Homeಮುಖಪುಟಮಹಾರಾಷ್ಟ್ರ: ಒಪಿಎಸ್ ಜಾರಿಗೆ ಆಗ್ರಹಿಸಿ ಬೀದಿಗಿಳಿದ 17 ಲಕ್ಷ ಸರ್ಕಾರಿ ನೌಕರರು

ಮಹಾರಾಷ್ಟ್ರ: ಒಪಿಎಸ್ ಜಾರಿಗೆ ಆಗ್ರಹಿಸಿ ಬೀದಿಗಿಳಿದ 17 ಲಕ್ಷ ಸರ್ಕಾರಿ ನೌಕರರು

- Advertisement -
- Advertisement -

ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಆಗ್ರಹಿಸಿ ಮಹಾರಾಷ್ಟ್ರದ ಸುಮಾರು 17 ಲಕ್ಷ ಸರ್ಕಾರಿ ನೌಕರರು ಇಂದು (ಗುರುವಾರ) ಇಂದಿನಿಂದ ಮುಷ್ಕರ ಹಮ್ಮಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಅಧಿಕಾರಿಗಳು ಬುಧವಾರ ಸಂಜೆ ನೌಕರರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ರಾಜ್ಯಾದ್ಯಂತ ನೌಕರರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಒಪಿಎಸ್‌ಗೆ ಜಾರಿಗೆ ಆಗ್ರಹಿಸಿ ಮಹಾರಾಷ್ಟ್ರದ ಸರ್ಕಾರಿ ನೌಕರರು ಹಮ್ಮಿಕೊಂಡಿರುವ ಎರಡನೇ ಬೃಹತ್ ಮುಷ್ಕರ ಇದಾಗಿದೆ.

ನಾಗ್ಪುರದಲ್ಲಿ ಮಹಾರಾಷ್ಟ್ರ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಂದು ಆರನೇ ದಿನವಾಗಿದೆ. ಈ ಸಂದರ್ಭದಲ್ಲಿಯೇ ಲಕ್ಷಾಂತರ ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಛತ್ರಪತಿ ಸಂಭಾಜಿನಗರ, ಮುಂಬೈ, ಕೊಲ್ಲಾಪುರ, ನಾಗ್ಪುರ, ನಾಸಿಕ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿರುವುದು ಕಂಡು ಬಂದಿದೆ.

ರಾಜ್ಯ ಸರ್ಕಾರಿ, ಅರೆಸರ್ಕಾರಿ, ಶಿಕ್ಷಕ, ಶಿಕ್ಷಕೇತರ ಸಮನ್ವಯ ಸಮಿತಿಯು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆರೋಗ್ಯ ಇಲಾಖೆ ನೌಕರರೂ ಮುಷ್ಕರದಲ್ಲಿ ಪಾಲ್ಗೊಗೊಂಡಿರುವುದರಿಂದ ರಾಜ್ಯದಲ್ಲಿ ಆರೋಗ್ಯ ಸೇವೆ ವ್ಯತ್ಯಯವಾಗುವ ಆತಂಕ ಎದುರಾಗಿದೆ.

ನಾಸಿಕ್ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ಎಲ್ಲಾ ಗ್ರಾಮೀಣ ಆಸ್ಪತ್ರೆಗಳು, ಉಪಜಿಲ್ಲಾ ಆಸ್ಪತ್ರೆಗಳು, ಮಹಿಳಾ ಆಸ್ಪತ್ರೆ, ವಿಭಾಗೀಯ ರೆಫರಲ್ ಆಸ್ಪತ್ರೆ ನೌಕರರು ಮತ್ತು ಇತರ 4ನೇ ದರ್ಜೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : ಏನಿದು ಎನ್‌ಪಿಎಸ್‌, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read