Homeಸಾಮಾಜಿಕಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

ಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

- Advertisement -
- Advertisement -

ಮಾನವ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಬೆಳೆದುಬಂದಂತೆಲ್ಲಾ ಬಂಡವಾಳ ಶಾಹಿ ವ್ಯವಸ್ಥೆ ಬಂತು. ಆಧುನಿಕ ವ್ಯಾಪಾರ ಸಂಸ್ಥೆಯೂ ಬಂತು. ನಾವು ಉದಾಹರಣೆಗೆ ಎಕ್ಸ್ ಎಂಬ ಒಂದು ಸಾರ್ವಜನಿಕ ಬಂಡವಾಳದ ಒಂದು ಕಂಪೆನಿಯನ್ನು ಊಹಿಸಿಕೊಳ್ಳೋಣ. ಅದರಲ್ಲಿ ಸಾವಿರಾರು ಹೂಡಿಕೆದಾರರ ಬಂಡವಾಳ ಇರುತ್ತದೆ. ಒಬ್ಬರಿಗೆ ಇನ್ನೊಬ್ಬರ ಪರಿಚಯ ಇರುವುದಿಲ್ಲ. ಅದಕ್ಕೆ ಅಧ್ಯಕ್ಷರಾಗಿ ಒಂದು ಆಡಳಿತ ಮಂಡಳಿ ಇರುತ್ತದೆ. ಅದರ ಮೇಲಿನ ನಂಬಿಕೆಯಿಂದ ಜನರು ಹಣ ಹೂಡುತ್ತಾರೆ. ಆದರೆ ಅದಕ್ಕೆ ಇರುವುದು ಕಾಲ್ಪನಿಕ ಕಾನೂನು ಬದ್ಧ ಅಸ್ತಿತ್ವ ಮಾತ್ರ ಇರುವುದು ದೈಹಿಕ ಅಸ್ತಿತ್ವ ಇರುವುದಿಲ್ಲ. ನಮ್ಮ ಈ ‘ಎಕ್ಸ್’ ಕಂಪೆನಿ ಕಾರು ಉತ್ಪಾದಿಸುತ್ತದೆ ಎನ್ನೋಣ. ನೀವು ಕೊಂಡ ಕಾರು ಸರಿಯಿಲ್ಲವಾದರೆ ನೀವು ಕಂಪೆನಿಯ ಮೇಲೆ ಕೇಸು ಹಾಕಬಹುದು ಅದರ ಅಧ್ಯಕ್ಷ ಅದಾನಿಯೋ, ಅಂಬಾನಿಯ ಮೇಲಲ್ಲ. ಆದರೆ ಅದಕ್ಕೆ ಕಾನೂನಿನ ಅಸ್ತಿತ್ವ ಮಾತ್ರ ಇರುವುದು!
ಉದಾಹರಣೆಗೆ ಈ ‘ಎಕ್ಸ್’ ಕಂಪೆನಿಯ ಎಲ್ಲಾ ಕಾರುಗಳು, ಕಾರ್ಖಾನೆಗಳು ನಾಶವಾದರೂ ‘ಎಕ್ಸ್’ ಕಂಪೆನಿ ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿ ಇರುತ್ತದೆ. ಅದೇ ಹೆಸರಲ್ಲಿ ಮುಂದೆ ಕಾರ್ಖಾನೆ ಸ್ಥಾಪಿಸಿ, ಕಾರುಗಳನ್ನು ಉತ್ಪಾದನೆ ಮಾಡಿ ಮಾರಲು ಸಾಧ್ಯವಿದೆ! ಅದನ್ನು ಸೂಕ್ಷ್ಮವಾಗಿ ಯೋಚಿಸೋಣ. ನಮ್ಮ ದೇವರು ಮತ್ತು ಧರ್ಮಗಳಿಗೂ ಇರುವುದು ‘ಸಾಮೂಹಿಕ ಕಲ್ಪನೆಯ ಅಸ್ತಿತ್ವ’ ಮಾತ್ರ! ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸಲಾಗದು. ಈ ಸಾಮೂಹಿಕ ಕಾಲ್ಪನಿಕ ಅಸ್ತಿತ್ವ’ವನ್ನೇ ನಮ್ಮ ಜೋಯಿಸರುಗಳು ಬಂಡವಾಳ ಮಾಡಿಕೊಂಡಿದ್ದಾರೆ!
ಕಂಪೆನಿಗೆ ಭೌತಿಕ ಅಸ್ತಿತ್ವ ಇಲ್ಲದಿದ್ದರೂ ಅದರ ಕಾರ್ಖಾನೆಗಳು ಭೌತಿಕ ಉತ್ಪಾದನೆಗಳನ್ನು ತಯಾರಿಸುತ್ತವೆ, ಮಾರುತ್ತವೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಲಾಭ ಮಾಡುತ್ತವೆ; ಇಲ್ಲವೇ ನಷ್ಟ ಭರಿಸುತ್ತವೆ. ಇದು ಆಹಾರ ನಿತ್ಯೋಪಯೋಗಿ ವಸ್ತುಗಳಿಗೆ ಅನ್ವಯಿಸುತ್ತದೆ. ಈಗ ಭೌತಿಕ ಅಸ್ತಿತ್ವ ಇಲ್ಲದ ಸೇವೆಗಳು ಹುಟ್ಟಿಕೊಂಡಿವೆ.
ಆದರೆ ಈ ಪುರೋಹಿತರು ನೋಡಿ-ವರ್ಷಾಂತರಗಳಿಂದ ಭೌತಿಕ ಅಸ್ತಿತ್ವವೇ ಇಲ್ಲದ ಕಾಲ್ಪನಿಕ ಸರಕುಗಳನ್ನು ಮಾರಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ಬಂಡವಾಳವನ್ನೂ ಅಂದರೆ ಸಾಮಗ್ರಿಗಳು, ದಕ್ಷಿಣೆ, ಫೀಸು ಇತರ ವೆಚ್ಚಗಳನ್ನು ಭಕ್ತರೇ ಭರಿಸಬೇಕು! ಪ್ರತೀ ಕಾರ್ಖಾನೆಯಲ್ಲಿ ಏನಾದರೂ ಉತ್ಪನ್ನ ಹುಟ್ಟುತ್ತದೆ. ಇವರ ಉತ್ಪನನ್ ಅಸ್ತಿತ್ವದಲ್ಲೇ ಇಲ್ಲದ ಪಾಪ, ಪುಣ್ಯ, ಪರಿಹಾರ, ಶ್ರೇಯಸ್ಸು ಮುಂತಾದ ಕಾಲ್ಪನಿಕ ಸರಕುಗಳೇ! ಇವನ್ನು ಅವರಿಗೆ ತೋರಿಸಲಾಗುವುದಿಲ್ಲ! ನಿಮಗೆ ನೋಡಲು ಆಗುವುದಿಲ್ಲ! ಕೇವಲ ಭ್ರಮಿಸಬಹುದು ಅಷ್ಟೇ!
ಉದಾಹರಣೆಗೆ ಯಾವುದೋ ಜೋಯಿಸರ ಮಾತು ಕೇಳಿ ನೀವು ಪೂಜೆ ಮಾಡಿಸಿದರೆನ್ನಿ. ಎಲ್ಲಾ ಸಾಮಗ್ರಿ, ವೆಚ್ಚ ನೀವೇ ಭರಿಸಬೇಕು. ಉತ್ಪನ್ನ? ನಿಮಗೆ ಏನು ಸಿಕ್ಕಿತು ಎಂಬುದನ್ನು ನೀವು ನೋಡಲು ಸಾಧ್ಯವೆ? ಆದರೆ ಜೋಯಿಸರಿಗೆ ಮಾತ್ರ ಭೌತಿಕವಾಗಿ ‘ಗಂಟು’ ಸಿಗುತ್ತದೆ.
ಈ ಕಾಲ್ಪನಿಕ ಸರಕುಗಳನ್ನು ನಮ್ಮ ಜೋಯಿಸರುಗಳು ಹೇಗೆ ಮಾರ್ಕೆಟ್ ಮಾಡುತ್ತಿದ್ದಾರೆ ನೋಡಿ. ನಮ್ಮ ನಂಬಿಕೆಯೇ ಇದಕ್ಕೆ ಆಧಾರ. ಪ್ರಧಾನಮಂತ್ರಿ ಬೇರೆಬೇರೆ ಖಾತೆಗಳನ್ನು ಬೇರೆಬೇರೆಯವರಿಗೆ ಹಂಚುವಂತೆ ಬೇರೆಬೇರೆ ದೇವರಿಗೆ ಹಂಚಿಬಿಟ್ಟಿದ್ದಾರೆ. ಸೃಷ್ಟಿ, ಪಾಲನೆ, ಲಯ ಒತ್ತಟ್ಟಿಗಿರಲಿ- ಧನ, ವಿದ್ಯೆ, ಸಂತಾನ ಇತ್ಯಾದಿಯಾಗಿ ನಿತ್ಯ ಜೀವನದ ವಿಷಯಗಳಿಗೂ ಒಬ್ಬೊಬ್ಬ ದೇವರು! ಹಣಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ! ಇವರಲ್ಲಿ ಲಕ್ಷ್ಮಿಗಂತೂ ಹಲವಾರು ಖಾತೆಗಳು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮೀ, ಗೃಹಲಕ್ಷ್ಮೀ, ಸಂತಾನಲಕ್ಷ್ಮೀ ಮುಂತಾದ ಹೆಸರುಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಆಸ್ತಿಕರ ಪಾಲಿಗೆ ದೇವರೊಬ್ಬನೆ-ಆತ ಪರಮಾತ್ಮ ಎಂದು ಘೋಷಿಸಿ, ದೇವರನ್ನು ನಿರಾಕಾರ-ನಿರ್ಗುಣ’ ಎಂದು ಸಾರಿದ ಧರ್ಮವೊಂದರಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವರನ್ನು ಸೃಷ್ಟಿಸಿ, ಅವರಿಗೆ ತಾವೇ ಒಂದೊಂದು ಕರ್ತವ್ಯವನ್ನು ಹೇರಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪೂಜೆಗಳನ್ನು ಆವಿಷ್ಕರಿಸಿದ ಪುರೋಹಿತರಷ್ಟು ಬುದ್ಧಿವಂತರು, ಮಹಾ ವಿಜ್ಞಾನಿಗಳು ಪ್ರಪಂಚದಲ್ಲಿ ಬೇರಾರೂ ಇಲ್ಲ!
ವಿಜ್ಞಾನದ ಆವಿಷ್ಕಾರಗಳು! ‘ವರ್ಚುವಲ್ ವಲ್ರ್ಡ್’! ವಾವ್ ನಾವು, ನಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ, ತಲೆಗೆ ಕಿರೀಟದಂತಹ ಕಿರೀಟ ಹಾಕ್ಕೊಂಡು, ಎಂತೆಂತೆಲ್ಲವನ್ನು ಅನುಭವಿಸಬಹುದು ಈ ಪ್ರಪಂಚವನ್ನೇ ಡ್ರಗ್ ಸೇವಕದಂತೆ ಮರೆಯಬಹುದು. ನಿಜವನ್ನು ಭ್ರಮೆಯಲ್ಲಿ ಕಾಣಬಹುದು. ಕಾರ್ಲ್‍ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಾಗ ಅವನಿಗೆ ಏನಾದರೂ ಈ ರೀತಿ ಮುಂದಾಲೋಚನೆ ಇದ್ದಿರಬಹುದೆ? ಭಾರತದಲ್ಲಿ ಜಾತಿಪಾತಿ-ಚಪಾತಿ ಭಾರತದಲ್ಲಿ ಬಂಡವಾಳ ಇಲ್ಲದೆ, ಅವನ ಕಾಲಕ್ಕೇ ಬೆಳೆದಿರದ ಬಂಡವಾಳ ರಹಿತ ಶೋಷಣೆ ವ್ಯವಸ್ಥೆ ಇಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಲ್‍ಮಾಕ್ರ್ಸ್‍ಗೆ ಗೊತ್ತಿರಬಹುದೆ? ಹಾಂ! ಇಲ್ಲ!! ಅದಕ್ಕೆ ಹೇಳುವುದು-ಬ್ರಹ್ಮಜ್ಞಾನ-ಬ್ರಾಹ್ಮಣ ಸಂಜಾತರಿಗೆ(ಗೆಳೆಯರು ಕ್ಷಮಿಸಿ) ಮಾತ್ರ ಸಿಗುವಂತದ್ದು! ಅದರಿಂದಲೇ ಅವರು ಅತ್ಯಾಧುನಿಕ ವೈಜ್ಞಾನಿಕ, ಆರ್ಥಿಕ, ಪಾರಮಾರ್ಥಿಕ ಆವಿಷ್ಕಾರಗಳನ್ನು ಮಾಡಿದ್ದಾರೆ! ಅದನ್ನು ಶಿವನ ಸರ್ಜರಿ, ಅಣುಬಾಂಬ್-ಬ್ರಹ್ಮಾಸ್ತ್ರ-ಇತ್ಯಾದಿಯಾಗಿ ಸಾವಿರಾರು ರೀತಿಯಲ್ಲಿ ನಂಬಿದ್ದಾರೆ! ಯಾವುದೇ ರಾಕೆಟ್ ಹಾರಿಸಲು ಫ್ಯುಯೆಲ್-ಇಂಧನ ಬೇಕು. ಬಾಂಬ್ ತಯಾರಿಸಲೂ ಕೆಲವು ಮೂಲವಸ್ತುಗಳು-ಅಣುಬಾಂಬಿಗೆ ಕಾಲ್ಪನಿಕ ದೋಷಗಳೇ ಸಾಕು! ಬಂಡವಾಳ ನಿಮ್ಮದೇ! ಹೂವು-ಗೀವು-ಅದೂ-ಇದು! ನೀವು ಪ್ರಾನ್ಸ್-ಅಮೆರಿಕಾದ ಗುಲಾಮರಾಗಿರಬೇಕಾಗಿಲ್ಲ! ಅವರೇ ನಿಮಗೆ ರಿಡಕ್ಷನ್-ಕಮೀಷನ್ ಕೊಡುತ್ತಾರೆ! ಇಸ್ರೇಲನ್ನು ಮರೆಯದಿರಿ! ಕೇರಳ ಮಂತ್ರವಾದಿಗಳಂತೆ ಅವರೇ ಎಲ್ಲವನ್ನೂ ಮಾಡುತ್ತಾರೆ! ನೀವು ಸೂಟುಹಾಕಿ ಪೂಜೆಗೆ ಕುಳಿತರೆ ಪಡು! ನಾವು ಪೂಜೆಯಿಂದ ಮಳೆ ಬರಿಸಬಲ್ಲೆವು! ವಿನಾಶ ಮಾಡಬಲ್ಲೆವು! ದೇಶವನ್ನು ಬರೇ ಮಂತ್ರ ಯಾಗ ಹೋಮ ಹವನಗಳಿಂದ ನಿವಾರಿಸಬಲ್ಲೆವು! ಹೀಗೆ ಹೇಳುವ ಇವರಿಗೇ ನಮ್ಮ ಎಲ್ಲಾ ರಕ್ಷಣಾ ಬಜೆಟ್ ಕೊಟ್ಟುಬಿಡಿ! ಇವೆಲ್ಲವನ್ನೂ ನಂಬುವ ದೇಶ ರಾಜಕೀಯವಗಿ ಎಷ್ಟು ಪ್ರಬುದ್ಧವಾಗಿರಬಹುದು?
ವಿಜ್ಞಾನಿಗಳೇ ಜನಿವಾರಧಾರಿಗಳಾಗಿ-ಒಂದು ತಾವೇ ಸೃಷ್ಟಿಸಿದ ರಾಕೆಟನ್ನು ಉಡಾಯಿಸುವಾಗ ಒಂದು ಸರಳ ಪ್ರಾರ್ಥನೆ ಅಥವಾ ವಿಶ್ ಬಿಟ್ಟು, ಹೋಮ ಹವನಗಳನ್ನು ಮಾಡುವುದಾದರೆ, ಪುರಾಣಗಳ ಎಲ್ಲಾ ಆಗ್ನೇಯಾಸ್ತ್ರ ಬ್ರಹ್ಮಾಸ್ತ್ರಗಳನ್ನು ಹುಡುಕಲು ಬೊಮ್ಮನ್ ವಿಶ್ವವಿದ್ಯಾನಿಲಯ ತೆರೆಯಬಹುದು! ಸಂಶೋಧನೆಯ ಹಣ ವಿಜ್ಞಾನಿಗಳಿಗೆ ಯಾಕೆ ಹೋಗಬೇಕು? ಅದು ನಮ್ಮ ಜ್ಯೋತಿಷ್ಯದವರ ಪಾಲಲ್ಲವೇ? ಕರ್ನಾಟಕ ಸರಕಾರ ಇದಕ್ಕೆ ಮುಂದಾಗಬೇಕು!
ಎಲ್ಲಾ ಜ್ಯೋತಿಷಿಗಳನ್ನು ಒಟ್ಟು ಸೇರಿಸಿ ಒಂದು ಸವೇಶನ ಮಾಡಿಸಿ! ಭಾಗವಹಿಸಿದವರಿಗೆಲ್ಲಾ ಒಂದೊಂದು ಪಾರ್ಟಿಯ ಸರ್ಟಿಫಿಕೇಟ್ ಕೊಡಿ! ಲೈಸನ್ಸ್ ಅದತ್ಯವಿಲ್ಲ! ರಾಜ್ಯಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಜ್ಯೋತಿಷ್ಯ ಕೇಳಿಕೊಳ್ಳಿ! ಎದಕ್ಕೆ ಯಡ್ಡಿ,ಚಡ್ಡಿ, ಸಿದ್ದು, ಕುಮ್ಮಿ, ಮೊದ್ದು, ಪಪ್ಪು, ಚಾ ಎಂದೇನೂ ಇಲ್ಲ! ಎಲ್ಲರೂ ಬಂದು ದೇವರ ಸರಕಾರವನ್ನು ‘ಜನರ ಸರಕಾರ’ ಮಾಡಿ!
ಇಷ್ಟೆಲ್ಲಾ ಹೇಳಿದರೂ ಜ್ಯೋತಿಷ್ಯವನ್ನು ನಂಬುವವರು ನಂಬುತ್ತಲೇ ಇರಲಿ! ಸರಕಾರವೇ ಈ ಬರವಣಿಗೆಯ ವಿರುದ್ಧ ನಿಂತು ಪೋಷಿಸುತ್ತಿರುವಾಗ-ಓಟು ಕೊಟ್ಟು ಗೆಲ್ಲಿಸುವ ಜನಸಾಮಾನ್ಯರು ಬದಲಾಗುತ್ತಾರೋ ನನಗೆ ಸಂಶಯ! ಈ ತನಕ ನನ್ನ ಪ್ರವರ ಓದಿದ್ದಕ್ಕೆ ಧನ್ಯವಾದ!
ಮುಂದೆ ‘ನ್ಯಾಯಪಥ’ ಅವಕಾಶ ಕೊಟ್ಟರೆ ಮತ್ತೆ ಭೇಟಿ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...