Homeಮುಖಪುಟಪಾಕ್-ಬಾಂಗ್ಲಾ ಕ್ರಿಕೆಟ್‌ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಾಟ: ನಾಲ್ವರ ಬಂಧನ

ಪಾಕ್-ಬಾಂಗ್ಲಾ ಕ್ರಿಕೆಟ್‌ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಾಟ: ನಾಲ್ವರ ಬಂಧನ

- Advertisement -
- Advertisement -

ಕೋಲ್ಕತ್ತಾದ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ-ಬಾಂಗ್ಲಾದೇಶ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜವನ್ನು ಹಾರಾಟ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತ ನಾಲ್ವರಲ್ಲಿ ಇಬ್ಬರು ಜಾರ್ಖಂಡ್‌ನ ನಿವಾಸಿಗಳಾಗಿದ್ದರೆ, ಇನ್ನಿಬ್ಬರು ಕೋಲ್ಕತ್ತಾದ ಎಕ್ಬಾಲ್‌ಪೋರ್ ಮತ್ತು ಹೌರಾದಿಂದ ಬಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಕೆಟ್‌ ಮೈದಾನದ ಗೇಟ್ ಸಂಖ್ಯೆ 6ರ ಬಳಿ ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದ್ದಕ್ಕಾಗಿ ಇಬ್ಬರನ್ನು ಮತ್ತು ಇತರ ಇಬ್ಬರನ್ನು ಬ್ಲಾಕ್ G1 ನಲ್ಲಿ ಧ್ವಜ ಹಾರಾಟ ನಡೆಸಿದ್ದಕ್ಕೆ ಬಂಧಿಸಲಾಗಿದೆ. ಧ್ವಜ ಹಾರಾಟದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೋರ್ವರು ಪಿಟಿಐಗೆ ತಿಳಿಸಿದ್ದಾರೆ.

ಮೈದಾನ ಪೊಲೀಸ್ ಠಾಣೆಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಮೊದಲಿಗೆ ಪೋಸ್ಟಿಂಗ್‌ನಲ್ಲಿದ್ದ ಪೊಲೀಸರಿಗೆ ಪ್ರತಿಭಟನಾಕಾರರು ಏನು ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದ ವೇಳೆ ಅವರನ್ನು ಬಂಧಿಸಲಾಯಿತು. ಆದರೆ ಅವರು ಯಾವುದೇ ಘೋಷಣೆಯನ್ನು ಕೂಗಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

20ರ ಹರೆಯದವರಾದ ನಾಲ್ವರು ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಪ್ರತಿಭಟಿಸುತ್ತಿದ್ದರು ಹಾಗೂ ಅವರು ಪ್ರತಿಭಟನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುವ ಸ್ಥಳವನ್ನು ಆಯ್ದುಕೊಂಡಿದ್ದರು ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ಹೇಳಿವೆ.

ಇದನ್ನು ಓದಿ: ಮಹಾರಾಷ್ಟ್ರ: ಸರ್ವಪಕ್ಷ ಸಭೆಯ ನಿರ್ಣಯ ತಿರಸ್ಕರಿಸಿದ ಮನೋಜ್ ಪಾಟೀಲ್; ಉಪವಾಸ ಸತ್ಯಾಗ್ರಹ ನಿಲ್ಲಿಸಲು ನಿರಾಕರಣೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read