Homeಕರ್ನಾಟಕಬಿಬಿಎಂಪಿ ಅಧಿಕಾರಿಗಳಿಂದ ನಕಲಿ ಬಿಲ್ ಸೃಷ್ಟಿಸಿ 250 ಕೋಟಿ ರೂ. ಲೂಟಿ: ಡಿ.ಕೆ. ಸುರೇಶ್ ಆರೋಪ

ಬಿಬಿಎಂಪಿ ಅಧಿಕಾರಿಗಳಿಂದ ನಕಲಿ ಬಿಲ್ ಸೃಷ್ಟಿಸಿ 250 ಕೋಟಿ ರೂ. ಲೂಟಿ: ಡಿ.ಕೆ. ಸುರೇಶ್ ಆರೋಪ

ಇದರಲ್ಲಿ ಇಂಜಿನಿಯರ್‌ಗಳ ಪಾತ್ರವಿದೆ ಎಂದ ಸಂಸದ

- Advertisement -
- Advertisement -

ಬಿಬಿಎಂಪಿ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿಸಿ ನಗರದ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 250 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಸಂಸದ ಡಿ.ಕೆ. ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

“ಜನವರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಬಿಬಿಎಂಪಿ ಇಂಜಿನಿಯರ್‌ಗಳು ಹಣ ಲೂಟಿ ಮಾಡಿದ್ದಾರೆ. 130 ಕಾಮಗಾರಿಗಳ ಒಟ್ಟು 250 ಕೋಟಿ ರೂ. ನಕಲಿ ಬಿಲ್ ಪಡೆದಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಟೈನ್ಮೆಂಟ್ ಪ್ರದೇಶಗಳ ಸೀಲ್‌ಡೌನ್‌ಗೆ 20-25 ಕೋಟಿ ರೂ. ಖರ್ಚು ಮಾಡಿದ ಬಿಬಿಎಂಪಿ!

ಜನವರಿಯಲ್ಲಿ ಬಿಲ್ ಪಡೆದು ಈಗ ತರಾತುರಿಯಲ್ಲಿ ಕೆಲಸ ಮಾಡಿ ಮುಗಿಸಲು ಹೊರಟಿದ್ದಾರೆ. ಬಿಬಿಎಂಪಿ ಇಂಜಿನಿಯರ್‌ಗಳು ಈ ಕೆಲಸ ಮಾಡಿದ್ದಾರೆ, ಇದಕ್ಕೆ ಇಂಜಿನಿಯರ್‌ಗಳೇ ಜವಾಬ್ದಾರರು. ಮಾಜಿ ಶಾಸಕರಾದ ಮುನಿರತ್ನ ಅವರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಈ ಬಿಲ್‍ಗಳಿಗೆ ಬಿಬಿಎಂಪಿ ಇಂಜಿನಿಯರ್‌ಗಳೇ ಹೊಣೆ ಎಂದರು.

ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಲೂಟಿ ಹೊಡೆದಿದ್ದಾರೆ. ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಲ್ಲಿ ಇಂಜಿನಿಯರ್‌ಗಳ ಪಾತ್ರ ಇದೆ ಹೊರತು ಬೇರೆ ಯಾರ ಪಾತ್ರವೂ ಇಲ್ಲ ಎಂದು ಹೇಳಿದರು.

ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜನಾಥ್ ಪ್ರಸಾದ್, “ಸಂಸದ ಡಿ.ಕೆ. ಸುರೇಶ್ ನೀಡಿರುವ ದೂರನ್ನು ನಾವು ನೋಡಿಲ್ಲ, ದೂರನ್ನು ನೋಡಿದ ನಂತರ ತನಿಖೆ ಮಾಡಿ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಒಳಗೆ ಜನರಿದ್ದರೂ ಮನೆ ಬಾಗಿಲುಗಳನ್ನೇ ಸೀಲ್‌ಡೌನ್ ಮಾಡಿದ ಬಿಬಿಎಂಪಿ: ಜನಾಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಆಯುಕ್ತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...