Homeಮುಖಪುಟ“ಮೋದಿಯ `ಮುನ್ನೋಟ’ಗಳು ಎಂತವೆಂಬುದು ಅರ್ಥವಾದ ಮೇಲೆ ನಾವು ಕಿಚಡಿಯನ್ನೇ ಹುಡುಕಬೇಕಲ್ಲವೇ?”  - ಮಹೇಶ್ವರಿ ಪೇರಿ

“ಮೋದಿಯ `ಮುನ್ನೋಟ’ಗಳು ಎಂತವೆಂಬುದು ಅರ್ಥವಾದ ಮೇಲೆ ನಾವು ಕಿಚಡಿಯನ್ನೇ ಹುಡುಕಬೇಕಲ್ಲವೇ?”  – ಮಹೇಶ್ವರಿ ಪೇರಿ

- Advertisement -
- Advertisement -

ಒಂದು ಮುನ್ನೋಟವುಳ್ಳ ನಾಯಕನಿಗೆ ಮತ ಹಾಕಬೇಕೇ ಅಥವಾ ಒಂದು ಖಿಚಡಿ ಸರಕಾರ ತರಬೇಕೇ ಎಂದು ಒಬ್ಬ ಹಿತೈಶಿ ನನಗೆ ಕೇಳಿದರು. ಇದು ಖಂಡಿತವಾಗಿಯೂಸರಿಯಾದ ಪ್ರಶ್ನೆ, ಇದಕ್ಕೆ ನಾವೆಲ್ಲರೂ ಉತ್ತರಿಸಲೇಬೇಕು.

ಯಾವುದೇ ಭಾರತೀಯ ರಾಜಕಾರಿಣಿಗೆ ಮುನ್ನೋಟ, ವಿಷನ್ ಎನ್ನುವುದೊಂದು ತುಂಬಾ ದೊಡ್ಡ ಮಾತಾಗುತ್ತದೆ. ಯಾವುದೇ ಒಬ್ಬ ವಿಷನರಿ ನಾಯಕನಾಗಿದ್ದರೆ, ದೇಶದಯುವಜನರ ಮೇಲೆ ತನ್ನ ಆಡಳಿತ, ರಾಜಕೀಯವನ್ನು ಕೇಂದ್ರೀಕರಿಸಬೇಕಾಗುತ್ತದೆ. ಆದರೆ ಅದರ ಲಾಭ ಕಾಣಿಸಿಕೊಳ್ಳುವುದು 15-20 ವರ್ಷಗಳ ನಂತರ, ಹಾಗಾಗಿ ಯಾವನಾಯಕನೂ ಇದನ್ನು ಮಾಡುತ್ತಿಲ್ಲ. ನಾಯಕರು ೫ ವರ್ಷಗಳಿಗಾಗಿ ಚುನಾಯಿತರಾಗಿರುತ್ತಾರೆ ಹಾಗೂ ಅವರೆಲ್ಲರೂ ಮುಂದಿನ ಮುನಿಸಿಪಲ್, ಸ್ಥಳೀಯ ಮತ್ತು ರಾಜ್ಯಚುನಾವಣೆಗಳ ಮೇಲೆಯೇ ಗಮನವನ್ನು ಕೇಂದ್ರೀಕರಿಸಿರುತ್ತಾರೆ. ಪ್ರಧಾನಿ ಮೋದಿಯವರು ಆಡಳಿತಕ್ಕಿಂತ ಪ್ರಚಾರವನ್ನೇ ಹೆಚ್ಚು ಮಾಡಿದ್ದಾರೆ, ದೇಶದ ಅಭಿವೃದ್ಧಿಗಿಂತಚುನಾವಣೆಗಳ ತಂತ್ರಗಾರಿಕೆ ಹೆಚ್ಚು ಮಾಡಿದ್ದಾರೆ, ಆಡಳಿತ ಮಾಡುವುದಕ್ಕಿಂತ ಆಳುವುದನ್ನು ಹೆಚ್ಚು ಮಾಡಿದ್ದಾರೆ, ತಾವು ಹೇಳಿದ್ದನ್ನು ಮಾಡಿ ತೋರಿಸುವುದಕ್ಕಿಂತಆಶ್ವಾಸನೆಗಳನ್ನೇ ಹೆಚ್ಚು ನೀಡಿದ್ದಾರೆ, ಇತರರ ಮಾತನ್ನು ಕೇಳಿಸಿಕೊಳ್ಳುವುದಕ್ಕಿಂತ ತಾವೇ ಹೆಚ್ಚು ಮಾತನಾಡಿದ್ದಾರೆ, ಬಗೆಹರಿಸುವುದಕ್ಕಿಂತ ಉಪದೇಶ ನೀಡುವುದನ್ನೇಹೆಚ್ಚು ಮಾಡಿದ್ದಾರೆ. ಪ್ರತಿರಾತ್ರಿ ಅಂದು ಗಳಿಸಿದ ಚಿಲ್ಲರೆ ಏಣಿಸುವ ಸಣ್ಣ ವ್ಯಾಪಾರಿಯಂತಿದ್ದಾರೆಯೇ ಹೊರತು ವಾರೆನ್ ಬಫೆಟ್ ತರಹ ಆಸ್ತಿಯನ್ನು ಸೃಷ್ಟಿಸುತ್ತಿಲ್ಲ. ಲಾಭದಲಾಲಸೆಯಲ್ಲಿ, ಹಣ ದುಪ್ಪಟ್ಟಾಗುವ ನಿರೀಕ್ಷೆಯನ್ನಿಟ್ಟುಕೊಂಡು ಸೌದಿ ಅರೇಬೀಯಾದಂತಹ ದೇಶಗಳಲ್ಲಿ ಹೂಡಿಕೆ ಮಾಡುವವರಂತೆ ಯೋಚಿಸುತ್ತಾರೆಯೇ ಹೊರತು ಭಾರತದಅಭಿವೃದ್ಧಿಗಾಗಿ ಇರಬೇಕಾದ ನಿಧಿಯ ಬಗ್ಗೆ ಯೋಚಿಸುವುದಿಲ್ಲ.

ನಮ್ಮ ಇಡಿ ದೇಶ ಇವತ್ತು ಗುಜರಾತ್ ಮೂಲದ ಒಂದು ‘ಅವಿಭಕ್ತ ಹಿಂದೂ ಕುಟುಂಬ’ದಿಂದ ಆಳಲ್ಪಡುತ್ತಿದೆ. ತನಗೆ ಸಂಪೂರ್ಣ ನಿಷ್ಠಾವಂತ ಆಗಿರುವವರನ್ನು ಮಾತ್ರಸಬಲೀಕರಿಸುವ ಒಂದು ಸಶಕ್ತ ತಂಡ ಕಟ್ಟುತ್ತಿದ್ದಾರೆ ಈ ‘ಮುನ್ನೋಟ’ದ ನಾಯಕತ್ವ. ಅಹ್ಮದಾಬಾದ್‌ದಿಂದ ಮೋದಿಗೆ ಅಂಟಿಕೊಂಡೇ ಬಂದಿರುವ ಒಂದು ಕುಟುಂಬಮಂಡಳಿಯೇ 130 ಕೋಟಿ ಜನರ ದೇಶವನ್ನಾಳುತ್ತಿದೆ. ಅದರಲ್ಲಿ ಅಮಿತ್ ಶಾ, ಹಸ್‌ಮುಖ್ ಆಧಿಯಾ, ಮಿಶ್ರಾಗಳು, ಜೋಶಿಗಳು ಮುಂತಾದವರಿದ್ದಾರೆ. ಸಿಬಿಐನಲ್ಲೂಇವರುಗಳು ರಾಕೇಶ್ ಆಸ್ತಾನನನ್ನು ಹೇರಲು ಪ್ರಯತ್ನಿಸಿ ವಿಫಲರಾದರು. ರಾಜನಾಥ್ ಸಿಂಗ್ ಕೈಯಳತೆಯಲ್ಲಿರುವ ಗೃಹ ಸಚಿವಾಲಯದಲ್ಲೂ ಗುಜರಾತಿನಲ್ಲಿ ಮೋದಿಅಡಿಯಲ್ಲಿ ಕೆಲಸ ಮಾಡಿರುವವರೇ ತುಂಬಿಕೊಂಡಿದ್ದಾರೆ. ದೇಶ ಕಟ್ಟಲು ತಂತ್ರಗಳನ್ನು ಹಣೆಯಬೇಕಾಗಿರುವ ಸಂಸ್ಥೆಗಳು ಈಗ ಸರಕಾರದ ಪಿ ಆರ್ (ಸಾರ್ವಜನಿಕಸಂಬಂಧಗಳು) ಕಛೇರಿಗಳಾಗಿವೆ. ನೀತಿ ಆಯೋಗವು ಕಾರ್ಯತಂತ್ರ ಮಾಡುವುದಕ್ಕಿಂತ ತನ್ನನ್ನು ಸಮರ್ಥಿಸಿಕೊಳ್ಳುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದೆ, ಭಾರತೀಯರಿಸರ್ವ್ ಬ್ಯಾಂಕ್ ಕಳೆದ ನಾಲ್ಕು ವರ್ಷಗಳಿಂದ ವಾಪಾಸಾದ ನೋಟುಗಳನ್ನು ಎಣಿಸುವುದರಲ್ಲಿ ಹಾಗೂ ನೋಟು ರದ್ದತಿಯ ಪ್ರಮಾದವನ್ನು ಸಮರ್ಥಿಸಿಕೊಳ್ಳುವುದರಲ್ಲಿಕಾಲ ಕಳೆದಿದೆ, ರಾಜಕೀಯ ವಿರೋಧಿಗಳನ್ನು ಗುರಿ ಮಾಡುವುದಕ್ಕಷ್ಟೇ ಸಿಬಿಐ ಹೆಣಗಾಟ ಸೀಮಿತವಾಗಿದೆ ಹಾಗೂ ಎನ್‌ಎಸ್‌ಎ ಸಣ್ಣಪುಟ್ಟ ಅಪರಾಧಿಗಳನ್ನು ಬುಕ್ಮಾಡಲು ಅಹರ್ನಿಶಿ ಕೆಲಸ ಮಾಡುತ್ತಿದೆ. ನಾವಿರುವ ವಾಸ್ತವವನ್ನು ಬದಲಿಸುವುದನ್ನು ಬಿಟ್ಟು ಜನರ ಗ್ರಹಿಕೆಯನ್ನು ಕಟ್ಟುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ನಮ್ಮನಾಯಕರು.

ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವನ/ಳ ಸಾಂಗತ್ಯದಿಂದ ಗುರುತಿಸಬಹುದು. ಮೋದಿಯ ಮುಖ್ಯ ತಂತ್ರಗಾರರಾಗಿರುವವರು ಅಮಿತ್ ಶಾ, ಮುಖ್ಯ ಪ್ರಚಾರಕರಾಗಿರುವವರುಯೋಗಿ ಆದಿತ್ಯನಾಥ್, ಮುಖ್ಯ ಆರ್ಥಿಕ ತಜ್ಞರಾಗಿರುವವರು ಅನಿಲ್ ಬೋಕಿಲ್, ಮುಖ್ಯ ಬ್ಯಾಂಕರ್ ಆಗಿರುವವರು ಗುರುಮೂರ್ತಿ. ಸರಳ ಭಾಷೆಯಲ್ಲಿ ಹೇಳಬೇಕೆಂದರೆಅರ್ಹತೆಯನ್ನು ಹೊಂದಿರುವ ಡಾಕ್ಟರ್‌ಗಳಿಗಿಂತಲೂ ಕಾಯಿಲೆಗಳನ್ನು ಚೆನ್ನಾಗಿ ಗುಣಪಡಿಸಬಹುದು ಎಂದು ತಿಳಿದುಕೊಂಡ ಢೋಂಗಿ ವೈದ್ಯರಿಂದಲೇ ನಮ್ಮ ದೇಶಅಧಿಕೃತವಾಗಿ ಆಳಲಾಗುತ್ತಿದೆ. ಹಾರ್ಡ್‌ವರ್ಕ್‌ನಿಂದ ಹಾರ್ವರ್ಡ್‌ನ ಚರ್ಚೆಯನ್ನು ಹೊಸ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಇವರೆಲ್ಲರಿಗೂ ವಿಜ್ಞಾನ, ಜ್ಞಾನ ಮತ್ತುಬುದ್ಧಿವಂತಿಕೆ ಅಂದರೆ ಆಗುವುದಿಲ್ಲ ಹಾಗೂ ಇದು ತುಂಬಾ ಅಪಾಯಕಾರಿ.

ಯಾವ ಇಷ್ಯೂಗಳ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎನ್ನುವುದರಿಂದಲೂ ಒಬ್ಬ ವಿಷನರಿ ಬಗ್ಗೆ ಬಹಳಷ್ಟು ಗೊತ್ತಾಗುತ್ತದೆ. ಈ ವಿಷನರಿಯ ಮುಖ್ಯ ತಂತ್ರಗಾರ ಅಮಿತ್ ಶಾಅವರು ರಥಯಾತ್ರೆಗಾಗಿ ಹೋರಾಟ ಮಾಡುತ್ತಾರೆ, ಯೋಗಿ ಅವರು ರಾಮ ಮಂದಿರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ, ಎನ್‌ಎಸ್‌ಎ ಗಾಂಧಿ ಕುಟುಂಬದವರನ್ನುಸಿಕ್ಕಾಕಿಸಲು ಕೆಲಸ ಮಾಡುತ್ತಿದೆ, ಸಿಬಿಐ ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟುತ್ತಿದೆ. 2014ರ ವರ್ಷ ಉದ್ಯೋಗ, ಭ್ರಷ್ಟಾಚಾರ ಮತ್ತು ಅಭಿವೃದ್ಧಿಯ ವರ್ಷವಾಗಿತ್ತು.2019ರ ವರ್ಷ ರಾಮಮಂದಿರ, ಮುಸ್ಲಿಮರ ಮತ್ತು ಗಾಂಧಿ ಕುಟುಂಬದ ವರ್ಷವಾಗಿದೆ. ಇದು ಯಾವ ದೃಷ್ಟಿಯಿಂದಲೂ ಒಂದು ವಿಷನ್‌ನ ಅಳತೆಯಲ್ಲ.

ಹಾಗೂ ನಮ್ಮನ್ನು ಅನಾರೋಗ್ಯದಿಂದ ಪೀಡಿತ ವ್ಯಕ್ತಿಗಳು ಆಳುತ್ತಿದ್ದಾರೆ. ಈ ನಾಯಕನಿಗೆ ಬೇಕಾಗಿರುವುದು ನಿಷ್ಠೆ ಮಾತ್ರ. ಚೀನಾ ಮತ್ತು ಪಾಕಿಸ್ತಾನ್ ಜೊತೆಗೆ ಬಿಕ್ಕಟ್ಟುಉದ್ವಿಗ್ನಗೊಂಡಾಗ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ನಮ್ಮ ರಕ್ಷಾ ಮತ್ತು ವಿತ್ತ ಸಚಿವಾಲಯಗಳನ್ನು ನಡೆಸುತ್ತಿದ್ದದ್ದು ಗಂಭೀರ ಅನಾರೋಗ್ಯಕ್ಕೀಡಾದಸಚಿವರು, ಅದೂ ಅವರ ಅನುಪಸ್ಥಿತಿಯಲ್ಲಿ. ಅನಂತ್‌ಕುಮಾರ್, ಜೇಟ್ಲಿ, ಸುಷ್ಮಾ ಸ್ವರಾಜ್, ಮನೋಹರ್ ಪರ್ರಿಕರ್ ಮುಂತಾದವರು ದೈಹಿಕವಾಗಿ ಅಸಮರ್ಥರಾಗಿದ್ದರೂಎಲ್ಲಾ ಸೌಕರ್ಯಗಳನ್ನು ಅನುಭವಿಸಿದರು ಹಾಗೂ ಡೋಖ್ಲಾಮ್, ನೋಟುರದ್ದತಿ ಮತ್ತು ಜಿಎಸ್‌ಟಿಯ ಅನುಷ್ಠಾನ ಪ್ರಮಾದಗಳಿಗೆ ಕಾರಣರಾದರು. ಇದು ದೇಶದ್ರೋಹಕ್ಕಿಂತಕಡಿಮೆಯೇನಿಲ್ಲ.

ನಾವು, ತಲೆಮರೆಸಿಕೊಂಡಿರುವ ಅತ್ಯಂತ ಶ್ರೀಮಂತವಾದ ವ್ಯಕ್ತಿಗಳ ದೇಶವೂ ಹೌದು. ಪಾಕಿಸ್ತಾನದಿಂದ ದಾವೂದ್‌ನನ್ನು ಕರೆತರುವುದಂತೂ ಮರೆತೇಬಿಡಿ, ನಾವುಅಪರಾಧಿಗಳು ತಲೆಮರೆಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದೇವೆ. ವಿಜಯ್ ಮಲ್ಯ, ನೀರವ್ ಮೋದಿ, ಮೇಹುಲ್ ಚೋಕ್ಸಿ, ಸ್ಟರ್ಲಿಂಗ್ ಬಯೋಟೆಕ್‌ನ ನಿತಿನ್ಸಂದೇಸರಿಯಾ, ವಿನ್‌ಸಮ್ ಡೈಮಂಡ್‌ನ ಜತಿನ್ ಮೆಹ್ತಾ, ಇವರೆಲ್ಲರೂ ಚೌಕಿದಾರರ ಹದ್ದಿನಕಣ್ಣುಗಳನ್ನು ತಪ್ಪಿಸಿ ತಲೆಮರೆಸಿಕೊಂಡರು. ’ಹಾಗಿದ್ರೇನಾಗ್ತಿತ್ತು,ಹೀಗಿದ್ರೇನಾಗ್ತಿತ್ತು; ಎನ್ನುವ ಐತಿಹಾಸಿಕ ಪ್ರಶ್ನೆಗಳ ಮೇಲೆ ಭಾರತ ನಿರಂತರವಾಗಿ ಚರ್ಚೆ ಮಾಡುವಂತಾಗಿದೆ, ಕೈಗೆತ್ತಿಕೊಂಡ ಎಲ್ಲಾ ಕ್ರಮಗಳನ್ನು ಇವರಸಮರ್ಥಿಸಿಕೊಳ್ಳುವುದು ’ವಾಟ್‌ಅಬೌಟರಿ’ಯಿಂದ, ಅಂದರೆ ಯಾವುದೇ ಆರೋಪ ಅಥವಾ ಕಠಿಣ ಪ್ರಶ್ನೆಗೆ ಬೇರೆಯದೇ ಪ್ರಶ್ನೆ ಹುಟ್ಟಿಸಿ ಅಥವಾ ಪ್ರತ್ಯಾರೋಪ ಮಾಡಿಪ್ರತಿಕ್ರಿಯಿಸುವ ತಂತ್ರಗಾರಿಕೆ. ಹಾಗೂ ಹೊಣೆಗಾರಿಕೆ ಎನುವುದನ್ನು ಸೊನ್ನೆಗೆ ಇಳಿಸುವುದು.

ಎಲ್ಲಾ ನಾಗರಿಕರು ಸಮಾನ ಅಥವಾ ಸುರಕ್ಷಿತವಾಗಿರುವ ಸಮಯ ಮುಗಿದಿದೆ. ಪ್ರತಿಯೊಂದು ಸಣ್ಣಪುಟ್ಟ ಚುನಾವಣೆಗಳೊಂದಿಗೆ ಜನರನ್ನು ಬೇರ್ಪಡಿಸುತ್ತಿದ್ದೇವೆ.ಸಾರ್ವಜನಿಕ ಕಥನವನ್ನು ದ್ವೇಷಕಾರುವವರು ಮುನ್ನೆಡೆಸುತ್ತಿದ್ದಾರೆ. ಸ್ಮಶಾನ ವರ್ಸಸ್ ಕಬ್ರಸ್ತಾನ್, ಅಲಿ ವರ್ಸಸ್ ಬಲಿಯ ವಿಷಯದ ಮೇಲೆ ಚುನಾವಣೆ ನಡೆಯುತ್ತಿವೆ.ಹಾಗೂ ಇದು 2019ರ ಚುನಾವಣೆಗೆ ಮುನ್ಸೂಚನೆಯಷ್ಟೆ. ನಾವು ಬುದ್ಧಿವಂತಿಕೆಯನ್ನು ದೂರಕ್ಕೆ ದೂಡುತ್ತಿದ್ದೇವೆ, ಪ್ರಾಮಾಣಿಕತೆಯನ್ನು ಶಿಕ್ಷಿಸುತ್ತಿದ್ದೇವೆ ಹಾಗೂ ಪ್ರಶ್ನೆಗಳನ್ನುದ್ವೇಷಿಸುತ್ತಿದ್ದೇವೆ. ರಘುರಾಮ್ ರಾಜನ್, ಅರವಿಂದ್ ಸುಬ್ರಮಣ್ಯಮ್, ಅರವಿಂದ್ ಪನಗಾರಿಯಾ, ಉರ್ಜಿತ್ ಪಟೇಲ್, ಜಸ್ಟೀಸ್ ಚಲಮೇಶ್ವರ್ ಮತ್ತು ಅಲೋಕ್ ವರ್ಮಾಇದೊಂದು ಸಣ್ಣ ಪಟ್ಟಿಯಷ್ಟೆ. ಪ್ರತಿಯೊಂದು ಭಿನ್ನಮತದ ಧ್ವನಿಯೂ ನೆಲಕಚ್ಚುತ್ತಿದೆ. ಬೆನ್ನುಮೂಳೆಯನ್ನು ಪ್ರದರ್ಶಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಗಾಯಗೊಳಿಸಿ,ಬುಡಸಮೇತ ಕೀಳಲಾಗುತ್ತಿದೆ.

ಜನರಿಂದ ಚಪ್ಪಾಳೆ ತಟ್ಟಿಸಿಕೊಳ್ಳುವ ಈ ರಾಜಕೀಯದಿಂದ ಅಪಾಯಗಳು ಇನ್ನೂ ಇವೆ. ಸುಷ್ಮಾ, ಗಡ್ಕರಿ, ರಾಜನಾಥ್, ಸುರೇಶ್ ಪ್ರಭು, ನಿತೀಶ್‌ಕುಮಾರ್, ರಮಣ್‌ಸಿಂಗ್,ಶಿವರಾಜ್ ಚೌಹಾಣ್ ಇವರೆಲ್ಲರೂ ಸಮರ್ಥರಾಗಿದ್ದರೂ ಇಲ್ಲಿ ಬಲಿಪಶುಗಳಾಗಿದ್ದರೆ. ಸ್ಮೃತಿ ಇರಾನಿ, ಗಿರಿರಾಜ್‌ಸಿಂಗ್ ಮತ್ತು ಯೋಗಿ ಆದಿತ್ಯನಾಥ್ ಅವರುಗಳುಅಸಮರ್ಥರಾಗಿದ್ದರೂ ಫಲಾನುಭವಿಗಳಾಗಿದ್ದಾರೆ. ಅಧಿಕಾರದ ಕುರ್ಚಿಗೆ ಇರುವ ಬದ್ಧತೆ ಮತ್ತು ನಾಯಕನ ಅಸುರಕ್ಷತೆ ಮತ್ತು ಅಭದ್ರತೆಯ ಭಾವನೆಯು ಬಿಜೆಪಿಯ ದಕ್ಷವ್ಯಕ್ತಿಗಳಿಗೂ ತೊಂದರೆ ಕೊಡಲಿದ್ದು, ಭಾರತವನ್ನೇ ಬಲಿನೀಡುವವರಿಗೆ ಫಲಪ್ರದವಾಗಲಿದೆ.

ಇತಿಹಾಸದ ದಾರಿಯನ್ನೇ ಬದಲಿಸಬಹುದಾದ ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ. ಕರ್ತಾರಪುರ ಅಂತಹ ಒಂದು ಅವಕಾಶವಾಗಿತ್ತು. ಪಿಡಿಪಿ+ಬಿಜೆಪಿ ಆಡಳಿತ ಒಂದುಅವಕಾಶವಾಗಿತ್ತು. ಅಂತರ್‌ರಾಷ್ಟ್ರೀಯ ಕಚ್ಚಾತೈಲದ ಬೆಲೆ ಒಂದು ಅವಕಾಶವಾಗಿತ್ತು. ಸರಳ ಬಹುಮತ ಒಂದು ಅವಕಾಶವಾಗಿತ್ತು. ವಿರೋಧಪಕ್ಷಗಳ ನಾಯಕನಾಗಿರಾಹುಲ್ ಗಾಂಧಿ ಇದ್ದದ್ದೂ ಒಂದು ಅವಕಾಶವಾಗಿತ್ತು. ಭ್ರಷ್ಟಾಚಾರ ವಿರೋಧಿ ಆಂದೋಲನ ಒಂದು ಅವಕಾಶವಾಗಿತ್ತು. ಆದರೆ ಪ್ರತಿಯೊಂದು ಅವಕಾಶವನ್ನು ವ್ಯವಸ್ಥಿತವಾಗಿಪೋಲು ಮಾಡಲಾಯಿತು.

ಈಗ ನಮಗಿರುವ ನಾಯಕರು ಒಂದು ತಮ್ಮ ಅಭಿಪ್ರಾಯದೊಂದಿಗೆ ಸಹಮತ ಇಡುವ ದರ್ಶಕರೊಂದಿಗೆ ಸ್ವಗತಗಳಲ್ಲಿ ನಂಬಿಕೆಯಿಟ್ಟಿದ್ದಾರೆಯೇ ಹೊರತು ಪ್ರಜ್ಞಾವಂತಜನರೊಂದಿಗೆ ಮುಕ್ತ ಚರ್ಚೆಯಲ್ಲಿ ಯಾವುದೇ ನಂಬಿಕೆಯಿಲ್ಲ. ಅವರಿಗೆ ತಮ್ಮ ಸಾಮರ್ಥ್ಯ ಕುಸಿಯುತ್ತಿದೆ ಎನ್ನುವ ಅರಿವಿದೆ ಹಾಗೂ ತನ್ನ ಸಾಧನೆಗಳ ಕೂಲಂಕಶ ಪರೀಕ್ಷೆಗೆಯಾವ ಕಾರಣಕ್ಕೂ ಒಪ್ಪುವುದಿಲ್ಲ. ಇವರ ಈ ಅಹಂಕಾರ ಎಲ್ಲವನ್ನೂ ಹೇಳುತ್ತದೆ. ಇವರ ಈ ಅಸಡ್ಡೆ  ಚೀತ್ಕರಿಸುತ್ತಿದೆ. ಇವರ ಈ ನಿರ್ಲಕ್ಷ್ಯ ಕಣ್ಣೀರಿಡುತ್ತಿದೆ. ವಿಶ್ವದಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ನಾಯಕ ಪ್ರಶ್ನೆಗಳನ್ನು ಎದುರಿಸಲು ನಿರಾಕರಿಸುತ್ತಿದ್ದಾನೆ.

ಈಗ ನಾವು ಒಂದು ದೇಶವಾಗಿ, ನಮ್ಮ ನೀತಿಗಳನ್ನು ಢೋಂಗಿ ವೈದ್ಯರು ರಚಿಸುತ್ತಿದ್ದಾರೆ, ನಮ್ಮ ಸಂಸ್ಥೆಗಳು ವ್ಯಕ್ತಿಗಳ ಅಧೀನವಾಗಿವೆ, ನಮ್ಮ ಆಲೋಚನೆ ಹವಾಲಾಆಪರೇಟರ್‌ಗಳು ಮತ್ತು  ಷೇರು ಮಾರುಕಟ್ಟೆಯ ಹಗಲು ವ್ಯಾಪಾರಿಗಳ ಆಲೋಚನೆಯಂತಾಗಿದೆ, ನಮ್ಮ ಅಂಕಿಅಂಶದ ತಜ್ಞರು ಇತರರನ್ನು ಚಿಕ್ಕದಾಗಿ ತೋರಿಸಲುಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ, ನಮ್ಮ ನೀತಿರಚನೆ ಮಾಡುವವರು ವಾಸ್ತವವನ್ನು ಬದಲಿಸುವುದನ್ನು ಬಿಟ್ಟು ಜನರ ಗ್ರಹಿಕೆಯನ್ನು ಕಟ್ಟುವುದರಲ್ಲಿ ತೊಡಗಿದ್ದಾರೆ,ನಮ್ಮ ನಾಯಕರಿಗೆ ದಕ್ಷತೆಗಿಂತ ನಿಷ್ಠೆಯೇ ಇಷ್ಟ, ಹಾಗಾಗಿ ಅದನ್ನೇ ಪುರಸ್ಕಿರಿಸುತ್ತಿದ್ದಾರೆ. ನಾವು ಸ್ಪರ್ಧೆಯಲ್ಲಿ ತೊಡಗುವವರನ್ನು ಬಿಟ್ಟು ನಮಗೆ ಹತ್ತಿರದವರಿಗೆಪ್ರೋತ್ಸಾಹಿಸುತ್ತಿದ್ದೇವೆ, ನಾವು ಸಕಾರಾತ್ಮಕ ವಿಮರ್ಶಕರನ್ನು ಬದಿಗಿಟ್ಟು ಭಟ್ಟಂಗಿಗಳ ಮಾತು ಕೇಳುತ್ತಿದ್ದೇವೆ, ಒಬ್ಬ ಅಭದ್ರ, ಅಸುರಕ್ಷತೆಯ ಭಾವನೆಯುಳ್ಳ ನಾಯಕನಿಗಾಗಿಎರಡನೇ ಹಂತದ ನಾಯಕರನ್ನು ಕೊಲ್ಲುತ್ತಿದ್ದೇವೆ ಹಾಗೂ ಅಹ್ಮದಾಬಾದ್ ಮತ್ತು ನಾಗಪುರದ ಕುಟುಂಬ ಮಂಡಳಿಯಿಂದ ಅಧಿಕೃತವಾಗಿ ಆಳ್ವಿಕೆಗೆ ಒಳಪಟ್ಟಿದ್ದೇವೆ.

ಮಾಯಾವತಿ, ಅಖಿಲೇಶ್, ಕೆಸಿಆರ್ ಮತ್ತು ಸ್ಟ್ಯಾಲಿನ್ ಇವರೆಲ್ಲ ಸೇರಿ ಮುಂದಿನ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸುವ ಸನ್ನಿವೇಶ ಖಂಡಿತವಾಗಿಯೂ ಖಿಚಡಿಎಂದೆನಿಸಲಿದೆ. ಚುನಾವಣೆಯ ನಂತರ ಮೋದಿ ಒಂದು ಅನಿವಾರ್ಯವಾಗಿ ಇರಲಾರರು ಹಾಗೂ ಒಂದು ಆಯ್ಕೆಯಾಗಿಯೂ ಇರಲಾರದ ಸಮಯ ಬರಬಹುದು. ಒಂದುವೇಳೆಮೋದಿಯೇ ಪ್ರಧಾನಿಯಾದರೂ ಅವರೂ ಒಂದು ಖಿಚಡಿ ಸರಕಾರವನ್ನೇ ನಡೆಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವೇನು ಮಾಡಬೇಕು? ನಾವು ಕಳೆದುಕೊಂಡನೆಲವನ್ನು ವಾಪಸ್ ಪಡೆದುಕೊಳ್ಳಬೇಕಿದೆ. ಶಾಂತಿಯ ಬಗ್ಗೆ, ಭವಿಷ್ಯದ ಕಡೆ ನೋಡಿ ಭವಿಷ್ಯದ ಬಗ್ಗೆ ಯೋಚಿಸುವ ಹಾಗೂ ಒಂದು ಭರವಸೆ, ನಿರೀಕ್ಷೆಯನ್ನು ಕಟ್ಟುವರಾಜಕೀಯ ಪಕ್ಷಕ್ಕೆ ಮತ ನೀಡಬೇಕಿದೆ. ಕೆಟ್ಟದ್ದನ್ನು ಮರೆತು ಒಳ್ಳೆಯತನಕ್ಕೆ, ಧರ್ಮವನ್ನು ಮರೆತು ಮಾನವತೆಗೆ, ಗ್ರಹಿಕಯನ್ನು ಬಿಟ್ಟು ಪ್ರದರ್ಶನಕ್ಕೆ ಹಾಗೂ ಆತಂಕಕ್ಕೆಮತ ನೀಡದೆ ಭರವಸೆಗೆ ಮತ ನೀಡಬೇಕಿದೆ. ನಾವು ಮತ ಚಲಾಯಿಸಬೇಕಿರುವದು ಬಂಧಿಗಳಾಗಲು ಅಲ್ಲ, ಸ್ವತಂತ್ರವಾಗಲು. ಅವರಿಗೆ ಏನು ಹೊಂದಾಣಿಕೆ ಆಗುತ್ತೋಅದನ್ನು ಅವರಿಗೆ ಬಿಟ್ಟು ನಮಗೆ ಏನು ಹೊಂದಾಣಿಕೆ ಆಗುತ್ತೋ ಅದಕ್ಕೆ ಮತ ಹಾಕುವ. ನಾವು ನಮಗಾಗಿ ಮತ ನೀಡುವ. ನಾವು ಮತ ಚಲಾಯಿಸುವ.ಬದಲಾವಣೆಗಾಗಿ.

ನಾವು ಮತಚಲಾಯಿಸುವ. ಬದಲಾವಣೆಗಾಗಿ.

ಅನುವಾದ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...