Homeಮುಖಪುಟಗೋಧ್ರಾ ಗಲಭೆಯ 22 ವರ್ಷಗಳ ನಂತರ ಸಾಮರಸ್ಯಕ್ಕೆ ಸಾಕ್ಷಿಯಾದ ಗುಲ್ಬರ್ಗ್ ಸೊಸೈಟಿ

ಗೋಧ್ರಾ ಗಲಭೆಯ 22 ವರ್ಷಗಳ ನಂತರ ಸಾಮರಸ್ಯಕ್ಕೆ ಸಾಕ್ಷಿಯಾದ ಗುಲ್ಬರ್ಗ್ ಸೊಸೈಟಿ

- Advertisement -
- Advertisement -

2002ರ ಗೋಧ್ರಾ ನಂತರದ ಗಲಭೆಯಲ್ಲಿ 69 ಜನರ ಹತ್ಯೆ ಮೂಲಕ ಘೋರ ಗಲಭೆಗೆ ಸಾಕ್ಷಿಯಾಗಿದ್ದ  ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದು, ಇಪ್ಪತ್ತೆರಡು ವರ್ಷಗಳ ನಂತರ, ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಉಳಿದಿರುವ ಏಕೈಕ ಕುಟುಂಬ ವಿವಾಹಪೂರ್ವ ‘ಹಲ್ದಿ’ (ಹಳದಿ ಶಾಸ್ತ್ರ) ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮಕ್ಕೆ ಸ್ಥಳೀಯವಾಗಿ ವಾಸಿಸುತ್ತಿದ್ದ ಎಲ್ಲಾ ಸಮುದಾಯದ ಜನರಿಗೆ ಆಹ್ವಾನವನ್ನು ನೀಡಲಾಗಿದೆ.

ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ ಉಳಿದುಕೊಂಡಿರುವ ಏಕೈಕ ಕುಟಂಬ ಮನ್ಸೂರಿ ಅವರದ್ದು. ಅವರು ತಮ್ಮ 18 ವರ್ಷದ ಮಗಳು ಮಿಸ್ಬಾಳ ವಿವಾಹದ ಪೂರ್ವ ಸಮಾರಂಭವಾದ ಹಲ್ದಿಯನ್ನು ಆಚರಿಸಿದ್ದಾರೆ. ಸೋಮವಾರ ನಡೆದ ಸಮಾರಂಭದಲ್ಲಿ 2002ರ ಗಲಭೆಯಿಂದ ನಗರದ ವಿವಿಧೆಡೆ ಚದುರಿದ ಸಮಾಜದ ಬೆರಳೆಣಿಕೆಯಷ್ಟು ಜನರು  ಪಾಲ್ಗೊಂಡಿದ್ದರು.

ನಾನು ಎಲ್ಲರನ್ನು ಆಹ್ವಾನಿಸಿದ್ದೆ, ಹಿಂದೆ ಗುಲ್ಬರ್ಗ್‌ ಸೊಸೈಟಿಯಲ್ಲಿ ನೆರೆಹೊರೆಯವರಲ್ಲಿ ನಾಲ್ಕರಿಂದ ಐದು ಮಂದಿ ಮಾತ್ರ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ರಫೀಕ್ ಮನ್ಸುರಿ ಅವರು ತಿಳಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದ ಹಲವರು ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಅವರು ಹೇಳಿದ್ದಾರೆ.

ಗುಲ್ಬರ್ಗ್‌ ಸೊಸೈಟಿಯಲ್ಲಿ ಹಿಂಸಾಚಾರ ನಡೆದಾಗ ರಫೀಕ್ ಅವರಿಗೆ 30 ವರ್ಷ ವಯಸ್ಸಾಗಿತ್ತು. ಆ ಹಿಂಸಾಚಾರದಲ್ಲಿ ರಫೀಕ್ ಅವರು ಪತ್ನಿ ಮತ್ತು ಮಗನನ್ನು ಕಳೆದುಕೊಂಡಿದ್ದರು, ನಂತರ ಅವರು ಮಧ್ಯಪ್ರದೇಶದಲ್ಲಿ ತಸ್ಲೀಂ ಎನ್ನುವವರನ್ನು ಮದುವೆಯಾದರು. ಹಿಂಸಾಚಾರ ನಡೆದ ನಂತರದಲ್ಲಿ ಸೊಸೈಟಿಯಲ್ಲಿ ಇಂತಹ ಸಂಭ್ರಮದ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು ಎಂದು ರಫೀಕ್‌ ಹೇಳಿದ್ದಾರೆ.

ನಾನು ಇದೀಗ ಬರ್ವಾನಿಯಲ್ಲಿದ್ದೇನೆ ಆದರೆ ಅಹಮದಾಬಾದ್‌ನಲ್ಲಿ ಸೋಮವಾರದ ಆಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಲಭೆಯ ನಂತರ ಸಮಾಜವು ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ, ಎಲ್ಲರೂ ಸಂತೋಷಪಟ್ಟಿದ್ದಾರೆ ಎಂದು ಮನ್ಸೂರಿ ಹೇಳಿದ್ದಾರೆ.

ಗಲಭೆಯಲ್ಲಿ ಮನ್ಸೂರಿಯ ತಂದೆ ಕಸಮ್ ತನ್ನ 6 ಮಕ್ಕಳು ಸೇರಿದಂತೆ ಈ ಕುಟುಂಬದ 19 ಸದಸ್ಯರನ್ನು ಕಳೆದುಕೊಂಡಿದ್ದಾರೆ. ರಫೀಕ್ ತನ್ನ ಹೆಂಡತಿ ಮತ್ತು ಒಬ್ಬ ಮಗನನ್ನು ಕಳೆದುಕೊಂಡಿದ್ದರು.

ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 59 ಕರಸೇವಕರು ಪ್ರಯಾಣಿಸುತ್ತಿದ್ದ ರೈಲಿಗೆ ಗೋಧ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಿದ ಬಳಿಕ ಅಹಮದಾಬಾದ್ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ದಂಗೆಗಳು ಭುಗಿಲೆದ್ದವು. ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಕೋಮು ಘರ್ಷಣೆಯು ಅತ್ಯಂತ ಭೀಕರವಾಗಿದ್ದು, ಮಾಜಿ ಕಾಂಗ್ರೆಸ್ ಸಂಸದ ಅಹ್ಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಗುಂಪೊಂದು ಜೀವಂತವಾಗಿ ಸುಟ್ಟುಹಾಕಿತ್ತು. ಪ್ರಕರಣಕ್ಕೆ ಸಂಬಂಧಿಸಿ 2016ರಲ್ಲಿ ವಿಶೇಷ ವಿಚಾರಣಾ ನ್ಯಾಯಾಲಯವು 11 ಮಂದಿಗೆ ಹತ್ಯೆಗೆ ಸಂಬಂಧಿಸಿ ಶಿಕ್ಷೆ ವಿಧಿಸಿತ್ತು.

ಇದನ್ನು ಓದಿ:  ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡುವಂತೆ ರಷ್ಯಾದಿಂದ ಬಲವಂತ: ಭಾರತೀಯರಿಂದ ವಿಡಿಯೋ ರಿಲೀಸ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...