Homeಮುಖಪುಟಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

- Advertisement -
- Advertisement -

ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ. ಎರಡು ತಿಂಗಳಿಗಿಂತ ಹೆಚ್ಚು ಕಾಲ ಪ್ರತಿಭಟನೆಗಳು ನಡೆದ ನಂತರ ಇರಾನ್ ಸರ್ಕಾರ ತನ್ನ ಮೊರಾಲಿಟಿ (ನೈತಿಕ) ಪೊಲೀಸ್ ಘಟಕಗಳನ್ನು ರದ್ದುಗೊಳಿಸಿದೆ.

ಇರಾನ್‌ನ ಪ್ರಾಸಿಕ್ಯೂಟರ್ ಜನರಲ್ ಮೊಹಮದ್ ಜಾಫರ್ ಮೊಂಟಜೆರಿ, “ಮೊರಾಲಿಟಿ ಪೊಲೀಸ್‌ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿರುವುದಾಗಿ ಶನಿವಾರ IRNA ವರದಿ ಪ್ರಕಟಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪೊಲೀಸ್ ಪಡೆಯ ಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ. “ನ್ಯಾಯಾಂಗವು ಸಮುದಾಯದ ಮಟ್ಟದಲ್ಲಿ ನಡವಳಿಕೆಯ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸುತ್ತದೆ” ಎಂದು ಮೊಂಟಜೆರಿ ಹೇಳಿರುವುದಾಗಿ ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.

ಇರಾನ್‌ನ ಪ್ರತಿಗಾಮಿ ನೀತಿಗಳು ಮತ್ತು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪ್ರತಿ-ಆಕ್ರಮಣಕಾರಿ ವಿಧಾನವನ್ನು ಅನುಸರಿಸುತ್ತಿರುವುದನ್ನು ವ್ಯಾಪಕವಾಗಿ ಖಂಡಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ.

ದೇಶದ ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಜನರನ್ನು ಬಂಧಿಸುವ ಕಾರ್ಯಕ್ಕೆ 2005 ರಲ್ಲಿ ಇರಾನ್‌ನ ಮೊರಾಲಿಟಿ ಪೊಲೀಸ್‌ ಗುಂಪನ್ನು ಸ್ಥಾಪಿಸಲಾಯಿತು. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆ ತೀವ್ರವಾಯಿತು. ಡ್ರೆಸ್ ಕೋಡ್ ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೊಳಗಾದ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.

1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ದಿಟ್ಟ ಸವಾಲುಗಳಲ್ಲಿ ಒಂದೆಂದು ಪರಿಗಣಿಸಲಾದ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಂದಾಗಿ ಇರಾನ್ ಗಮನ ಸೆಳೆಯಿತು. ಸೆಪ್ಟೆಂಬರ್‌ನಿಂದ ನಿರಂತರ ಹೋರಾಟಗಳು ನಡೆದವು. 22 ವರ್ಷದ ಕುರ್ದಿಶ್ ಮಹಿಳೆಯ ಸಾವು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿತು ಮತ್ತು ಪ್ರಪಂಚದಾದ್ಯಂತ ಬೆಂಬಲವನ್ನು ಪಡೆಯಿತು.

ತಲೆಗೆ ಹಾಕುವ ಸ್ಕಾರ್ಫ್‌ಗಳನ್ನು ಮಹಿಳೆಯರು ಪ್ರತಿಭಟನೆಯಲ್ಲಿ ಸುಟ್ಟು ಹಾಕಿದರು. ಕೂದಲುಗಳನ್ನು ಕತ್ತರಿಸಿ ಆಕ್ರೋಶ ಹೊರಹಾಕಿದರು. ಕಲಾವಿದರು ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಕೂಡ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.

ಅನಧಿಕೃತ ಅಂದಾಜಿನ ಪ್ರಕಾರ, ಪ್ರತಿಭಟನೆಗಳನ್ನು ನಿಗ್ರಹಿಸಲು ಇರಾನ್‌ನ ಮೊರಾಲಿಟಿ ಪೊಲೀಸರು ಪ್ರತಿ-ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡರು. ಹೀಗಾಗಿ ನೂರಾರು ಜನರ ಸಾವುಗಳು ಸಂಭವಿಸಿದವು. ನವೆಂಬರ್ 29ರಂದು ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಅಶಾಂತಿಯಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಜನರಲ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿರಿ: ಇರಾನ್: ವಸ್ತ್ರಸಂಹಿತೆ ವಿರುದ್ಧ ಮುಂದುವರಿದ ಹೋರಾಟ; 19 ಮಕ್ಕಳು ಸೇರಿ 185 ಮಂದಿ ಸಾವು- ವರದಿ

ಇರಾನ್ ತನ್ನ ಪ್ರತಿಭಟನಾಕಾರರನ್ನು ಕ್ರೂರವಾಗಿ ನಡೆಸಿಕೊಂಡಿರುವುದು ವಿಶ್ವದ ನಾಯಕರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಟೀಕೆಗೆ ಗುರಿಯಾಗಿದೆ. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸದಂತೆ ವಿಶ್ವಸಂಸ್ಥೆಯ ತಜ್ಞರು ಕರೆ ನೀಡಿದ್ದಾರೆ.

ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳು ಅಶಾಂತಿಗೆ ಪ್ರೋತ್ಸಾಹಿಸುತ್ತಿವೆ ಎಂದು ಇರಾನ್ ಆರೋಪಿಸಿದೆ. ಜನಾಂಗೀಯ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಪ್ರತಿಭಟನಾಕಾರರು ಪ್ರತ್ಯೇಕತಾವಾದಿ ಗುಂಪುಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇರಾನ್ ಮಹಿಳೆಯರ ಹೋರಾಟ ನಿಜಕ್ಕೂ ಮೈನವಿರೇಳಿಸುವ ಹೋರಾಟ! ಅವರ ಜಯ, ಖುಷಿ ತಂದಿದೆ. ಇದು, ನಮ್ಮಲ್ಲಿ ಇರುವ ನೈತಿಕ ಪೋಲೀಸ್ ಗಿರಿಯ ಅಂತ್ಯಕ್ಕೆ ದಾರಿ ದೀಪ ಆಗಬಹುದೆ?!?

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...