Homeಕರ್ನಾಟಕಬಡವರ ಪಾಲಿನ ಧೀಮಂತ ಕಮ್ಯುನಿಸ್ಟ್ ಹೋರಾಟಗಾರ ಕೆ.ಎಂ ಶ್ರೀನಿವಾಸ್ ನಿಧನ

ಬಡವರ ಪಾಲಿನ ಧೀಮಂತ ಕಮ್ಯುನಿಸ್ಟ್ ಹೋರಾಟಗಾರ ಕೆ.ಎಂ ಶ್ರೀನಿವಾಸ್ ನಿಧನ

- Advertisement -
- Advertisement -

ತೀರ್ಥಹಳ್ಳಿ ತಾಲೂಕಿನ ಹಿರಿಯ ಕಮ್ಯೂನಿಸ್ಟ್ ಮುಖಂಡರಾದ ಕೆ.ಎಂ ಶ್ರೀನಿವಾಸ (91) ರವರು ಅನಾರೋಗ್ಯದ ಕಾರಣ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 7:15ಕ್ಕೆ ನಿಧನರಾಗಿದ್ದಾರೆ.

ಇವರ ಅಂತಿಮ ಸಂಸ್ಕಾರವನ್ನು ಇಂದು ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ನೆರವೇರಿಸಲು ನಿರ್ಧರಿಸಿದ್ದು, ಅವರ ಮಗನಾದ K S ರವಿ ಯವರ (ಗೋಪಾಳ) ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

೨೭-೦೭-೧೯೨೯ ರಂದು ಕೆ. ಮುದ್ದಯ್ಯಗೌಡರು ಮತ್ತು ರುಕ್ಮಿಣಿಯವರ ಮಗನಾಗಿದ್ದ ಜನಿಸಿದ್ದ ಇವರು ಪತ್ರಿಕೋಧ್ಯಮ ವಿಷಯದಲ್ಲಿ ಪದವಿ ಮತ್ತು ಕಾನೂನ ಪದವಿ ಪಡೆದು ವಿದ್ಯಾರ್ಥಿ ದಿಸೆಯಲ್ಲಿಯೇ ಹೋರಾಟಕ್ಕಿಳಿದಿದ್ದರು.

ಶಾಂತವೇರಿ ಗೋಪಾಲಗೌಡರ ನೇತೃತ್ವದ ಸ್ವಾತಂತ್ರ್ಯ ಹೋರಾಟ, ಕ್ವಿಟ್ ಇಂಡಿಯಾ ಚಳವಳಿ, ಮೈಸೂರು ಚಲೋ ಚಳವಳಿ ಮತ್ತು ಕಾಗೋಡು ಚಳವಳಿಯಲ್ಲಿ ಭಾಗವಹಿಸಿದ್ದ ಹಿರಿಮೆ ಇವರಿಗಿದೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಬೇಡವೆಂದು ನಿರಾಕರಿಸಿದ ಸ್ವಾಭಿಮಾನಿ ಇವರು.

ಮಲೆನಾಡಿನ ಭೂಮಾಲೀಕರ ವಿರುದ್ಧ ಹೋರಾಟ ನಡೆಸಿ ಗೇಣಿದಾರರ ನಾಯಕತ್ವ ವಹಿಸಿದ್ದರು. ೧೯೬೦-೭೦ರವರೆಗೆ ಪ್ರಾಂತೀಯ ರೈತ ಸಂಘದ ಕಾರ್‍ಯದರ್ಶಿಯಾಗಿ ಸಿಪಿಐ(ಎಂ) ಪಕ್ಷದಲ್ಲಿ ತಮ್ಮ ಗುರುತಿಸಿಕೊಂಡಿದ್ದರು.

ಸುಮಾರು ೧೨೦೦೦ ಬೀಡಿಕಾರ್ಮಿಕರನ್ನು ಸಂಘಟಿಸಿ ಹೋರಾಟ ರೂಪಿಸಿದ್ದ ಇವರು ಅವರ ಜೀವನ ಹಸನಾಗಲು ಶ್ರಮಿಸಿದ್ದರು. ಮುಳುಗಡೆ ರೈತ ಹೋರಾಟ ಸಮಿತಿಯನ್ನು ರಚಿಸಿ ಹೋರಾಟದ ಪರಿಣಾಮವಾಗಿ ಜೈಲುವಾಸವನ್ನು ಸಹ ಅನುಭವಿಸಿದ್ದರು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅವರು, ಗೇಣಿದಾರರ ಹೋರಾಟದ ಆಕ್ರಮಣಶೀಲ ಮುಂದಾಳು ಅಪ್ಪಣ್ಣ ಹೆಗ್ಡೆಯವರ ನಿಕಟ ಸಹವರ್ತಿ ಯೂ ಆಗಿದ್ದರು…..

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...