್ತೂ ಮೆಟಿರಿಯಲ್ ಪವರ್ ಕೂಡ ಹೌದು. ಅಕಾಡೆಮಿಕ್ ಬಳಕೆಯಲ್ಲಿ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಬ್ರಾಹ್ಮಣರನ್ನು ವಿರೋಧಿಸುವಂತದ್ದಲ್ಲ, ತಾನೇ ಸುಪ್ರೀಂ ನಾವಿರುವುದೇ ಆಳುವುದಕ್ಕೆ ಎನ್ನುವಂತಹ ವಾದವನ್ನು ಪ್ರಶ್ನಿಸುವಂತದ್ದು. ಈಗ ಮೇಲ್ಜಾತಿ ಎತ್ತಿರುವ ತಕರಾರು ಅಸಮಂಜಸವಾದದ್ದು. ವಿದ್ವತ್ ವಲಯದಲ್ಲಿ ಚರ್ಚೆಯಲ್ಲಿರುವ ಜಾಗತೀಕರಣ, ಆಳುವ ವರ್ಗ, ಫ್ಯೂಡಲಿಸಂ ಎನ್ನುವಂತಹ ಪರಿಕಲ್ಪನೆಗಳನ್ನು ಚರ್ಚೆ ಮಾಡಬೇಡಿ, ಇದರ ಬಗ್ಗೆ ಮಾತನಾಡಬೇಡಿ ಎಂದರೆ ಅದನ್ನೆಲ್ಲ ನಿಲ್ಲಸಲಾಗುತ್ತದೆಯೇ? ಖಂಡಿತಾ ಇಲ್ಲ. ಹಾಗೆಯೆ ಇದು ಕೂಡ. ಬ್ರಾಹ್ಮಣ್ಯದ ವಿರುದ್ಧದ ದನಿಯೇ ಹೊರತು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...