Homeಮುಖಪುಟಗುಜರಾತ್‌; ಗರ್ಬಾ ಆಚರಣೆ ವೇಳೆ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತದಿಂದ ಸಾವು

ಗುಜರಾತ್‌; ಗರ್ಬಾ ಆಚರಣೆ ವೇಳೆ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತದಿಂದ ಸಾವು

- Advertisement -
- Advertisement -

ಗುಜರಾತ್‌ನಲ್ಲಿ ನವರಾತ್ರಿಯ ಭಾಗವಾಗಿ ಹಮ್ಮಿಕೊಂಡ ಗರ್ಬಾ ಕಾರ್ಯಕ್ರಮ ಆಚರಣೆ ವೇಳೆ ಕಳೆದ 24 ಗಂಟೆಯಲ್ಲಿ ಕನಿಷ್ಠ 10 ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ವಿಚಾರ ಬಯಲಾಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಮೃತರಲ್ಲಿ ಹದಿಹರೆಯದವರು ಮತ್ತು ಮಧ್ಯವಯಸ್ಕರಿದ್ದಾರೆ. ಬರೋಡಾದ ದಾಭೋಯ್‌ ನಿವಾಸಿ 13 ವರ್ಷದ ಬಾಲಕ ಮೃತರಲ್ಲಿ ಕಿರಿಯವನಾಗಿದ್ದಾರೆ.

ಅ.20ರಂದು ಗಾರ್ಬಾ ಕಾರ್ಯಕ್ರಮದಲ್ಲಿ ಅಹಮದಾಬಾದ್‌ನ ನಿವಾಸಿ ಯುವಕ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅದೇ ರೀತಿ ಕಪದ್ವಾಂಜ್‌ನ 17 ವರ್ಷದ ಬಾಲಕ ಗಾರ್ಬಾದಲ್ಲಿ ಭಾಗವಹಿಸಿದ್ದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಅ.20 ಮತ್ತು ಅ.21 ರಂದು ರಾಜ್ಯದಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ.

ನವರಾತ್ರಿಯ ಮೊದಲ 6 ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿ ತುರ್ತು ಆಂಬ್ಯುಲೆನ್ಸ್ ಸೇವೆಗಾಗಿ 521 ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳು ಬಂದಿದೆ ಎಂಬುವುದು ದಾಖಲೆ ಪ್ರಸ್ತುತ ಪಡಿಸುತ್ತಿದೆ. ಈ ಕರೆಗಳು ಗರ್ಬಾವನ್ನು ಸಾಮಾನ್ಯವಾಗಿ ಆಚರಿಸುವ ಸಂಜೆ 6 ರಿಂದ ಬೆಳಗಿನ ಜಾವ 2 ಗಂಟೆಯ ನಡುವೆ ಬಂದಿರುತ್ತದೆ.

ಗರ್ಬಾ ಕಾರ್ಯಕ್ರಮದ ಸ್ಥಳಗಳ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ರೋಗಿಗಳು ಬಂದಾಗ ಚಿಕಿತ್ಸೆಗೆ ಸನ್ನದ್ದವಾಗಿರುವಂತೆ ರಾಜ್ಯ ಸರ್ಕಾರ ಸೂಚನೆಯನ್ನು ನೀಡಿದೆ.

ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ತ್ವರಿತವಾಗಿ ತಲುಪುವಂತೆ ಕಾರಿಡಾರ್‌ಗಳನ್ನು ರಚಿಸುವಂತೆ ಗಾರ್ಬಾದ ಸಂಘಟಕರಿಗೆ ತಿಳಿಸಲಾಗಿದೆ.

ಗರ್ಬಾದಲ್ಲಿ ಭಾಗವಹಿಸುವವರಿಗೆ ಸಾಕಷ್ಟು ನೀರಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಸಿಬ್ಬಂದಿಗಳು ಸಿಪಿಆರ್‌ ನೀಡಲು ಕಲಿತುಕೊಳ್ಳುವಂತೆ ಕೂಡ ಸೂಚಿಸಲಾಗಿದೆ.

ಇದನ್ನು ಓದಿ: ಚೆನ್ನೈ: ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...