Homeರಾಷ್ಟ್ರೀಯ1.87 ಕೋಟಿ ತೆರಿಗೆ ಬಾಕಿ; ಸಂಗೀತ ನಿರ್ದೇಶಕ ಇಳಯರಾಜಗೆ ಜಿಎಸ್‌ಟಿ ಇಲಾಖೆಯಿಂದ ಶೋಕಾಸ್‌ ನೋಟಿಸ್‌

1.87 ಕೋಟಿ ತೆರಿಗೆ ಬಾಕಿ; ಸಂಗೀತ ನಿರ್ದೇಶಕ ಇಳಯರಾಜಗೆ ಜಿಎಸ್‌ಟಿ ಇಲಾಖೆಯಿಂದ ಶೋಕಾಸ್‌ ನೋಟಿಸ್‌

- Advertisement -
- Advertisement -

ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಜಿಎಸ್‌ಟಿ ಇಲಾಖೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಸೇವಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಇಳಯರಾಜ ಅವರಿಗೆ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇಲಾಖೆಯು ಅವರಿಗೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಬಾರಿ ಜಿಎಸ್‌ಟಿ ಚೆನ್ನೈ ವಲಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 2013 ರಿಂದ 2015ರ ವರೆಗಿನ ಅವಧಿಯ ಚಲನಚಿತ್ರಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದಕ್ಕಾಗಿ ಚಿತ್ರ ನಿರ್ಮಾಪಕರಿಂದ ಪಡೆದ ನಗದಿನ ಮೇಲೆ ಸೇವಾ ತೆರಿಗೆಯಾಗಿ 1.87 ಕೋಟಿ ರೂ.ವನ್ನು ಇಳಯರಾಜ ಅವರು ಸೇವಾ ತೆರಿಗೆಯಾಗಿ ಪಾವತಿಸಬೇಕಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಫೆಬ್ರವರಿ 28 ರಂದು ಇಳರಾಜ ಅವರಿಗೆ ಮೊದಲ ಬಾರಿಗೆ ಇಲಾಖೆಯು ಸಮನ್ಸ್ ನೀಡಿತ್ತು. ಜೊತೆಗೆ ಮಾರ್ಚ್ 10 ರಂದು ಖುದ್ದು ಹಾಜರಾಗಿ ತೆರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ.

ಇದರ ನಂತರ ಇಲಾಖೆಯು ಅವರಿಗೆ ಮಾರ್ಚ್‌ 21ರಂದು ಮತ್ತೊಮ್ಮೆ ಸಮನ್ಸ್ ನೀಡಿತ್ತು. ಅದರಂತೆ ಅವರು ಮಾರ್ಚ್ 28 ರಂದು ಹಾಜರಾಗಬೇಕಿತ್ತು. ಆದರೂ ಅವರು ಇಲಾಖೆ ಮುಂದೆ ಹಾಜರಾಗಿರಲಿಲ್ಲ.

ಇದನ್ನೂ ಓದಿ: ಮೋದಿಯನ್ನು ಅಂಬೇಡ್ಕರ್‌ರವರಿಗೆ ಹೋಲಿಸಿದ ಸಂಗೀತ ನಿರ್ದೇಶಕ ಇಳಯರಾಜ

ಇದರ ನಂತರ ಇಳಯರಾಜ ಅವರು ಪುಸ್ತಕವೊಂದರಲ್ಲಿ ಮೋದಿಯನ್ನು ಹೊಗಳಿ ಮುನ್ನುಡಿ ಬರೆದಿದ್ದರು. ಅದರಲ್ಲಿ ಅವರು ಪ್ರಧಾನಿ ಮೋದಿಯನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಹೋಲಿಸಿದ್ದರು. ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ತನ್ನ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ಅವರು ಮೋದಿಯನ್ನು ಹೊಗಳಿದ್ದಾರೆ ಎಂದು ಆರೋಪಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...