Homeಅಂತರಾಷ್ಟ್ರೀಯಪೊಲೀಸರಿಂದ 17 ವರ್ಷದ ಬಾಲಕನ ಹತ್ಯೆ: ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು

ಪೊಲೀಸರಿಂದ 17 ವರ್ಷದ ಬಾಲಕನ ಹತ್ಯೆ: ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು

- Advertisement -
- Advertisement -

ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿ 17 ವರ್ಷದ ವಾಹನ ಚಾಲಕನನ್ನು ಟ್ರಾಫಿಕ್ ಪೊಲೀಸರು ಹತ್ಯೆಗೈದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಇದುವರೆಗೂ ಸುಮಾರು 667ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 200ಕ್ಕೂ ಅಧಿಕ ಪೊಲೀಸರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ನಹೆಲ್ ಎಂಬ 17 ವರ್ಷದ ಬಾಲಕನು ಓದುತ್ತಿರುವಾಗಲೇ ಆಹಾರ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಟ್ರಾಫಿಕ್ ಪೊಲೀಸರು ನಾಂತೇರ್‌ನಲ್ಲಿ ವಾಹನ ತಪಾಸಣೆ ವೇಳೆ ವಿನಾಕಾರಣ ಗುಂಡು ಹಾರಿಸಿ ಆತನನ್ನು ಕೊಲೆಗೈಯಲಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನೆಗಳು ದಾಖಲಾಗಿವೆ. ಪೊಲೀಸರು ಮತ್ತು ಪೊಲೀಸ್ ಕಚೇರಿಗಳ ಮೇಲೆ ಪಟಾಕಿಗಳನ್ನು ಹಚ್ಚಿ ಎಸೆಯಲಾಗಿದೆ. ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಯಾಗಿ ಪೊಲೀಸರು ಅಶ್ರವಾಯು ಸಿಡಿಸಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 40,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರುವಂತೆ ಮನವಿ ಮಾಡಿದ್ದಾರೆ. “17 ವರ್ಷದ ಬಾಲಕನ ಹತ್ಯೆ ಅನರೀಕ್ಷಿತ ಮತ್ತು ಅಕ್ಷಮ್ಯವಾದುದು. ಪೊಲೀಸರ ಈ ವರ್ತನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಪ್ರತಿಯಾಗಿ ನಾಗರೀಕರು ಶಾಂತಿ ಧಕ್ಕೆ ತರಬಾರದು” ಎಂದಿದ್ದಾರೆ.

ಫ್ರಾನ್ಸ್ ತನ್ನ ಪೋಲಿಸ್‌ನಲ್ಲಿ ಜನಾಂಗೀಯ ತಾರತಮ್ಯದ ಆಳವಾದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ, “ಉತ್ತರ ಆಫ್ರಿಕಾದ ಮೂಲದ 17 ವರ್ಷದ ಯುವಕನನ್ನು ಫ್ರಾನ್ಸ್‌ನಲ್ಲಿ ಪೊಲೀಸರು ಕೊಂದಿದ್ದರಿಂದ ನಾವು ಕಳವಳಗೊಂಡಿದ್ದೇವೆ … ಕಾನೂನು ಜಾರಿಯಲ್ಲಿನ ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಆಳವಾದ ಸಮಸ್ಯೆಗಳನ್ನು ದೇಶವು ಗಂಭೀರವಾಗಿ ಪರಿಹರಿಸಲು ಇದು ಸರಿಯಾದ ಸಂದರ್ಭವಾಗಿದೆ” ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಹಾಗೂ ರಾಷ್ಟ್ರೀಯ ಏಕತೆಯನ್ನು ಖಾತ್ರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಅದಕ್ಕಾಗಿ ದೇಶದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕರೆದ ತುರ್ತು ಕ್ಯಾಬಿನೆಟ್ ಸಭೆಯು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ ಎಂದು ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಹೇಳಿದ್ದಾರೆ.

ಮಧ್ಯ ಪ್ಯಾರಿಸ್‌ನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ನಾಂಟೆರ್ರೆಯ ವಿಯುಕ್ಸ್-ಪಾಂಟ್ ನೆರೆಹೊರೆಯಲ್ಲಿ ನಹೆಲ್ ತನ್ನ ತಾಯಿ ಮೌನಿಯಾ ಅವರೊಂದಿಗೆ ವಾಸಿಸುತ್ತಿದ್ದರು. 2021 ರಲ್ಲಿ ಲೈಸಿ ಲೂಯಿಸ್ ಬ್ಲೆರಿಯಟ್‌ನಲ್ಲಿ ಎಲೆಕ್ಟ್ರಿಕ್‌ಗೆ ಸಂಬಂಧಿಸಿದ ಕೋರ್ಸ್‌ಗೆ ಸೇರಿದ್ದರು. ಬಿಡುವಿನ ವೇಳೆಯಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...