Homeಕರ್ನಾಟಕದೇವಾಲಯವನ್ನೇ ಧಿಕ್ಕರಿಸಿ: ಜಾತಿ ದೌರ್ಜನ್ಯಕ್ಕೆ ಒಳಗಾದ ಹರಿಹರಪುರ ದಲಿತರಿಗೆ ಕೃಷ್ಣಮೂರ್ತಿ ಮನವಿ

ದೇವಾಲಯವನ್ನೇ ಧಿಕ್ಕರಿಸಿ: ಜಾತಿ ದೌರ್ಜನ್ಯಕ್ಕೆ ಒಳಗಾದ ಹರಿಹರಪುರ ದಲಿತರಿಗೆ ಕೃಷ್ಣಮೂರ್ತಿ ಮನವಿ

- Advertisement -
- Advertisement -

“ದೇವಾಲಯ ಪ್ರವೇಶದ ವಿಚಾರವಾಗಿ ನಿಮ್ಮ ಮೇಲೆ ನಡೆದಿರುವ ಈ ಘಟನೆಗೆ ನೀವು ದೇವಸ್ಥಾನವನ್ನೇ ಧಿಕ್ಕರಿಸುವ ಮೂಲಕ ಉತ್ತರಿಸಬೇಕು” ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಇತ್ತೀಚೆಗೆ ಸವರ್ಣೀಯರಿಂದ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂತ್ವಾನ ಹೇಳಲು ಗ್ರಾಮಕ್ಕೆ ತೆರಳಿದ್ದ ಅವರು ಸಂತ್ರಸ್ತರೊಂದಿಗೆ ಮಾತನಾಡಿದರು.

“ನಿಮಗೆ ಬಾಬಾ ಸಾಹೇಬರ ಸಂವಿಧಾನವು ಶಿಕ್ಷಣ , ಮೀಸಲಾತಿ , ಉದ್ಯೋಗ , ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದೆ ಹೊರತು ಯಾವ ದೇವಾಲಯಗಳಾಗಲಿ, ದೇವರಾಗಲಿ ಅಲ್ಲ” ಎಂದು ತಿಳಿಸಿದರು.

ಈ ಸಾಮಾಜಿಕ ವ್ಯವಸ್ಥೆಯಲ್ಲಿ ಸವರ್ಣಿಯರು ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ. ಹಾಗಾಗಿ ನಾವೇ ಮೊದಲು ಬದಲಾಗಬೇಕು. ಅಂತಿಮವಾಗಿ ನಾವು ಸ್ವ ಉದ್ಯೋಗದ ಮೂಲಕ ಸ್ವಾಭಿಮಾನ ಮೆರೆದು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕು ಎಂದ ಅವರು, ಸಂತ್ರಸ್ತರಿಗೆ ಕಾನೂನಾತ್ಮಕ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಚಲುವರಾಜು , ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ , ತಾಲ್ಲೂಕು ಉಸ್ತುವಾರಿ ಗೋವಿಂದರಾಜು , ತಾಲ್ಲೂಕು ಅಧ್ಯಕ್ಷರಾದ ಬಸ್ತಿಪ್ರದೀಪ್ , ಪ್ರಧಾನ ಕಾರ್ಯದರ್ಶಿ ಗಂಗಾಧರ್ , ಹಾಜರಿದ್ದರು.

ಇದನ್ನೂ ಓದಿರಿ: ಹರಿಹರಪುರ ಅಟ್ರಾಸಿಟಿ ಪ್ರಕರಣ: ದಲಿತ ಮುಖಂಡರನ್ನು ಬಳಸಿ ಪ್ರಕರಣ ಮುಚ್ಚಲು ಯತ್ನ?

ಏನಿದು ಪ್ರಕರಣ?

ಹನುಮ ಜಯಂತಿ ಪ್ರಯುಕ್ತ ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ನಡೆದಿತ್ತು.

ಡಿ.16ರಂದು ಘಟನೆ ನಡೆದಿದ್ದು, ಕೆ.ಆರ್‌.ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ನಿರಂಜನ್‌ ದೂರು ಸ್ವೀಕರಿಸಲು ನಿರಾಕರಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಲ್ಲಿ ದಲಿತರು ನೋವು ತೋಡಿಕೊಂಡಿದ್ದು, 27 ಮಂದಿಯ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

“ನಿಮ್ಮಿಂದ ದೇವಸ್ಥಾನ ಮಲಿನಗೊಂಡಿದೆ. ನಿಮ್ಮಂಥ ಜನರನ್ನು ಭೂಮಿ ಮೇಲೆ ಇರದಂತೆ ಸುಟ್ಟು ಹಾಕುತ್ತೇವೆ ಎಂದು ಡಿ.16ರ ರಾತ್ರಿ 11.30ರ ಸಮಯದಲ್ಲಿ ಸುಮಾರು 50-60 ಜನ ಸವರ್ಣೀಯರು ಮಾರಕಾಸ್ತ್ರಗಳಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಾದ ದೊಣ್ಣೆ, ಕೊಡಲಿ, ಪಂಚ್‌, ಕಲ್ಲು ಮತ್ತು ಇಟ್ಟಿಗೆಗಳೊಂದಿಗೆ ದಲಿತ ಕಾಲೋನಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಅಂಗವಿಕಲ ವ್ಯಕ್ತಿ ನಂಜಯ್ಯ ಎಂಬುವವರ ಮೇಲೆಯೂ ದಾಳಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ” ಎಂದು ದಲಿತರು ದೂರು ನೀಡಿದ್ದರು.

ಘಟನೆಯಲ್ಲಿ ಗಾಯಗೊಂಡ ದಲಿತ ಯುವಕರಾದ ದರ್ಶನ್, ಸುನಿಲ್‌, ಲೋಹಿತ್‌, ಅಭಿಷೇಕ್‌, ವಿನಯ್‌, ಸಂಜಯ್‌, ಚಲವರಾಜು, ಭಾಗ್ಯಮ್ಮ, ಕುಮಾರ, ರಂಜಮ್ಮ, ಶೋಭಾ, ನಂಜಯ್ಯ ಅವರು ನೀಡಿದ ದೂರಿನ ಅನ್ವಯ 27 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿಗಳು: ಮಂಜುನಾಥ್‌ (ತಂದೆ: ತಮ್ಮೇಗೌಡ), ಶ್ರೀಧರ (ನಾಗೇಗೌಡ), ಸಂತೋಷ್ (ಕೃಷ್ಣೇಗೌಡ), ಶ್ರೀನಿವಾಸ ಎಚ್‌.ಟಿ. (ತಿಮ್ಮೇಗೌಡ), ರಂಜಿತ್‌ (ನಾರಾಯಣಗೌಡ), ಸತೀಶ (ರಾಮೇಗೌಡ), ಸ್ವಾಮಿ (ಸಹದೇವ), ಮುತ್ತು (ನಾರಾಯಣ), ರಜಿತ್‌ ಅಲಿಯಾಸ್ ಮಿಲ್ಟ್ರಿ (ನಾರಾಯಣಗೌಡ), ಮಂಜುನಾಥ (ತಮ್ಮೇಗೌಡ), ಮೋಹನ್ (ನಂಜೇಗೌಡ), ಮಂಜ (ಜಿಂಕೆ ಚಲುವಯ್ಯ), ಹರೀಶ ಮಡಗಿನಕುಡಿ, ವೆಂಕಟೇಶ್‌ ಹರಿಹರಪುರ, ರಾಘು (ವೆಂಕಟೇಶ್‌), ರವಿ ಅಲಿಯಾಸ್ ಚಡ್ಡಿ (ಮಂಜೇಗೌಡ), ಮಂಜ (ಜವರೇಗೌಡ), ಸುರೇಶ (ಕರಿಯಪ್ಪ), ಗುಂಡೂ (ವೆಂಕಟಾಚಲ), ಬಾನುಪ್ರಕಾಶ್ (ಗಂಗಾಧರ್‌), ಶಿವಕುಮಾರ (ಶ್ರೀನಿವಾಸ್), ದರ್ಶನ್‌ ಕುರೇನಹಳ್ಳಿ, ದೀಪು (ಶಂಕರ್‌ ಅಲಿಯಾಸ್‌ ರೇಷ್ಮೇ ಇಲಾಖೆ), ಮೋಹನ (ಶ್ರೀನಿವಾಸ್‌), ಪ್ರದೀಪ್ (ವೆಂಕಟೇಶ್), ಜಯಂತ್‌ (ಡಯಟ್ ಜಯರಾಮ್‌), ಗೌತಮ್ಮ ಅಲಿಯಾಸ್ ಕುಳ್ಳಯ್ಯ.


ಇದನ್ನೂ ಓದಿರಿ: ನೆಲಮಂಗಲ: ತಮಟೆ ಬಾರಿಸಿದ್ದಕ್ಕೆ ದಲಿತನಿಗೆ ಥಳಿತ; ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಮಾನವೀಯ ಹಿಂದೂ ಧರ್ಮದ ರಕ್ಷಣೆಗಾಗಿ “ಮತಾಂತರ ವಿರೋಧಿ ಕಾನೂನನ್ನು” ಈ ಸರ್ಕಾರ ಜಾರಿ ಮಾಡಿದ್ದು ಇದನ್ನು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ರಕ್ಷಣೆಗಾಗಿ ಎಲ್ಲರೂ ವಿರೋಧಿಸಬೇಕಾಗಿದೆ

  2. ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿರುವಂತೆ ತನಗೆ ಆಪ್ತವೆನಿಸುವ ಧರ್ಮವನ್ನು ಅನುಸರಿಸಲು ಅವಕಾಶ ಇದೆ. ಹೀಗಿರುವಾಗ ಮತಾಂತರ ಕಾಯ್ದೆ ತರುವ ಪ್ರಮೇಯವಾದರೂ ಏನಿದೆ?
    ತನ್ನ ಮೂಲ ಧರ್ಮ ತೊರೆದು ಬೇರೆ ಧರ್ಮಕ್ಕೆ ಮತಾಂತರ ಹೋಗಲು ಬಯಸುವುದಕ್ಕೆ ಕಾರಣವೇನು? ಮೂಲ ಧರ್ಮದಲ್ಲಿ ತಾನು ಎದುರಿಸಬಹುದಾದ ಸಾಮಾಜಿಕ, ಆರ್ಥಿಕವಾಗಿ ಸಂಕಠಗಳು, ಮೇಲ್ವರ್ಗದ ದೌರ್ಜನ್ಯ, ಬಹಿಷ್ಕಾರ ಮುಂತಾದ ಕಾರಣಗಳು ಬೇರೆ ಧರ್ಮವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಅದರ ಸಂಕಟವನ್ನು ಅನುಭವಿಸಿದವರಿಗೆ ಅರಿವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚಿಗಷ್ಟೇ ಮಂಡ್ಯದ ಕೆ. ಆರ್. ಪೇಟೆಯಲ್ಲಿ ನಡೆದ ಘಟನೆ.

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...