Homeಮುಖಪುಟಉತ್ತರಪ್ರದೇಶ: 65ರ ಹರೆಯದ ವೃದ್ಧನಿಗೆ ಥಳಿಸಿ ಹತ್ಯೆ

ಉತ್ತರಪ್ರದೇಶ: 65ರ ಹರೆಯದ ವೃದ್ಧನಿಗೆ ಥಳಿಸಿ ಹತ್ಯೆ

- Advertisement -
- Advertisement -

ಉತ್ತರಪ್ರದೇಶದ ಡಿಯೋರಿಯಾದಲ್ಲಿ 65 ವರ್ಷದ ವೃದ್ಧನನ್ನು ಥಳಿಸಿ ಹತ್ಯೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ  ಐವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದಲ್ಲಿ 65 ವರ್ಷದ ವೃದ್ಧನಿಗೆ ಹೊಡೆದು ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಅವರ ಮಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ನಾಗರೌಲಿ ಗ್ರಾಮದಲ್ಲಿ ಪ್ರಾಶುರಾಮ್ ಅವರಿಗೆ ಕೆಲ ಜನರ ಜೊತೆ ವೈಷಮ್ಯವಿತ್ತು. ಇದೇ ವೈಷಮ್ಯ ಮುಂದುವರಿದ ಭಾಗವಾಗಿ ಜಗಳವಾಗಿ ಪ್ರಾಶುರಾಮ್ ಮತ್ತು ಅವರ 22ರ ಹರೆಯದ ಮಗನ ಮೇಲೆ ಗುಂಪು ಹಲ್ಲೆ ಮಾಡಿದೆ ಎಂದು ಸರ್ಕಲ್ ಆಫೀಸರ್ ಜಿಲಾಜೀತ್ ಸಿಂಗ್ ಹೇಳಿದ್ದಾರೆ.

ಗುಂಪು ಹಲ್ಲೆಯಿಂದ ಪರಶುರಾಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಮಗ ಕ್ರಿಶನ್ ಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಲ್ಲದೆ ಪರಶುರಾಮ್ ಅವರ ಇನ್ನೊಬ್ಬ ಮಗ ರವಿಶಂಕರ್ ಮತ್ತು ಪುತ್ರಿಯರಾದ ಪಿಂಕಿ ಮತ್ತು ರಿಂಕಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸರ್ಕಲ್ ಆಫೀಸರ್ ಜಿಲಾಜೀತ್ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಶಿವಮೊಗ್ಗ: ಮುಸ್ಲಿಂ ವಿದ್ಯಾರ್ಥಿಗಳಿಗೆ  ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಶಿಕ್ಷಕಿಯ ವರ್ಗಾವಣೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...