Homeಕರ್ನಾಟಕಡಿ.6ಕ್ಕೆ ದಲಿತ ಸಾಂಸ್ಕೃತಿಕ ಪ್ರತಿರೋಧ: ಟ್ವಿಟರ್‌ನಲ್ಲಿ ಗಮನ ಸೆಳೆದ ಅಭಿಯಾನ

ಡಿ.6ಕ್ಕೆ ದಲಿತ ಸಾಂಸ್ಕೃತಿಕ ಪ್ರತಿರೋಧ: ಟ್ವಿಟರ್‌ನಲ್ಲಿ ಗಮನ ಸೆಳೆದ ಅಭಿಯಾನ

- Advertisement -
- Advertisement -

ಡಿಸೆಂಬರ್‌ 6ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’, ‘ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ’ದ ಭಾಗವಾಗಿ ಇಂದು ಟ್ವಿಟರ್‌ನಲ್ಲಿ ಅಭಿಯಾನ ನಡೆದಿದೆ.

#DalitResistance (ದಲಿತ ಪ್ರತಿರೋಧ), #DSS (ದಸಂಸ) ಎಂಬ ಹ್ಯಾಷ್‌ಟ್ಯಾಗ್‌ಗಳಲ್ಲಿ ನೂರಾರು ಟ್ವೀಟ್‌ಗಳನ್ನು ಮಾಡಲಾಗಿದೆ.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಮ್ಮಿಕೊಂಡಿರುವ ಸಮಾವೇಶವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗಳಾದ ರಮಾಬಾಯಿ ಆನಂದ್‌ ತೇಲ್ತುಂಬ್ಡೆಯವರು ಉದ್ಘಾಟಿಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಂಗಕರ್ಮಿ ಸಿ.ಬಸವಲಿಂಗಯ್ಯ ಚಾಲನೆ ನೀಡಲಿದ್ದಾರೆ. 12 ಗಂಟೆಗೆ ಸಮಾವೇಶ ಉದ್ಘಾಟನೆಯಾಗಲಿದ್ದು, ಹಿರಿಯ ದಲಿತ ಹೋರಾಟಗಾರರಾದ ಎನ್‌.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರಾದ ಇಂದೂಧರ ಹೊನ್ನಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಪ್ರಧಾನ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್.ಮರಿಸ್ವಾಮಿ, ಮಾವಳ್ಳಿ ಶಂಕರ್‌, ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜ್, ಡಾ.ಡಿ.ಜಿ.ಸಾಗರ್‌, ಲಕ್ಷ್ಮಿನಾರಾಯಣ ನಾಗವಾರ, ಅಣ್ಣಯ್ಯ, ಅರ್ಜುನ ಭದ್ರೆ, ಎನ್.ಮುನಿಸ್ವಾಮಿ, ಎಂ.ಸೋಮಶೇಖರ್‌, ಜಗಣಿ ಶಂಕರ್‌, ಎಸ್.ಆರ್‌.ಕೊಲ್ಲೂರು ಪಾಲ್ಗೊಳ್ಳದ್ದಾರೆ.

ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ, ರಾಮದೇವ ರಾಕೆ, ಕೆ.ರಾಮಯ್ಯ, ಶಿವಾಜಿ ಗಣೇಶನ್‌, ರುದ್ರಪ್ಪ ಹನಗವಾಡಿ, ಎಚ್.ಎಂ.ರುದ್ರಸ್ವಾಮಿ, ಲಕ್ಷ್ಮಿಪತಿ ಕೋಲಾರ, ಮಂಗ್ಳೂರು ವಿಜಯ, ಹುಲ್ಕೆರೆ ಮಹಾದೇವ, ಬಾಬು ಬಂಡಾರಿಗಲ್‌, ಎಚ್.ಜನಾರ್ದನ್‌ (ಜನ್ನಿ), ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ಸಿ.ಜಿ.ಶ್ರೀನಿವಾಸನ್, ಬಸವರಾಜ ನಾಯಕ, ಎಚ್.ಎನ್.ಅಣ್ಣಯ್ಯ, ಕುಪ್ಪೆ ನಾಗರಾಜ್, ಅನಂತ ನಾಯಕ್, ಎಂ.ಆರ್‌.ಬೇರಿ, ರಮೇಶ್ ಡಾಕುಳಿಕಿ, ಆದರ್ಶ್ ಯಲ್ಲಪ್ಪ, ಭಾರತಿ ರಾಜಣ್ಣ, ಇಂದಿರಾ ಕೃಷ್ಣಪ್ಪ, ಪುರುಷೋತ್ತಮ ದಾಸ್‌ ಸೇರಿದಂತೆ ಹಲವು ದಲಿತ ಹೋರಾಟಗಾರರು ಹಾಜರಿರಲಿದ್ದಾರೆ.

ದಲಿತ ಪ್ರತಿರೋಧ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಲವಾರು ಜನರು ಟ್ವೀಟರ್‌ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. “ಸ್ವಾತಂತ್ರ್ಯ ನಮ್ಮ ಹಕ್ಕು, ಸಮಾನತೆ ನಮ್ಮ ಅಗತ್ಯ, ಭ್ರಾತೃತ್ವ ನಮ್ಮ ಕನಸು” ಎಂದು ಲೇಖಾ ಅಡವಿ ಟ್ವೀಟ್ ಮಾಡಿದ್ದಾರೆ.

“ಜಾತಿ ಎಲ್ಲಿದೆ ಎನ್ನುತ್ತಲೇ ಅಸಮಾನತೆ ತೋರುವ ಫ್ಯೂಡಲ್‌‌ಗಳಿಂದ ಮತ್ತು ಜಾತಿ ಶ್ರೇಷ್ಠತೆಯ ಕಾಯಿಲೆಯಿಂದ ನರಳುತ್ತಿರುವವರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹೋರಾಟ ಅನಿವಾರ್ಯ. ಅದಕ್ಕಾಗಿಯೇ ಈ ಐಕ್ಯತೆ” ಎಂದು ಮುರುಳಿ ಮಾಲೂರು ಟ್ವೀಟ್ ಮಾಡಿದ್ದಾರೆ.

“ಸಿಂಹದಂತೆ ಸಿಡಿದು ಬನ್ನಿ ಹುಲಿಯಂತೆ ನೆಗೆದು ಬನ್ನಿ ಹೋರಾಟದ ಸಾಗರಕ್ಕೆ ನಾರಿಯರೇ ನಗುತ ಬನ್ನಿ” ಎಂದು ನಿಶಾ ಗೂಳೂರ್‌ ಟ್ವೀಟ್ ಮಾಡಿದ್ದಾರೆ.

“ಕರ್ನಾಟಕದಲ್ಲಿ ಶೇ 24 ರಿಂದ 30 ಇರುವ ದಲಿತ ಸಮುದಾಯದಿಂದ ಆದ ಮುಖ್ಯಮಂತ್ರಿಗಳ ಸಂಖ್ಯೆ ಎಷ್ಟು? ಸೊನ್ನೆ! ಇನ್ನು ಮುಂದಾದರೂ ದಲಿತರು ರಾಜಕೀಯವಾಗಿ ಎಚ್ಚರಗೊಳ್ಳಲಿ” ಎಂದು ಶ್ಯಾಮ್ ಎಂಬವರು ಮನವಿ ಮಾಡಿದ್ದಾರೆ.

“ತಳದಲ್ಲಿದ್ದವರು ನಾವು, ಬೂದಿಯಲೆದ್ದವರು, ಕತ್ತಲೆ ಚರಿತ್ರೆಯ ಬೆತ್ತಲೆ ಮಾಡುವ ಕನಸನು ಹೊತ್ತವರು ನಾವು, ಕನಸನು ಹೊತ್ತವರು” ಎಂದು ಗುಲಾಬ್ ಪಾಷಾ ಬರೆದಿದ್ದಾರೆ.

ಸಮಾವೇಶಕ್ಕೆ ಸಂಬಂಧಿಸಿದ ಹತ್ತಾರು ಪೋಸ್ಟರ್‌ಗಳು ಟ್ವಿಟರ್‌ನಲ್ಲಿ ಹರಿದಾಡಿವೆ. ಹೋರಾಟದ ಹಾಡುಗಳ ಸಾಲುಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.

“ಒಡೆದು ಹೋದ ದಲಿತ ಸಂಘಟನೆಗಳು ಕೋಮುವಾದಿಗಳಿಗೆ ಸುಲಭ ತುತ್ತುಗಳು. ಐಕ್ಯತೆ ಎಂಬುದು ಅಭಿಯಾನದ ಹೆಸರಲ್ಲ, ಅದು ಹೋರಾಟದ ನಂಬಿಕೆಯ ಮಾರ್ಗ” ಎಂದು ಬಹುತ್ವ ಕರ್ನಾಟಕ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಾವು ಮುಂದೆ ಮತ ಚಲಾಯಿಸುವುದರ ಮೂಲಕ ಕೋಮುವಾದದ ನಶೆಯಲ್ಲಿರುವ ಸರಕಾರವನ್ನು ಕಿತ್ತೊಗೆದು ಜಾತ್ಯಾತೀತ ಸರಕಾರದ ಭವ್ಯ ಭಾರತವನ್ನ ನಿರ್ಮಾಣ ಮಾಡೋಣ. ಎಲ್ಲರೂ ಭಾರತೀಯರಾಗೋಣ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...