Homeಮುಖಪುಟಬೆಲೆ ಏರಿಕೆ ವಿಚಾರ: ಅಚ್ಚೇ ದಿನ್ ಭರವಸೆ ನೀಡಿ ಜನರನ್ನು ವಂಚಿಸಿದ ಕೇಂದ್ರ; ಪ್ರಧಾನಿ ಮೋದಿಗೆ...

ಬೆಲೆ ಏರಿಕೆ ವಿಚಾರ: ಅಚ್ಚೇ ದಿನ್ ಭರವಸೆ ನೀಡಿ ಜನರನ್ನು ವಂಚಿಸಿದ ಕೇಂದ್ರ; ಪ್ರಧಾನಿ ಮೋದಿಗೆ ಖರ್ಗೆ ತರಾಟೆ

- Advertisement -
- Advertisement -

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಅಚ್ಚೇ ದಿನ್ ಎಂದು ಭರವಸೆ ನೀಡಿ ಕೇಂದ್ರ ಸರ್ಕಾರವು ಜನರನ್ನು ವಂಚಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ”ಕಳೆದ ಒಂಬತ್ತು ವರ್ಷಗಳಲ್ಲಿ ಜನ ಸಾಮಾನ್ಯರು ಹಣದುಬ್ಬರದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವಶ್ಯಕ ಆಹಾರ ವಸ್ತುಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ” ಎಂದು ಹೇಳಿದ್ದಾರೆ.

”ದೇಶದ ಜನರು ಈಗ ಜಾಗೃತರಾಗಿದ್ದಾರೆ. ಮೋದಿ ಸರ್ಕಾರವೇ ಹಣದುಬ್ಬರದ ನಿಜವಾದ ಪ್ರಾಯೋಜಕರು ಎಂಬುದನ್ನು ತಿಳಿದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಕಳೆದ 9 ವರ್ಷಗಳಿಂದ ಕೇವಲ ಬೆಲೆಯೇರಿಕೆಯ ಬೆಂಕಿಯಲ್ಲಿ ಸಾರ್ವಜನಿಕರ ತಟ್ಟೆ ಉರಿಯುತ್ತಿದೆ. ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಮತ್ತು ಸಾರ್ವಜನಿಕರ ಗಳಿಕೆಯಲ್ಲಿ ಬಿಜೆಪಿಯ ಲೂಟಿಯೇ ಮೇಲುಗೈ ಸಾಧಿಸಿದೆ. ಮೋದಿ ಸರ್ಕಾರದ ಸಚಿವರು ಬೆಲೆ ಏರಿಕೆಗೆ ಸಂಬಂಧಿಸಿದಂತೆ ದಿನಕ್ಕೊಂದು ಸಬೂಬು ನೀಡುತ್ತಾರೆ. ‘ಹಣದುಬ್ಬರ ಹೆಚ್ಚಳ ನಮಗೆ ಒಳಿತು ನೀಡುತ್ತದೆ’ ಮತ್ತು ‘ಮೋದಿ ಜೀ ಇದನ್ನು ದೂರದಷ್ಟಿ ಇಟ್ಟುಕೊಂಡು ಹೆಚ್ಚಳ ಮಾಡಿರುತ್ತಾರೆ’ ಎಂದರೆ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೆಲೆ ಏರಿಕೆಯ ನಿಜವಾದ ಲಾಭ ಪಡೆಯುವವರು ಮೋದಿ ಸರ್ಕಾರ ಮಾತ್ರವಾಗಿದೆ ಎಂದು ಟೀಕಿಸಿದ್ದಾರೆ.

ಅಕ್ಕಿ, ಗೋಧಿ, ಬೇಳೆ, ಈರುಳಿ, ಅಲೂಗಡ್ಡೆ, ಟೊಮೆಟೊ, ಹಾಲು ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪಟ್ಟಿಯನ್ನು ಖರ್ಗೆ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದ್ವೇಷ, ಹಿಂಸೆಯೆಂಬ ವಿಪತ್ತನ್ನು ಪ್ರೀತಿ ಮತ್ತು ಮಾತುಕತೆ ಮೂಲಕ ಮಾತ್ರ ಎದುರಿಸಬಹುದು: ಮಣಿಪುರ ಭೇಟಿ ಬಳಿಕ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read