Homeರಾಜಕೀಯದಾದಾಗಿರಿ ಮಾಡಲು ಬಂದರೆ ‘ಮಹಾರುದ್ರ’ ತೋರಿಸಿ ಕೊಡುತ್ತೇವೆ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ದಾದಾಗಿರಿ ಮಾಡಲು ಬಂದರೆ ‘ಮಹಾರುದ್ರ’ ತೋರಿಸಿ ಕೊಡುತ್ತೇವೆ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

- Advertisement -
- Advertisement -

“ಹನುಮಾನ್‌ ಚಾಲೀಸಾ ಪಠಿಸಬೇಕಿದ್ದರೆ ಪಠಿಸು…ಆದರೆ ದಾದಾಗಿರಿ ಮಾಡಿದರೆ ಅದನ್ನು ಹೇಗೆ ಒಡೆಯಬೇಕು ಎಂದು ನಮಗೆ ಗೊತ್ತು…ಶಿವಸೇನೆಗೆ ಸವಾಲೆಸೆದರೆ ಭೀಮಾ ರೂಪ ಮತ್ತು ಮಹಾರುದ್ರ ಏನು ಎಂಬುದನ್ನು ತೋರಿಸಿ ಕೊಡುತ್ತೇವೆ…ನಮ್ಮ ಹಿಂದುತ್ವ ಗದಾಧಾರಿ ಹನುಮಂತನಷ್ಟೇ ಬಲಿಷ್ಠ” ಎಂದು ಮಹಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಂಗಳವಾರದಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

“ಕಳೆದ ಕೆಲವು ದಿನಗಳಿಂದ ಅವರು (ಬಿಜೆಪಿ) ಶಿವಸೇನೆಯು ಹಿಂದುತ್ವವನ್ನು ತೊರೆದಿದೆ ಎಂದು ಕಿರುಚುತ್ತಿದ್ದಾರೆ. ಆದರೆ ನಾವು ಯಾವುದನ್ನು ಬಿಟ್ಟಿದ್ದೇವೆ? ಒಮ್ಮೆ ಹಾಕಲು ಮತ್ತು ಬಿಡಲು ಹಿಂದುತ್ವ ಅಂದರೆ ಪಂಚೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಿಂದುತ್ವದ ಬಗ್ಗೆ ನಮಗೆ ಉಪನ್ಯಾಸ ನೀಡುವವರು ಹಿಂದುತ್ವಕ್ಕಾಗಿ ಏನು ಮಾಡಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಮಸೀದಿಯಿಂದ ಬಲವಂತವಾಗಿ ಧ್ವನಿವರ್ಧಕ ತೆಗೆಯುವುದಿಲ್ಲ: ಸಿಎಂ ಬೊಮ್ಮಾಯಿ

“ಬಾಬರಿ ಮಸೀದಿಯನ್ನು ಕೆಡವಿದಾಗ, ನೀವು ನಿಮ್ಮ ಗುಂಡಿ ಹುಡಿಕೊಂಡು ಓಡಿಹೋದಿರಿ. ರಾಮ ಮಂದಿರವನ್ನು ನಿರ್ಮಿಸುವ ನಿರ್ಧಾರ ನಿಮ್ಮ ಸರ್ಕಾರದಿಂದ ಬಂದಿದ್ದಲ್ಲ, ಅದು ನ್ಯಾಯಾಲಯದಿಂದ ಬಂದಿದ್ದು. ಅದನ್ನು ನಿರ್ಮಿಸುತ್ತಿರುವಾಗ ನೀವು ಜೋಳಿಗೆಯೊಂದಿಗೆ ಜನರ ನಡುವೆ ಹೋಗಿದ್ದೀರಿ. ನಿಮ್ಮ ಹಿಂದುತ್ವ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ತೆರಳಿ ಶನಿವಾರ ಬಂಧನಕ್ಕೆ ಒಳಗಾದ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಿಜೆಪಿ ಬೆಂಬಲಿಸುತ್ತಿದೆ. ಸರ್ಕಾರವು ಅವರಿಬ್ಬರ ವಿರುದ್ಧ ದೇಶದ್ರೋಹ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಕರಣವನ್ನು ದಾಖಲಿಸಿದೆ.

ಧ್ವನಿವರ್ಧಕಗಳಲ್ಲಿ ಅಜಾನ್‌ ಕರೆ ನೀಡುವುದರ ವಿರುದ್ದದ ಮೇಲಿನ ರಾಜಕೀಯ ವಿವಾದವು ಅಣಬೆಗಳಂತೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಶತಮಾನದ ಕೋಮು ದಾಳಿಗಳು

ಇಬ್ಬರು ರಾಣಾಗಳ ವಿರುದ್ದ ಸರ್ಕಾರ ಕೈಗೊಂಡ ಕ್ರಮವನ್ನು ಬಾಂಬೆ ಹೈಕೋರ್ಟ್‌ ಬೆಂಬಲಿಸಿದ್ದು, “ಕಾನೂನು-ಸುವ್ಯವಸ್ಥೆ ಸಮಸ್ಯೆಯನ್ನು ಉಂಟುಮಾಡಬಹುದು ಎಂಬ ಆತಂಕವನ್ನು ಸರಿಯಾಗಿದೆ” ಎಂದು ಅದು ಹೇಳಿದೆ.

“ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಸ್ಥಳದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತೇನೆ ಎಂಬ ಘೋಷಣೆಯು ಇತರ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ಹೈಕೋರ್ಟ್ ಹೇಳಿದ್ದು, ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ನವನೀತ್ ರಾಣಾ ಅವರ ಮನವಿಯನ್ನು ತಿರಸ್ಕರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...