Homeಮುಖಪುಟತೂಗು ಸೇತುವೆ ದುರಂತದ ವೇಳೆ ಮೊರ್ಬಿಗೆ ಮೋದಿ ಭೇಟಿ ನೀಡಲು ಖರ್ಚಾಗಿದ್ದು ₹ 30 ಕೋಟಿ:...

ತೂಗು ಸೇತುವೆ ದುರಂತದ ವೇಳೆ ಮೊರ್ಬಿಗೆ ಮೋದಿ ಭೇಟಿ ನೀಡಲು ಖರ್ಚಾಗಿದ್ದು ₹ 30 ಕೋಟಿ: ಟಿಎಂಸಿ ಆರೋಪ

- Advertisement -
- Advertisement -

ಗುಜರಾತ್‌ ತೂಗು ಸೇತುವೆ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಗಂಟೆಗಳ ಕಾಲ ಮೊರ್ಬಿಗೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ.

“ಈ ಕುರಿತು ಆರ್‌ಟಿಐ ಅಡಿ ಮಾಹಿತಿ ಬಹಿರಂಗವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

130ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಇತ್ತೀಚಿನ ಸೇತುವೆ ಕುಸಿತದ ದುರಂತದ ನಂತರ ಪ್ರಧಾನಿ ಮೋದಿಯವರು ಅಕ್ಟೋಬರ್ 30ರಂದು ಗುಜರಾತ್ ರಾಜ್ಯದ ಮೊರ್ಬಿ ನಗರಕ್ಕೆ ಭೇಟಿ ನೀಡಿದ್ದರು. ಅದಕ್ಕಾಗಿ 30 ಕೋಟಿ ರೂಪಾಯಿ ವೆಚ್ಚವಾಗಿದೆ. ಅದರಲ್ಲಿ 5.5 ಕೋಟಿ ರೂಪಾಯಿಗಳು ‘ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಮತ್ತು ಫೋಟೋಗ್ರಫಿ’ಗೆ ಖರ್ಚಾಗಿದೆ ಎಂದು ಗೋಖಲೆ ದೂರಿದ್ದಾರೆ.

ಮೋರ್ಬಿ ದುರಂತದ 135 ಸಂತ್ರಸ್ತರಿಗೆ ತಲಾ 4 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಆದರೆ ಪ್ರಧಾನ ಮೋದಿಯವರ ಭೇಟಿಗೆ ಹೆಚ್ಚಿನ ಖರ್ಚಾಗಿದೆ ಎಂದು ಹೋಲಿಕೆ ಮಾಡಿರುವ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

“ಮೋರ್ಬಿಗೆ ಮೋದಿಯವರ ಕೆಲವು ಗಂಟೆಗಳ ಭೇಟಿಗೆ ₹ 30 ಕೋಟಿ ವೆಚ್ಚವಾಗಿದೆ ಎಂದು ಆರ್‌ಟಿಐ ಬಹಿರಂಗಪಡಿಸುತ್ತದೆ. ಇದರಲ್ಲಿ ₹ 5.5 ಕೋಟಿ ಕೇವಲ ‘ಸ್ವಾಗತ, ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಫೋಟೋಗ್ರಫಿ’ಗಾಗಿ ಖರ್ಚಾಗಿದೆ” ಎಂದು ಗೋಖಲೆ ಟ್ವೀಟ್‌ ಮಾಡಿದ್ದು, ಪತ್ರಿಕಾ ತುಣುಕುಗಳನ್ನು ಲಗತ್ತಿಸಿದ್ದಾರೆ.

“ಮೃತಪಟ್ಟ 135 ಸಂತ್ರಸ್ತರಿಗೆ ತಲಾ ₹ 4 ಲಕ್ಷ ಪರಿಹಾರ, ಅಂದರೆ ₹ 5 ಕೋಟಿ ಸಿಕ್ಕಿದೆ. ಕೇವಲ ಮೋದಿಯವರ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಪಬ್ಲಿಕ್‌ ಪಿಆರ್‌‌ ಕೆಲಸಕ್ಕಾಗಿ 135 ಜನರ ಜೀವನಕ್ಕಿಂತ ಹೆಚ್ಚು ವೆಚ್ಚ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಗೋಖಲೆ ಅವರು ಗುಜರಾತಿ ಪತ್ರಿಕೆಯೊಂದರ ಕ್ಲಿಪ್ಪಿಂಗ್‌ಗಳೊಂದಿಗೆ ಟ್ವಿಟ್ಟರ್ ಪೋಸ್ಟ್‌ನಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ. ಆದರೆ ಸಾಕೇತ್‌ ಅವರ ಪ್ರತಿಪಾದನೆಯನ್ನು ಸರ್ಕಾರ ನಿರಾಕರಿಸಿದೆ.

ಈ ಕುರಿತು ಯಾವುದೇ ಆರ್‌ಟಿಐ ಮಾಹಿತಿಯನ್ನು ನೀಡಲಾಗಿಲ್ಲ. ಈ ಸುದ್ದಿಯು ಸುಳ್ಳು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿದೆ.

“ಈ ಪ್ರತಿಪಾದನೆ ನಕಲಿಯಾಗಿದೆ. ಅಂತಹ ಯಾವುದೇ ಆರ್‌ಟಿಐ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ” ಎಂದು ಪಿಐಬಿ ಸ್ಪಷ್ಟಪಡಿಸಿದೆ. ಆದರೆ ನಿಜಕ್ಕೂ ಎಷ್ಟು ಹಣ ಖರ್ಚಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.

ಗುಜರಾತ್‌ ಬಿಜೆಪಿ ಘಟಕವು ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. “ಇದು ಫೇಕ್ ನ್ಯೂಸ್. ಅಂತಹ ಯಾವುದೇ ಆರ್‌ಟಿಐ ಮಾಹಿತಿ ನೀಡಲಾಗಿಲ್ಲ. ಅಂತಹ ಯಾವುದೇ ಸುದ್ದಿ ಪ್ರಕಟವಾಗಿಲ್ಲ. ಇದು ಸೃಷ್ಟಿಸಲ್ಪಷ್ಟ ಸುದ್ದಿಯಾಗಿದೆ” ಎಂದು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...