Homeಕರೋನಾ ತಲ್ಲಣಕೊರೊನಾ 4 ಲಕ್ಷ; ದೇಶದಲ್ಲಿ ದೈನಂದಿನ ಅತೀ ಹೆಚ್ಚು ಪ್ರಕರಣ ವರದಿ

ಕೊರೊನಾ 4 ಲಕ್ಷ; ದೇಶದಲ್ಲಿ ದೈನಂದಿನ ಅತೀ ಹೆಚ್ಚು ಪ್ರಕರಣ ವರದಿ

- Advertisement -
- Advertisement -

ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ಇದು ಇದುವರೆಗಿನ ಅತ್ಯಂತ ಹೆಚ್ಚಿನ ದೈನಂದಿನ ಕೊರೊನಾ ಪ್ರಕರಣಗಳ ವರದಿಯಾಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಮೊದಲ ಬಾರಿಗೆ ಒಟ್ಟು ಸೋಂಕಿತರ ಸಂಖ್ಯೆ 1.9 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಹೊಸದಾಗಿ 4,01,993 ಪ್ರಕರಣಗಳೊಂದಿಗೆ, ದೇಶದ ಕೊರೊನಾ ಸಂಖ್ಯೆ 1,91,64,969 ಕ್ಕೆ ಏರಿದೆ.

ಗುರುವಾರ ಮೂವತ್ತು ಲಕ್ಷ ಗಡಿ ದಾಟಿದ ಸಕ್ರಿಯ ಸೋಂಕಿತ ಪ್ರಕರಣಗಳು ಸಹ 98,482 ರಷ್ಟು ಏರಿಕೆಯಾಗಿದೆ ಮತ್ತು ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 32,68,710 ರಷ್ಟಾಗಿದೆ.

ಇದನ್ನೂ ಓದಿ: ‘ಸಂಪೂರ್ಣ ವೈಫಲ್ಯ’ – ಕೊರೊನಾ ಪರಿಸ್ಥಿತಿಯ ಬಗ್ಗೆ ದೆಹಲಿ ಹೈಕೋರ್ಟ್

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,523 ರೋಗಿಗಳು ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 2,11,853 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 2,99,988 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ 15,684,406 ಜನರು ವೈರಲ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ಬೆಳಿಗ್ಗೆ 8 ಗಂಟೆಗೆ ತೋರಿಸಿದೆ. ಇದರೊಂದಿಗೆ, ದೇಶದ ಚೇತರಿಕೆ ದರವು 81.84% ರಷ್ಟಾಗಿದೆ.

ಏಪ್ರಿಲ್ 30 ರವರೆಗೆ 28,83,37,385 ಜನರ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶನಿವಾರ ತಿಳಿಸಿದೆ. ಈ ಪೈಕಿ 19,45,299 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಯಿತು.

ಅತಿ ಹೆಚ್ಚು ಸೋಂಕುಗಳಿಗೆ ಕಾರಣವಾದ 10 ಕೇಂದ್ರಗಳನ್ನು ಆರೋಗ್ಯ ಸಚಿವಾಲಯ ಗುರುತಿಸಿದೆ. ಇವುಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಗುಜರಾತ್, ಚತ್ತೀಸ್‌ಗಡ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿವೆ.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...