Homeಮುಖಪುಟಭಾರೀ ಮಳೆಯಿಂದಾಗಿ 6 ಸಾವು: ಇದು ಗುಜರಾತ್ ಮಾಡಲ್ ಎಂದ ನೆಟ್ಟಿಗರು

ಭಾರೀ ಮಳೆಯಿಂದಾಗಿ 6 ಸಾವು: ಇದು ಗುಜರಾತ್ ಮಾಡಲ್ ಎಂದ ನೆಟ್ಟಿಗರು

- Advertisement -
- Advertisement -

ಗುಜರಾತ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್‌ಕೋಟ್‌ನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ಸಿಲುಕಿ ಒಂದು ದಿನದಲ್ಲಿ 6 ಜನರು ಸಾವನಪ್ಪಿದ್ದಾರೆ. ಮುಂದಿನ 5 ದಿನಗಳು ಮಳೆಯಾಗುವ ಸಂಭವವಿದ್ದು, ತಗ್ಗು ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಎಚ್ಚರದಿಂದಿರುವಂತೆ ಅಲರ್ಟ್ ಹೊರಡಿಸಲಾಗಿದೆ.

ಜೂನ್ 1 ರಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದ್ದು, ಒಟ್ಟು 63 ಜನರು ಸಾವನಪ್ಪಿದ್ದಾರೆ. 9000 ಜನರನ್ನು ಸ್ಥಳಾಂತರಿಸಿದ್ದು, 468 ಜನರನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧೀಕಾರ ಹೇಳಿದೆ.

ಅಹಮದಾಬಾದ್ ನಗರದಲ್ಲಿ ಭಾನುವಾರ ರಾತ್ರಿ 219 ಮಿಮೀ ಮಳೆಯಾಗಿದೆ. ಇದರಿಂದಾಗಿ ಅನೇಕ ವಸತಿ ಪ್ರದೇಶಗಳಲ್ಲಿ ನೀರು ನಿಂತಿದೆ ಮತ್ತು ಅಂಡರ್‌ಪಾಸ್‌ಗಳು ಮತ್ತು ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ. ಸೋಮವಾರ ನಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಗುಜರಾತ್‌ನ ಹಲವು ನಗರಗಳು ಭಾರೀ ಮಳೆಗೆ ತತ್ತರಿಸಿಹೋಗಿವೆ. ಅದರ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ಹರಿದಾಡುತ್ತಿವೆ. ಆ ಬೆನ್ನಲ್ಲೆ ಇದೇ ಗುಜರಾತ್ ಮಾಡೆಲ್ ಎಂಬ ವ್ಯಂಗ್ಯದ ಟೀಕೆಗಳು ಕೇಳಿಬಂದಿವೆ.

ಸುಪ್ರೀಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ್, ಪತ್ರಕರ್ತ ವಿನೋದ್ ಕಪ್ರಿ ಸೇರಿದಂತೆ ಹಲವು ಭಾರೀ ಮಳೆಗೆ ನಗರಗಳು ಮುಳುಗಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಇದು ಗುಜರಾತ್ ಮಾಡೆಲ್ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಲಾಂಛನಕ್ಕೆ ಅವಮಾನ: ಸಿಂಹದ ಆಕೃತಿ ವಿರೂಪ- ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...