Homeಕರ್ನಾಟಕಬೈಬಲ್‌ ಕಡ್ಡಾಯ ಆರೋಪ: ಬೆಂಗಳೂರಿನ ಶಾಲೆಗೆ ಸರ್ಕಾರದಿಂದ ನೋಟಿಸ್ ಜಾರಿ; ಆರೋಪ ನಿರಾಕರಿಸಿದ ಸಂಸ್ಥೆ

ಬೈಬಲ್‌ ಕಡ್ಡಾಯ ಆರೋಪ: ಬೆಂಗಳೂರಿನ ಶಾಲೆಗೆ ಸರ್ಕಾರದಿಂದ ನೋಟಿಸ್ ಜಾರಿ; ಆರೋಪ ನಿರಾಕರಿಸಿದ ಸಂಸ್ಥೆ

- Advertisement -
- Advertisement -

ಪೂರ್ವ ಬೆಂಗಳೂರಿನ ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೈಬಲ್ ಬೋಧನೆ ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಿರ್ಧಾರವನ್ನು ವಿವರಿಸಲು ರಾಜ್ಯ ಸರ್ಕಾರ ಶಾಲೆಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

ಪೋಷಕರು ಮತ್ತು ಮಾಧ್ಯಮಗಳ ವರದಿಗಳನ್ನು ಪರಿಗಣಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಂಗಳವಾರ ಶಾಲೆಗೆ ನೋಟಿಸ್ ಜಾರಿ ಮಾಡಿದ್ದು, ಶಾಲೆಯ ಪ್ರತಿಕ್ರಿಯೆಯ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಖಚಿತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಾಲೆಯ ಕ್ರಮ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸಚಿವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. “ಇತರ ಬೋರ್ಡ್‌ ಶಾಲೆಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವಾಗ, ಅವರು ಕಾಯಿದೆಯ ನಿಬಂಧನೆಗಳನ್ನು ಪಾಲಿಸಬೇಕು ಎಂದು ನಾವು ಹೇಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಾದಾಗಿರಿ ಮಾಡಲು ಬಂದರೆ ‘ಮಹಾರುದ್ರ’ ತೋರಿಸಿ ಕೊಡುತ್ತೇವೆ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಆಡಳಿತಾತ್ಮಕ ಸಡಿಲಿಕೆಗಳನ್ನು ಪಡೆಯಬಹುದಾದರೂ, ಧಾರ್ಮಿಕ ಪುಸ್ತಕಗಳನ್ನು ಕಲಿಸಲು ಅವಕಾಶವಿರುವುದಿಲ್ಲ. “ಶಾಲೆಗಳಲ್ಲಿ ಧಾರ್ಮಿಕ ಪುಸ್ತಕಗಳನ್ನು ಕಲಿಸಲು ಅಥವಾ ಬೋಧಿಸಲು ಪಠ್ಯಕ್ರಮದಲ್ಲಿ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವಾಗ ಇವೆಲ್ಲವನ್ನೂ ಉಲ್ಲೇಖಿಸಲಾಗಿದೆ” ಎಂದು ನಾಗೇಶ್ ತಿಳಿಸಿದ್ದಾರೆ.

ಪ್ರಸ್ತುತ ಶಾಲೆಯ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ನಡುವೆಯೆ, ಧಾರ್ಮಿಕ ಬೋಧನೆಗಳು ಮಾಡಲಾಗುತ್ತಿದೆಯೆ ಎಂದು ಶಾಲೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನೋಟಿಸ್‌ಗಳನ್ನು ನೀಡಲು ಇಲಾಖೆಯು ರಾಜ್ಯದ ಎಲ್ಲಾ ಬ್ಲಾಕ್ ಶೈಕ್ಷಣಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸುಳ್ಳು ಪ್ರಚಾರಕ್ಕೆ ಮಣಿಯಬೇಡಿ: ಡಾ. ಮಚಾದೊ

ಶಾಲೆಯ ಮೇಲೆ ಮಾಡಿರುವ ಆರೋಪಗಳು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಬೆಂಗಳೂರಿನ ಆರ್ಚ್‌ಡಯಾಸಿಸ್‌ ಹೇಳಿದೆ. ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಪ್ರದೇಶ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಅಧ್ಯಕ್ಷ ಡಾ.ಪೀಟರ್ ಮಚಾದೊ, “ಈ ಹಿಂದೆ ಇಂತಹ ಪದ್ಧತಿ ಇತ್ತು ಎಂದು ಶಾಲೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದರೆ ಕಳೆದ ವರ್ಷದಿಂದ, ಯಾವುದೇ ಮಗುವಿಗೆ ಶಾಲೆಗೆ ಬೈಬಲ್ ಅನ್ನು ಕೊಂಡೊಯ್ಯುವಂತೆ ಅಥವಾ ಬಲವಂತವಾಗಿ ಓದಲು ಕೇಳಲಾಗುತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಂಸ್ಥೆಯಾಗಿರುವುದರಿಂದ, ಶಾಲೆ ಮುಗಿದ ನಂತರ ಕ್ರಿಶ್ಚಿಯನ್ನರಿಗೆ ಬೈಬಲ್ ಅಥವಾ ಧಾರ್ಮಿಕ ತರಗತಿಗಳನ್ನು ನಡೆಸಲು ಶಾಲೆಗೆ ಹಕ್ಕುಗಲಿವೆ ಎಂದು ಅವರು ಹೇಳಿದ್ರುದಾರೆ.

ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಸಂಘಟನೆಗಳ ಸುಳ್ಳು ಪ್ರಚಾರಕ್ಕೆ ಜನರು ಮರುಳಾಗಬಾರದು ಎಂದು ಡಾ.ಮಚಾದೊ ಮನವಿ ಮಾಡಿದ್ದು, “ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮೊಂದಿಗೆ ಕೈ ಜೋಡಿಸಿ” ಎಂದು ಹೇಳಿದ್ದಾರೆ.

ಮುಂದಿನ ವರ್ಷದಿಂದ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಸರ್ಕಾರದ ಯೋಜನೆಯನ್ನು ಉಲ್ಲೇಖಿಸಿದ ಅವರು, “ಮಕ್ಕಳಿಗೆ ಭಗವದ್ಗೀತೆ ಮತ್ತು ಇತರ ಧರ್ಮಗಳ ಪುಸ್ತಕಗಳನ್ನು ಖರೀದಿಸಲು ವಿನಂತಿಸಿದರೆ, ಅದು ಅವರ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆಯೆ? ಅಥವಾ ನಿರ್ದಿಷ್ಟ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರೇರೇಪಿಸಿದಂತೆ ಆಗುತ್ತದೆಯೆ? ಖಂಡಿತವಾಗಿಯೂ ಅಲ್ಲ.

ಇದನ್ನೂ ಓದಿ: ‘ದೇಶದ್ರೋಹ’ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಲಿರುವ ಸುಪ್ರೀಂಕೋರ್ಟ್

ಆದ್ದರಿಂದ, ನೈತಿಕತೆ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸಲು ಅಲ್ಪಸಂಖ್ಯಾತ ಶಾಲೆಗಳಲ್ಲಿ ಧರ್ಮಗ್ರಂಥದ ಪುಸ್ತಕವನ್ನು ಬಳಸುವುದು ವಿದ್ಯಾರ್ಥಿಗಳನ್ನು ಅವರ ಧರ್ಮದ ಕಡೆಗೆ ಬಲವಂತವಾಗಿ ಆಕರ್ಷಿಸುತ್ತದೆ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಡಾ. ಮಚಾದೊ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...